ಹೊಟ್ಟೆ ಮುಚ್ಚಿಕೊಳ್ಳಲು ಪ್ರಯತ್ನಿಸಿದ ನಟಿ; ಮೂರನೇ ಮಗುವಿನ ನಿರೀಕ್ಷೆಯಲ್ಲಿ ಜೆನಿಲಿಯಾ? ಫೋಟೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಜಿನಿಲಿಯಾ ಬೇಬಿ ಬಂಪ್ ಫೋಟೋ. ಪತಿ ಕೊಟ್ಟ ಸ್ಪಷ್ಟನೆ ಏನು?
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆ ಸತ್ಯ ಇಸ್ ಇನ್ ಲವ್ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜಿನಿಲಿಯಾ.
ಇತ್ತೀಚಿಗೆ ನಡೆದ ವೀಕೆಂಡ್ ಪ್ರಚಾರ ಕಾರ್ಯಕ್ರಮದಲ್ಲಿ ಪತಿ ರಿತೇಶ್ ದೇಶಮುಖ್ ಜೊತೆ ಪರ್ಪಲ್ ಬಣ್ಣದ ಫ್ರಾಕ್ ಧರಿಸಿ ಜೆನಿಲಿಯಾ ಕಾಣಿಸಿಕೊಂಡಿದ್ದರು.
ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಜೆನಿಲಿಯಾ ಹೊಟ್ಟೆ ಮೇಲೆ ಕೈ ಇಟ್ಟುಕೊಂಡು ಬರುತ್ತಿದ್ದರು. ನೋಡಿದ ತಕ್ಷಣ ಬೇಬಿ ಬಂಪ್ ಅನಿಸುತ್ತದೆ.
ಇನ್ನು ಕೆಲವರು ಬೇಬಿ ಬಂಪ್ ಕಾಣಿಸದಂತೆ ಮುಚ್ಚಿಕೊಳ್ಳುತ್ತಿದ್ದಾರೆ ಎನ್ನುತ್ತಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆ ರಿತೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.
'ಎರಡು ಮೂರು ಮಕ್ಕಳ ಮಾಡಿಕೊಳ್ಳುವುದಕ್ಕೆ ನನಗೇನು ಬೇಸರವಿಲ್ಲ ಆದರೆ ಈ ಸಲ ಆಕೆ ಗರ್ಭಿಣಿ ಎಂದು ನೀವು ಹೇಳುತ್ತಿರುವುದು ಸುಳ್ಳು' ಎಂದು ಬರೆದುಕೊಂಡಿದ್ದಾರೆ.
ಜೆನಿಲಿಯಾಗೆ ಈಗಾಗಲೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದರು ಸಿನಿಮಾದಿಂದ ದೂರ ಉಳಿದು ಹ್ಯಾಪಿ ಲೈಫ್ ಲೀಡ್ ಮಾಡುತ್ತಿದ್ದಾರೆ.
ಕನ್ನಡದಲ್ಲಿ ಒಂದೇ ಸಿನಿಮಾ ಮಾಡಿದ್ದರೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಆಗಾಗ ಬೆಂಗಳೂರಿಗೆ ಬರುತ್ತಿರುತ್ತಾರೆ.