ಜ್ಯೂಸ್ ಮಾರುತ್ತಿದ್ದ ಗುಲ್ಶನ್ ಕುಮಾರ್ ಕ್ಯಾಸೆಟ್ ಕಂಪೆನಿ ಮಾಲೀಕರಾಗಿದ್ದು ಹೀಗೆ
ಗುಲ್ಶನ್ ಕುಮಾರ್ ಕೊಲೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ರೌಫ್ ಮರ್ಚೆಂಟ್ ಶಿಕ್ಷೆಯನ್ನು ಹೈಕೋರ್ಟ್ಎತ್ತಿ ಹಿಡಿದಿದೆ. ಸೆಷನ್ಸ್ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅದೇ ವೇಳೆ ಈ ಪ್ರಕರಣದಲ್ಲಿ ನಿರ್ಮಾಪಕ ರಮೇಶ್ ತೌರಾನಿ ವಿರುದ್ಧ ನ್ಯಾಯಾಲಯ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಖುಲಾಸೆಗೊಳಿಸಲಾಗಿದೆ. ಗುಲ್ಶನ್ ಕುಮಾರ್ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಆಸಕ್ತಿಕರ ವಿಷಯಗಳು ಇಲ್ಲಿವೆ.

1956ರಲ್ಲಿ ದೆಹಲಿಯಲ್ಲಿ ಜನಿಸಿದ ಗುಲ್ಶನ್ ಕುಮಾರ್ ತಮ್ಮ ಬಾಲ್ಯದಲ್ಲಿ ತಂದೆಯೊಂದಿಗೆ ಜ್ಯೂಸ್ ಮಾರುತ್ತಿದ್ದರು. ಇದರ ನಂತರ ಕ್ರಮೇಣ ಅವರು ಹ್ಯಾಂಡ್‌ಕಾರ್ಟ್‌ನಲ್ಲಿ ಕ್ಯಾಸೆಟ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಇಲ್ಲಿಂದಲೇ ಅವರು ಸಂಗೀತದಲ್ಲಿ ಆಸಕ್ತಿ ಪ್ರಾರಂಭವಾಯಿತು.

ದೆಹಲಿಯ ದೇಶಬಂಧು ಕಾಲೇಜಿನಿಂದ ಪದವಿ ಪಡೆದ ಗುಲ್ಶನ್ ದರಿಯಾ ಗಂಜ್ ಪ್ರದೇಶದಲ್ಲಿದ್ದ ತಂದೆ ಚಂದ್ರಭನ್ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ನಂತರ ಅವರ ತಂದೆ ಮತ್ತೊಂದು ಅಂಗಡಿ ಖರೀದಿಸಿದಾಗ ಗುಲ್ಶನ್ ಅಗ್ಗದ ಕ್ಯಾಸೆಟ್‌ಗಳು ಮತ್ತು ಹಾಡುಗಳನ್ನು ರೆಕಾರ್ಡ್ ಮಾಡಿ ಮಾರಲಾಯಿತು. ಇಲ್ಲಿಂದ ಮುಂದೆ ಅವರು ನೋಯ್ಡಾದಲ್ಲಿ ತಮ್ಮದೇ ಕಂಪನಿಯನ್ನು ತೆರೆದರು ಮತ್ತು ಸಂಗೀತ ಉದ್ಯಮದಲ್ಲಿ ಫೇಮಸ್ ಆದರು.

ಕಷ್ಟದಲ್ಲಿ ಬೆಳೆದ ಗುಲ್ಶನ್ ಬೆಳೆದ ದಾರಿಯೇ ಅದ್ಭುತ.

ಮೂಲ ಹಾಡುಗಳನ್ನು ಇತರ ಧ್ವನಿಗಳಲ್ಲಿ ರೆಕಾರ್ಡ್ ಮಾಡಿ ಕ್ಯಾಸೆಟ್‌ಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದರು. ಇತರೆ ಕಂಪನಿಗಳ ಕ್ಯಾಸೆಟ್ 28 ರೂಗಳಿಗೆ ಲಭ್ಯವಿದ್ದಲ್ಲಿ, ಗುಲ್ಶನ್ ಕುಮಾರ್ ಅವುಗಳನ್ನು 15 ರಿಂದ 18 ರೂಗಳಿಗೆ ಮಾರುತ್ತಿದ್ದರು.

ತಮ್ಮ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿ ಸೂಪರ್-ಕ್ಯಾಸೆಟ್ ಇಂಡಸ್ಟ್ರೀಸ್ ಎಂಬ ಸ್ವಂತ ಕಂಪನಿಯನ್ನು ಪ್ರಾರಂಭಿಸಿದರು, ಇದನ್ನು ಟಿ-ಸೀರೀಸ್ ಎಂದು ಕರೆಯಲಾಗುತ್ತದೆ.

ಇಂದು ಈ ಕಂಪನಿಯು ಅನೇಕ ಚಿತ್ರಗಳನ್ನು ನಿರ್ಮಿಸುತ್ತಿದೆ ಮತ್ತು ಇದನ್ನು ಗುಲ್ಶನ್ ಅವರ ಪುತ್ರ ಭೂಷಣ್ ಕುಮಾರ್ ನಿರ್ವಹಿಸುತ್ತಿದ್ದಾರೆ.

ಈ ಸಮಯದಲ್ಲಿ ಅವರೇ ಭಕ್ತಿಗೀತೆಗಳನ್ನು ಹಾಡಿ ರೆಕಾರ್ಡಿಂಗ್ ಮಾಡಲು ಪ್ರಾರಂಭಿಸಿದರು. 70 ರ ದಶಕದಲ್ಲಿ, ಗುಲ್ಶನ್ ಕುಮಾರ್ ಅವರ ಕ್ಯಾಸೆಟ್‌ಗಳಿಗೆ ಬೇಡಿಕೆ ಹೆಚ್ಚಾಯಿತು ಮತ್ತು ಅವರು ಸಂಗೀತ ಉದ್ಯಮದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದರು.

