Asianet Suvarna News Asianet Suvarna News

Nora at Goa: ಗುರು ರಾಂಧವ ಜೊತೆ ಗೋವಾ ಬೀಚ್‌ನಲ್ಲಿ ದಿಲ್‌ಬರ್ ಹುಡುಗಿ..! ಡೇಟಿಂಗ್ ?

Goa vacation: ಬಾಲಿವುಡ್ ನಟಿ, ಡ್ಯಾನ್ಸರ್ ನೋರಾ ಫತೇಹಿ ಗುರು ರಾಂಧವ ಜೊತೆ ಗೋವಾ ಬೀಚ್‌ನಲ್ಲಿದ್ದಾರೆ. ಹೌದು. ಬಾಲಿವುಡ್‌ನ(Bollywood) ಟ್ಯಾಲೆಂಟೆಡ್ ಡ್ಯಾನ್ಸರ್ ಪೇಮಸ್ ರ‍್ಯಾಪರ್ ಜೊತೆ ಎಂಜಾಯ್ ಮಾಡ್ತಿದ್ದಾರೆ. ಡೇಟ್ ಮಾಡ್ತಿದ್ದಾರಾ ?

Nora Fatehi and Guru Randhawa enjoy beach time together in Goa dpl
Author
Bangalore, First Published Dec 12, 2021, 11:35 AM IST
  • Facebook
  • Twitter
  • Whatsapp

ಇದು ಅಧಿಕೃತವಾಗಿ ಇಡೀ ಬಾಲಿವುಡ್ ಉದ್ಯಮಕ್ಕೆ ಅತ್ಯಂತ ರೋಮ್ಯಾಂಟಿಕ್ ಸಮಯವಾಗಿದೆ. ಇತ್ತೀಚಿನ ದಿನಗಳಲ್ಲಿ, ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಪ್ರಮುಖ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಜೀವನದಲ್ಲಿ ಸಂಪೂರ್ಣ ಹೊಸ ಪ್ರೀತಿಯ ಅಧ್ಯಾಯವನ್ನು ಪ್ರಾರಂಭಿಸುವುದನ್ನು ಅಭಿಮಾನಿಗಳು ನೋಡಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಾಗಲು ಹೊರಟಿದ್ದಾರೆ. ಅಂತೂ ಬಾಲಿವುಡ್ ಚಂದದ ಹಿರೋಯಿನ್‌ಗಳೆಲ್ಲರೂ ಫ್ಯಾಮಿಲಿ ಲೈಫ್ ಶುರು ಮಾಡುತ್ತಿದ್ದಾರೆ. ಇದರ ಮಧ್ಯೆ, ಅಭಿಮಾನಿಗಳು ಗೋವಾದಲ್ಲಿ ಮತ್ತೊಂದು ಪ್ರಣಯ ಜೋಡಿಗಳನ್ನು ಗುರುತಿಸಿದ್ದಾರೆ. ಹೊಸ ಜೋಡಿ ಯಾರು ಎಂದು ಆಶ್ಚರ್ಯ ಪಡುತ್ತಿದ್ದೀರಾ?

ನೋರಾ ಫತೇಹಿ ಮತ್ತು ಗುರು ರಾಂಧವಾ ಅವರು ಸೋಷಿಯಲ್ ಮೀಡಿಯಾದಲ್ಲಿ ಥ್ರಿಲ್ ಮೂಡಿಸಿದ್ದಾರೆ. ಇಬ್ಬರೂ ಒಟ್ಟಿಗೆ ಕೆಲವು ಬೀಚ್ ಸಮಯವನ್ನು ಆನಂದಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚಿತ್ರಗಳಲ್ಲಿ, ಇಬ್ಬರೂ ಪರಸ್ಪರ ಮಾತನಾಡುವಾಗ ಜೋರಾಗಿ ನಗುತ್ತಿರುವುದನ್ನು ಕಾಣಬಹುದು. ಒಂದು ಫೋಟೋದಲ್ಲಿ, ಇಬ್ಬರೂ ತುಂಬಾ ಸಂತೋಷದಿಂದ ಕಾಣುತ್ತಿದ್ದರೆ, ಮತ್ತೊಂದರಲ್ಲಿ ಬೀಚ್ ತೀರದಲ್ಲಿ ನೀರಿನಲ್ಲಿ ನಡೆಯುವುದನ್ನು ಆನಂದಿಸುತ್ತಾರೆ. ವೈರಲ್ ಫೋಟೋಗಳನ್ನು ನೋಡಿದಾಗ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆಯೇ ಎನಿಸುತ್ತಿದೆ.

ಇಡಿ ವಿಚಾರಣೆಗೆ ಬಂದ ನೋರಾ.. 200 ಕೋಟಿ ರೂ. ಪ್ರಕರಣ ಕಂಡ್ರಾ!

ಒಟ್ಟಿಗೆ ಕಾಣಿಸಿಕೊಂಡಾಗ, ನೋರಾ ಫತೇಹಿ ತನ್ನ ಸೊಂಟದ ಸುತ್ತ ಕಟ್ಟಲಾಗಿದ್ದ ಬೂದು ಬಣ್ಣದ ಟೀ ಶರ್ಟ್ ಅನ್ನು ಧರಿಸಿದ್ದರು. ಕಪ್ಪು ಶಾರ್ಟ್ಸ್ ಮತ್ತು ಕೂದಲು ಕಟ್ಟಿದ್ದಾರೆ. ಗುರು ರಾಂಧವಾ ಅವರು ಪ್ರಿಂಟೆಡ್ ಕೋ-ಆರ್ಡ್ ಸೆಟ್ ಅನ್ನು ಆರಿಸಿಕೊಂಡರು. ಈಗ ಈ ಫೋಟೋಗಳು ಅವರ ಮ್ಯೂಸಿಕ್ ವೀಡಿಯೋಗಾಗಿ ಮಾಡಿರುವುದಾ ಅಥವಾ ಇಬ್ಬರ ನಡುವೆ ಏನಾದರೂ ನಡೆಯುತ್ತಿದೆಯಾ ಎಂಬುದು ಸ್ಪಷ್ಟವಾಗಿಲ್ಲ. ಚಂದದ ಫೋಟೊಗಳು ಅವರ ಲವ್ ಕುರಿತು ಚರ್ಚೆ ಹುಟ್ಟಿಸಿದೆ.

ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ, ಅವು ಕೆಲವೇ ಸಮಯದಲ್ಲಿ ವೈರಲ್ ಆಗಿವೆ. ಇವರಿಬ್ಬರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ‘ಇಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರಾ’ ಎಂದು ಚರ್ಚೆ ಶುರು ಮಾಡಿದ್ದಾರೆ. ಒಬ್ಬ ಬಳಕೆದಾರರು ಆಲಿಯಾ ರಣಬೀರ್ ಕೆ ಬಾದ್ ಅಬ್ ಇಂಕಿ ಬಾರಿ ಎಂದು ಹೇಳಿದ್ದಾರೆ. ಅನೇಕರು ಹೊಸ ಜೋಡಿ ಎಂದೂ ಹೇಳಿದ್ದಾರೆ.

ಕೊನೆಯ ಬಾರಿಗೆ ಬಾಲಿವುಡ್ ವಾರ್‌ ಡ್ರಾಮಾ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾದಲ್ಲಿ ನೋರಾ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ  ಅಜಯ್ ದೇವಗನ್, ಸೋನಾಕ್ಷಿ ಸಿನ್ಹಾ, ಸಂಜಯ್ ದತ್ ಮತ್ತು ಮುಂತಾದವರು ಇದ್ದಾರೆ. ಪ್ರಸ್ತುತ, ಅವರು ಬಾಲಿವುಡ್‌ನ ಬೆಸ್ಟ್‌ ಡ್ಯಾನ್ಸರ್‌ಗಳಲ್ಲಿ ಒಬ್ಬರು ಹಾಗೂ ಹಿಂದಿ ಎಂಟರ್ಟೈನ್‌ ಬ್ಯುಸಿನೆಸ್‌ನಲ್ಲಿ ಅತ್ಯಂತ ಫೇಮಸ್‌ ದಿವಾ. ಬಿ ಟೌನ್‌ನಲ್ಲಿ ಈ ಸ್ಥಾನವನ್ನು ಸಾಧಿಸಲು ನೋರಾ ಜೀವನದಲ್ಲಿ ತುಂಬಾ ಶ್ರಮಿಸಿದ್ದಾರೆ. ಬಿಗ್ ಬಾಸ್ 9 ಮತ್ತು ಜಲಕ್ ದಿಖ್ಲಾ ಜಾ 9 ರ ಭಾಗವಾಗಿದ್ದರು. ಈಗ ಅವರು ಡ್ಯಾನ್ಸ್ ಪ್ಲಸ್ 4, ಇಂಡಿಯಾಸ್‌ ಬೆಸ್ಟ್‌ ಡ್ಯಾನ್ಸರ್ ಮತ್ತು ಡ್ಯಾನ್ಸ್ ದೀವಾನೆ (ಸೀಸನ್ 3) ನಂತಹ ಅನೇಕ ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿದ್ದಾರೆ.

ನೋರಾ ಮೊರಾಕ್ಕೋ ಮೂಲದವರು. ಸೆಲೆಬ್ರೆಟಿಯಾಗುವ ಮೊದಲು ಅವರು ಮಾಲ್‌ನಲ್ಲಿ ರಿಟೈಲ್‌ ಸೇಲ್ಸ್ ಅಸೋಸ್ಸಿಯೆಟ್‌ ಆಗಿ ಕೆಲಸ ಮಾಡುತ್ತಿದ್ದರು. Bollywoodlife.com ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ನೋರಾ ಈ ವಿಷಯ ಹೇಳಿದರು. ನನ್ನ ಮೊದಲ ಕೆಲಸವೆಂದರೆ ನನ್ನ ಹೈಸ್ಕೂಲ್‌ ಪಕ್ಕದಲ್ಲಿದ್ದ ಮಾಲ್‌ನಲ್ಲಿ ರಿಟೈಲ್‌ ಸೇಲ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೆ. ಹಾಗಾಗಿ ನಾನು ನನ್ನ ತರಗತಿಗಳನ್ನು ಮುಗಿಸಿ ಅಲ್ಲಿಗೆ ಹೋಗುತ್ತಿದ್ದೆ. ಆಗ ನನ್ನ ವಯಸ್ಸು 16. ನಾನು ಅನೇಕ ಕಾರಣಗಳಿಗಾಗಿ ಕೆಲಸ ಮಾಡಬೇಕಾಗಿತ್ತು. ನನ್ನ ಕುಟುಂಬದಲ್ಲಿ ಸಾಕಷ್ಟು ಹಣಕಾಸಿನ ಸಮಸ್ಯೆಗಳಿದ್ದವು. ಅದ್ದರಿಂದ ದುಡಿಯಲು ಪ್ರಾರಂಭಿಸಿದೆ,' ಎಂದು ನೋರಾ ಹೇಳಿದ್ದರು.

Follow Us:
Download App:
  • android
  • ios