ಗೌರಿಗೆ ಪತಿ ಶಾರುಖ್‌ ಈ ಕೆಲಸ ಮಾಡೋದು ಇಷ್ಟವಿಲ್ಲವಂತೆ!

First Published 10, Jun 2020, 5:23 PM

ಬಾಲಿವುಡ್‌ನ ಮೋಸ್ಟ್‌ ಲವಿಂಗ್‌ ಕಪಲ್‌ ಪಟ್ಟಿಯಲ್ಲಿ ಶಾರುಖ್‌ ಹಾಗೂ ಗೌರಿ ಹೆಸರು ಮೊದಲು ಕೇಳಿಬರುತ್ತದೆ. ಇವರಿಬ್ಬರ ನಡುವಿನ ಪ್ರೀತಿ ಎಲ್ಲರಿಗೂ ಗೊತ್ತಿರುವ ವಿಷಯ ಹಾಗೂ ಶಾರುಖ್ ಖಾನ್ ಗೌರಿಯ ದಾಂಪತ್ಯ ಜೀವನ ಎಲ್ಲರಿಗೂ ಮಾದರಿ. ಶಾರುಖ್‌ ಸಿನಿಮಾ ಜೀವನ ಆರಂಭವಾಗುವ ಮುಂಚಿನಿಂದಲೂ ಅವರ ಬೆನ್ನ ಹಿಂದೆ ಇರುವರು ಗೌರಿ. 2 ದಶಕಗಳಿಗಿಂತ ಹೆಚ್ಚು ಕಾಲದಿಂದ ಜನರನ್ನು ರಂಜಿಸಿತ್ತಿರುವ ಶಾರುಖ್ ಖಾನ್‌ರ ಒಂದು ಕೆಲಸ ಪತ್ನಿ ಗೌರಿಗೆ ಇಷ್ಟವಿಲ್ಲವಂತೆ. ಸೂಪರ್‌ ಸ್ಟಾರ್‌ ಈ ರೀತಿ ಕೆಲಸ ಮಾಡುವುದನ್ನು ಗೌರಿ ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಏನದು?

ಭಾರತದಲ್ಲಿ ಹೆಚ್ಚು ಮೆಚ್ಚುಗೆ ಪಡೆದ ಮತ್ತು ಪ್ರಭಾವಶಾಲಿ ದಂಪತಿಯಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಸೇರಿದ್ದಾರೆ.

ಶಾರುಖ್‌ ಸಿನಿಮಾ ಜೀವನ ಆರಂಭವಾಗುವ ಮುಂಚಿನಿಂದಲೂ ಅವರ ಬೆನ್ನ ಹಿಂದೆ ಇರುವವರು ಗೌರಿ.

ಇಬ್ಬರೂ ವಿಭಿನ್ನ ಧರ್ಮದವರಾಗಿದ್ದರಿಂದ ಗೌರಿ ಮನೆಯವರನ್ನು ಒಪ್ಪಿಸಲು ಶಾರುಖ್ ಸುಮಾರು ಐದು ವರ್ಷಗಳ ಕಾಲ ಹಿಂದುವಾಗಿದ್ದರು.

ಕುಚ್ ಕುಚ್ ಹೋತಾ ಹೈ, ವೀರ್ ಜಾರಾ, ದಿಲ್ವಾಲೆ ದುಲ್ಹನಿಯಾ ಲೆ ಜಯಾಂಗೆ ಮುಂತಾದ ಸಿನಿಮಾಗಳು ನೋಡಿದರೆ ಶಾರುಖ್‌ಗೆ ಕಿಂಗ್‌ ಅಫ್‌ ರೊಮ್ಯಾನ್ಸ್‌ ಅಂತ ಕರೆಯೋದು ಹೆಗ್ಗಳಿಕೆ ಏನಲ್ಲ ಎಂದು ಅನಿಸುತ್ತದೆ.

ರೀಲ್ ಜೀವನದಲ್ಲಿ ಮಾತ್ರವಲ್ಲ, ರಿಯಲ್‌ ಲೈಫ್‌ನಲ್ಲೂ  ಅವರು ಪ್ಯಾಷನೇಟ್ ಲವರ್‌ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ.

'ಶಾರುಖ್ ನಿಜ ಜೀವನದಲ್ಲಿಯೂ ತುಂಬಾ ರೋಮ್ಯಾಂಟಿಕ್ ಆಗಿದ್ದಾರೆ. ಪ್ರೇಮಿಗಳ ದಿನದಂದು ಅವರು ನನಗೆ ಫ್ಯಾನ್ಸಿ ಗ್ರೀಟಿಂಗ್‌ ಕಾರ್ಡ್ ಹಾಗೂ ಬೊಕ್ಕೆ ನೀಡಿದರು. ಅವರು ಈ ತರದ ಮುದ್ದಾದ ಪುಟ್ಟ ಗೆಸ್ಚರ್‌ಗಳನ್ನು ಮಾಡುತ್ತಲೇ ಇರುತ್ತಾರೆ. ನನಗಿಂತ ಹೆಚ್ಚು ರೋಮ್ಯಾಂಟಿಕ್ ' ಸಂದರ್ಶನವೊಂದರಲ್ಲಿ, ಗೌರಿ ಖಾನ್ ಹೇಳಿದ್ದರು.