ಆಡಿಯೊ ಕ್ಯಾಸೆಟ್‌ಗಳಲ್ಲಿ ಯಶಸ್ಸಿನ ನಂತರ ಗುಲ್ಶನ್ ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು ಮುಂಬೈಗೆ ತೆರಳಿದರು. ಇದರ ನಂತರ, ಸಂಗೀತ ಮತ್ತು ಬಾಲಿವುಡ್ ಚಿತ್ರಗಳಲ್ಲದೆ, ಹಿಂದೂ ಪುರಾಣಗಳಿಗೆ ಸಂಬಂಧಿಸಿದ ಚಲನಚಿತ್ರಗಳು ಮತ್ತು ಧಾರಾವಾಹಿಗಳನ್ನು ನಿರ್ಮಿಸಲು ಪ್ರಾರಂಭಿಸಿದ ಗುಲ್ಶನ್ ಕುಮಾರ್ ಅವರು ಗಳಿಸಿದ ಒಂದು ಭಾಗವನ್ನು ಸಾಮಾಜಿಕ ಕೆಲಸಕ್ಕಾಗಿ ಖರ್ಚು ಮಾಡುತ್ತಿದ್ದರು.

ವೈಷ್ಣೋ ದೇವಿಯ ಭಕ್ತರಾದ ಇವರು ಅಲ್ಲಿಗೆ ಭೇಟಿ ನೀಡುವ ಭಕ್ತರಿಗಾಗಿ ಭಂಡಾರವನ್ನು ಏರ್ಪಡಿಸಿದ್ದರು, ಅದು ಇಂದಿಗೂ ಮುಂದುವರೆದಿದೆ. ಗುಲ್ಶನ್ ಕುಮಾರ್ ಅವರ ಈ ಭಂಡಾರ ಶ್ರೀ ಮಾತಾ ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಉಚಿತ ಆಹಾರವನ್ನು ಒದಗಿಸುತ್ತದೆ.

ಈ ಸಮಯದಲ್ಲಿ ಅಬು ಸೇಲಂ ಗುಲ್ಶನ್ ಕುಮಾರ್ ಅವರಿಗೆ ಪ್ರತಿ ತಿಂಗಳು 5 ಲಕ್ಷ ರೂಪಾಯಿ ನೀಡುವಂತೆ ಕೇಳಿದಾಗ, ಗುಲ್ಶನ್ ಕುಮಾರ್ ನಿರಾಕರಿಸಿ ಇಷ್ಟು ಹಣದಲ್ಲಿ ವೈಷ್ಣೋ ದೇವಿಯಲ್ಲಿ ಭಂಡಾರವನ್ನು ಆಯೋಜಿಸುವುದಾಗಿ ಹೇಳಿದರು.

1997 ರ ಆಗಸ್ಟ್ 12 ರಂದು ಮುಂಬೈನ ಅಂಧೇರಿಯಲ್ಲಿರುವ ಜಿತೇಶ್ವರ ಮಹಾದೇವ್ ದೇವಸ್ಥಾನದಲ್ಲಿ ಪೂಜೆಗೆ ಹೋಗಿದ್ದಾಗ ಗುಲ್ಶನ್ ಕುಮಾರ್ ಅವರನ್ನು ಹತ್ಯೆ ಮಾಡಲಾಯಿತು.

ನದೀಮ್-ಶ್ರವಣ್ ಸಂಗೀತಗಾರ ಜೋಡಿಯ ನದೀಮ್ ಸೈಫ್ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿತ್ತು. ಗುಲ್ಶನ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ರವೂಫ್ ದಾವೂದ್ ಮರ್ಚೆಂಟ್‌ಗೆ 2002 ರ ಏಪ್ರಿಲ್‌ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಗುಲ್ಶನ್ ಕುಮಾರ್ ಮರಣದ ನಂತರ, ಕೇವಲ 19ನೇ ವಯಸ್ಸಿನ ಅವರ ಮಗ ಭೂಷಣ್ ಕುಮಾರ್ ಟಿ-ಸೀರೀಸ್ ಕಂಪನಿಯನ್ನು ವಹಿಸಿಕೊಂಡರು. ಭೂಷಣ್ ಮಾಡೆಲ್ ಮತ್ತು ನಟಿ ದಿವ್ಯಾ ಖೋಸ್ಲಾ ಅವರನ್ನುವಿವಾಹವಾಗಿದ್ದು ರುಹಾನ್ ಎಂಬ ಮಗ ಇದ್ದಾನೆ.

ಟಿ-ಸೀರೀಸ್ ವ್ಯವಹಾರ 24 ದೇಶಗಳಲ್ಲಿ ಮತ್ತು 6 ಖಂಡಗಳಲ್ಲಿ ಹರಡಿದೆ. 'ರೆಡಿ' (2011), 'ಆಶಿಕ್ವಿ 2' (2013), 'ಹೇಟ್ ಸ್ಟೋರಿ 4' (2014), 'ಬೇಬಿ' (2015), 'ಭಾಗ್ ಜಾನಿ' (2015), 'ಏರ್‌ಲಿಫ್ಟ್' (2016), 'ಬಾಡ್ಶಾಹೊ'. '(2017) ಮತ್ತು ಅನೇಕ ಸೂಪರ್‌ಹಿಟ್ ಸಿನಿಮಾಗಳು ಈ ಕಂಪೆನಿಯಡಿಲ್ಲಿ ನಿರ್ಮಾಣಗೊಂಡಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.