ಬಾಲಿವುಡ್‌ನಲ್ಲಿ ರಶ್ಮಿಕಾ ಮಿಂಚಿಂಗ್; 'ಗುಡ್‌ಬೈ' ಪ್ರಮೋಷನ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ
ರಶ್ಮಿಕಾ ತನ್ನ ಮೊದಲ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದಾರೆ.ಸೌತ್ ಬ್ಯೂಟಿ ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದುವರೆಗೂ ಒಂದು ಹಿಂದಿ ಸಿನಿಮಾ ರಿಲೀಸ್ ಆಗಿಲ್ಲ. ಇದೀಗ ಗುಡ್‌ಬೈ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ಎರಡೂ ಕಡೆ ರಶ್ಮಿಕಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕನ್ನಡ ಸಿನಿಮಾರಂಗದಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಕಿರಿಕ್ ಸುಂದರಿ ಸದ್ಯ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ರಶ್ಮಿಕಾ ತನ್ನ ಮೊದಲ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದಾರೆ.ಸೌತ್ ಬ್ಯೂಟಿ ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದುವರೆಗೂ ಒಂದು ಹಿಂದಿ ಸಿನಿಮಾ ರಿಲೀಸ್ ಆಗಿಲ್ಲ. ಮಿಷನ್ ಮಜ್ನು ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ರಶ್ಮಿಕಾ ಇನ್ನು ದೊಡ್ಡ ಪರದೆ ಮೇಲೆ ಮಿಂಚಿಲ್ಲ. ಹಾಗಾಗಿ ಮೊದಲ ಹಿಂದಿ ಸಿನಿಮಾ ರಿಲೀಸ್‌ಗೆ ರಶ್ಮಿಕಾ ಸಖತ್ ಉತ್ಸುಕರಾಗಿದ್ದಾರೆ.
ರಶ್ಮಿಕಾ ಸದ್ಯ ಗುಡ್ ಬೈ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಇತ್ತೀಚಿಗಷ್ಟೆ ಗುಡ್ ಬೈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಬಿಗ್ ಬಿ ಅಮಿತಾಭ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸಿನಿಮಾದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಿಗೆ ಹೋಗಿ ರಶ್ಮಿಕಾ ತನ್ನ ಮೊದಲ ಹಿಂದಿ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ಸದ್ಯ ಸೌತ್ ಸುಂದರಿ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಜಲಕ್ ದಿಕ್ಲಾಜ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಶೋಗಾಗಿ ರಶ್ಮಿಕಾ ನೀಲಿ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋಷನ್ ನಲ್ಲಿ ಗಮನ ಸೆಳೆಯುತ್ತಿರುವ ರಶ್ಮಿಕಾ ಇದೀಗ ಮತ್ತೊಮ್ಮೆ ಸುಂದರವಾಗಿ ಕಂಗೊಳಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಮುಂಬೈನಲ್ಲಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾದ ರಶ್ಮಿಕಾ ತನ್ನ ಎಂದಿನ ನಗು ಬೀರುತ್ತಾ ಪೋಸ್ ನೀಡಿದರು. ರಶ್ಮಿಕಾ ಕ್ಯೂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಡ್‌ಬೈ ಸಿನಿಮಾದ ಬಗ್ಗೆ ಹೇಳುವುದಾದರೆ ಈ ಸಿನಿಮಾದಲ್ಲಿ ರಶ್ಮಿಕಾ, ಅಮಿತಾಭ್ ಬಚ್ಚನ್ ಮತ್ತು ನೀನಾ ಗುಪ್ತಾ ಜತೆ ನಟಿಸಿದ್ದಾರೆ. ಅಮಿತಾಭ್-ನೀನಾ ಪುತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಮೂಲಕ ಕುತೂಹಲ ಹೆಚ್ಚಿಸಿರುವ ಗುಡ್‌ಬೈ ಸಿನಿಮಾ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.