ಸಖತ್ ಹಿಟ್ ಹಾಡುಗಳನ್ನು ಕೊಟ್ಟಿರೋ ಹಿಂದಿಯ ಟಾಪ್ ರ‍್ಯಾಪರ್‌ ಗುರು ರಾಂಧವ ಅವರೂ ಕೃಷಿ ಹಿನ್ನೆಲೆಯವರು. ಸೂಪರ್ ವಿಡಿಯೋ ಸಾಂಗ್‌ಗಳನ್ನು ಕೊಟ್ಟ ಇವರು ರೈತರ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾನು ಮೊದಲು ಹಾಡಿ ಪಡೆದ ಸಂಬಳದಿಂದ ತಾತನಿಗೆ ಟ್ರಾಕ್ಟರ್ ಕೊಡಿಸಿದ್ದನ್ನು ನೆನಪಿಸಿದರೆ ನನಗೆ ಇಂದಿಗೂ ಹೆಮ್ಮೆ ಎನಿಸುತ್ತದೆ. ನಮ್ಮ ಸರ್ಕಾರ ರೈತರ ಸಮಸ್ಯೆಗಳನ್ನು ಕೇಳಿ ಪರಿಹರಿಸಲಿ ಎಂದು ಹೇಳಿದ್ದಾರೆ ಗುರು.

ಆರ್‌ಆರ್‌ಆರ್‌ನಲ್ಲಿ ಅಲಿಯಾ;ನಮ್ಮ ಪ್ರೀತಿಯ ಸೀತೆಗೆ ಸ್ವಾಗತ ಎಂದ ರಾಜಮೌಳಿ!

ಮೂಲತಃ ಗುರದಾಸ್ ಪುರದವಾರದ ಇವರು ಬಾಲಿವುಡ್‌ನಲ್ಲಿ ಖ್ಯಾತ ಸಂಗೀತ ನಿರ್ದೇಶಕರು. ಬಾದ್‌ ಶಾ, ಹನಿ ಸಿಂಗ್‌ನಂತಹ ಟಾಪ್ ರ್ಯಾಪರ್‌ಗಳಂತೆಯೇ ಬೆಳೆದು ಬಂದ ಗುರು ರಾಂಧವ ಹಾಡುಗಳು ಗಾನ, ಸಾವನ್‌ನಂತ ಮ್ಯೂಸಿಕ್ ಎಪ್ಲಿಕೇಷನ್‌ಗಳಲ್ಲಿ ಫೇಮಸ್.

ಇತ್ತೀಚೆಗಷ್ಟೇ ಗುರು ನಟಿ ನೋರಾ ಫತೇಹಿಯ ಜೊತೆ ಮಾಡಿದ ನಚ್ ಮೇರಿ ರಾನಿ ಹಾಡಂತೂ ಎಲ್ಲೆಡೆ ವೈರಲ್ ಆಗಿದೆ. ಯೂಟ್ಯೂಬ್‌ನಲ್ಲಿ ಇವರ ಹಾಡುಗಳು ಹಿಟ್ ಆಗಿದ್ದು, ಯೂತ್‌ಗಳ ನೆಚ್ಚಿನ ಸಿಂಗರ್ ಇವರು.