- Home
- Entertainment
- Cine World
- ಅಲ್ಲು ಅರ್ಜುನ್, ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗಳಿಂದ ಗೇಮ್ ಚೇಂಜರ್ ಸಿನಿಮಾ ಲೀಕ್; ರಾಮ್ ಚರಣ್ ದೂರು!
ಅಲ್ಲು ಅರ್ಜುನ್, ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗಳಿಂದ ಗೇಮ್ ಚೇಂಜರ್ ಸಿನಿಮಾ ಲೀಕ್; ರಾಮ್ ಚರಣ್ ದೂರು!
ಗೇಮ್ ಚೇಂಜರ್ ಸಿನಿಮಾ ಹೈ ಕ್ವಾಲಿಟಿ (HD) ಪ್ರಿಂಟ್ ಲೀಕ್ ಮಾಡಿದವರ ವಿರುದ್ಧ ಸೈಬರ್ ಕ್ರೈಮ್‌ಗೆ ಚಿತ್ರತಂಡ ದೂರು ಕೊಟ್ಟಿದೆ. ಅದರಲ್ಲಿಯೂ ಅಲ್ಲು ಅರ್ಜುನ್, ಜ್ಯೂ.ಎನ್‌ಟಿಆರ್ ಅಭಿಮಾನಿಗಳು ಸಿನಿಮಾ ಲೀಕ್ ಮಾಡಿದ್ದಾರೆ ಎಂಬುದು ಶಾಕಿಂಗ್ ನ್ಯೂಸ್ ಆಗಿದೆ.

ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್' ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೀತಿದೆ. ರಿಲೀಸ್ ಆದ ತಕ್ಷಣನೇ HD ಪ್ರಿಂಟ್ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಕೆಲವು ಕಿಡಿಗೇಡಿಗಳು ಫ್ಯಾನ್ಸ್ ಅಂತಾ ನಾಟಕ ಮಾಡಿ ಲೀಕ್ ಮಾಡಿದ್ದಾರೆ.
ಸೈಬರ್ ಕ್ರೈಮ್‌ಗೆ ದೂರು ನೀಡಿದ ಚಿತ್ರತಂಡ, ಲೀಕ್ ಮಾಡಿದವರನ್ನ ಗುರುತಿಸಿದೆ. ಅಲ್ಲು ಅರ್ಜುನ್, NTR ಫ್ಯಾನ್ಸ್ ಇರೋದು ಗೊತ್ತಾಗಿದೆ. ಅವರ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆಗಳಿವೆ ಎಂಬುದನ್ನೂ ತಿಳಿದುಕೊಂಡಿದೆ.
ಇನ್ನು ಸಿನಿಮಾ ಲೀಕ್ ಮಾಡಿದವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಂತೆ. ಸಿನಿಮಾ ರಿಲೀಸ್‌ಗೂ ಮುಂಚೆ ನಿರ್ಮಾಪಕರಿಗೆ, ಚಿತ್ರತಂಡಕ್ಕೆ ಬೆದರಿಕೆ ಹಾಕಿದ್ದಾರೆ. ಹಣ ಕೊಡದಿದ್ದರೆ ಲೀಕ್ ಮಾಡುವುದಾಗಿಯೂ ಹೇಳಿದ್ದರು. ಈ ಸಂಬಂಧಪಟ್ಟಂತೆ ಕೆಲವು ಮಾಹಿತಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಗೇಮ್ ಚೇಂಜರ್ ಸಿನಿಮಾ ಲೀಕ್ ಮಾಡಿದ ಆರೋಪದಲ್ಲಿ 45 ಜನರ ಮೇಲೆ ಚಿತ್ರತಂಡವು ಸೈಬರ್ ಕ್ರೈಮ್‌ಗೆ ದೂರು ಕೊಟ್ಟಿದೆ. ಇವರ ವಿರುದ್ದ ನೆಗೆಟಿವಿಟಿ ಹರಡಿಸೋಕೆ, ಪೈರಸಿ ಪ್ರಿಂಟ್ ಲೀಕ್ ಮಾಡೋಕೆ ಸಂಚು ಹೂಡಿದ್ದಾರಾ? ಅಥವಾ ಒಂದು ಗ್ಯಾಂಗ್ ಮೂಲಕ ಇದನ್ನು ಮಾಡಿದ್ದಾರಾ ಅನ್ನೋ ತನಿಖೆ ನಡೆಯುತ್ತಿದೆ.
ರಾಮ್ ಚರಣ್ ಅವರ ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಯೋಜನಾಬದ್ಧವಾಗಿ ನೆಗೆಟಿವಿಟಿ ಹರಡಿಸಲಾಗಿದೆ. ಸಿನಿಮಾ ಕ್ಲಿಪ್ಸ್, ಮೇಜರ್ ಟ್ವಿಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿ ಜನ ಸಿನಿಮಾ ನೋಡದ ಹಾಗೆ ಮಾಡಿದ್ದಾರೆ. ಇದೆಲ್ಲವನ್ನು ಮಾಡಿದವರಲ್ಲಿ ಅಲ್ಲು ಅರ್ಜುನ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಅವರ ಅಭಿಮಾನಿಗಳ ಫ್ಯಾನ್ಸ್ ಪೇಜ್‌ಗಳು ಕೂಡ ಪತ್ತೆಯಾಗಿವೆ. ಹೀಗಾಗಿ, ಅವರ ಫ್ಯಾನ್ಸ್ ಪೇಜ್‌ಗಳ ಮೇಲೂ ದೂರು ದಾಖಲಾಗಿದೆ.