ಪತಿ ಚಿತ್ರಗಳಲ್ಲಿ ಮಾರಣಾಂತಿಕ ಸಾಹಸಗಳು ಮಾಡುವುದನ್ನು ತಾವು  ಎಂದಿಗೂ ಇಷ್ಟಪಡುವುದಿಲ್ಲ ಎಂದು ಗೌರಿ ಬಹಿರಂಗಪಡಿಸಿದ್ದಾರೆ.

'ಸಾಹಸ ದೃಶ್ಯ ಮಾಡುವುದು ಅವನ ಕೆಲಸದ ಒಂದು ಭಾಗವಾಗಿದೆ. ಇದರ ಬಗ್ಗೆ ಏನೂ ಮಾಡಲಾಗುವುದಿಲ್ಲ. ನಾವು ಪ್ರಾರ್ಥನೆ ಮಾಡಬಹುದು ಮತ್ತು ಏನೂ ತಪ್ಪಾಗುವುದಿಲ್ಲ ಎಂದು ಭಾವಿಸುತ್ತೇನೆ. ನಾನು ಅವನಿಗೆ ವಿರುದ್ಧ ಸಲಹೆ ನೀಡುವುದಿಲ್ಲ ಆದರೂ ನಾನು ಅವನು ಕಡಿಮೆ ಸ್ಟಂಟ್‌ಗಳನ್ನು ಮಾಡುವುದು ಇಷ್ಟಪಡುತ್ತೇನೆ. ಅವನು ತನ್ನ ಕೆಲಸದ ಬಗ್ಗೆ ತುಂಬಾ ಉತ್ಸಾಹಭರಿತನಾಗಿರುತ್ತಾನೆ ಮತ್ತು ಕೆಲವೊಮ್ಮೆ ಅವನು ತನ್ನನ್ನು ತಾನೇ ಗಾಯಗೊಳಿಸಿಕೊಳ್ಳುತ್ತಾನೆ' - ಗೌರಿ ಖಾನ್‌

ಆಗಿನ್ನು ಸಿನಿಮಾದಲ್ಲಿ ಶಾರುಖ್‌ ಕೆರಿಯರ್‌ ಆರಂಭವಾಗಿರದ ದಿನಗಳಲ್ಲಿ ಗೌರಿ ಮೊದಲ ಬಾರಿಗೆ ಖಾನ್‌ರನ್ನು 1984ರಲ್ಲಿ ದೆಹಲಿಯಲ್ಲಿ ಭೇಟಿಯಾಗಿದ್ದು. ನಂತರ  1991ರಲ್ಲಿ ಸಾಂಪ್ರದಾಯಿಕ ಹಿಂದೂ ವಿವಾಹ ಪದ್ಧತಿಯಂತೆ ಮದುವೆಯಾಗಿತ್ತು ಈ ಜೋಡಿ.

ಈ ದಂಪತಿಗೆ ಮದುವೆಯಾಗಿ 28 ವರ್ಷಗಳಾಗಿದ್ದು, ಆರ್ಯನ್, ಅಬ್ರಾಮ್, ಸುಹಾನಾ ಖಾನ್ ಎಂಬ ಮೂವರು ಮಕ್ಕಳಿವೆ.

ಗೌರಿ ಮತ್ತು ಶಾರುಖ್  ಪುತ್ರಿ ಸುಹಾನಾ ಇತ್ತೀಚೆಗೆ ನ್ಯೂಯಾರ್ಕ್ ವಿಶ್ವವಿದ್ಯಾನಿಲಯಕ್ಕೆ ಫಿಲ್ಮ್‌ಮೇಕಿಂಗ್‌ ಕಲಿಯಲು ಸೇರಿದ್ದರು. ಹಿರಿಯ ಮಗ ಆರ್ಯನ್ ಕೂಡ ಸದರನ್‌ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ನಿರ್ಮಾಣ ಕೋರ್ಸ್  ಕಲಿಯುತ್ತಿದ್ದಾನೆ.

ಆರ್ಯನ್ ಇತ್ತೀಚೆಗೆ ಹಾಲಿವುಡ್ ಚಿತ್ರ ದಿ ಲಯನ್ ಕಿಂಗ್‌ನ ಹಿಂದಿ ಆವೃತ್ತಿಯಲ್ಲಿ ಸಿಂಬಾ ಪಾತ್ರಕ್ಕಾಗಿ ಧ್ವನಿ ನೀಡಿದ್ದು, ತಂದೆ ಶಾರುಖ್ ಮುಫಾಸಾಗೆ ಧ್ವನಿ ನೀಡಿದ್ದಾರೆ.ಆರು ವರ್ಷದ ಕೊನೆಯ ಮಗ ಅಬ್ರಾಮ್ ಶಾರುಖ್‌ ಗೌರಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾನೆ.

loader