ಸಲ್ಮಾನ್ ಖಾನ್‌ನನ್ನು ಬೋಲ್ಡ್ ಆಗಿ ಅಪ್ಪಿಕೊಂಡ ನಟಿ ಈಗ ಮೌಲ್ವಿ ಪತ್ನಿ!
ಬಿಗ್‌ಬಾಸ್ ಖ್ಯಾತಿಯ ಸನಾ ಖಾನ್ ಮದುವೆಯಾಗಿದ್ದಾರೆ. ಗೊತ್ತೇ ಇಲ್ಲದೆ, ಸಡನ್ ಶ್ರೀಮತಿಯಾಗಿ ಪ್ರತ್ಯಕ್ಷವಾಗಿದ್ದಾರೆ ನಟಿ. ಈ ಬೋಲ್ಡ್ ನಟಿ ವರಿಸಿದ್ದು ಗುಜರಾತಿನ ಮೌಲ್ವಿಯನ್ನು. ಇಲ್ಲಿ ನೋಡಿ ಫೋಟೋಸ್
ಬಿಗ್‌ಬಾಸ್ 6ರ ಖ್ಯಾತಿಯ ಸನಾ ಖಾನ್ ಈಗ ದಢೀರ್ ಮದುವೆ ಮೂಲಕ ಸುದ್ದಿಯಾಗಿದ್ದಾರೆ.
ಪ್ರತಿ ಸಂದರ್ಭದಲ್ಲಿಯೂ ನಟಿ ವಿವಾದಕ್ಕೆ ಗುರಿಯಾಗುತ್ತಲೇ ಇದ್ದರು.
ಮುಫ್ತಿ ಅನಾಸ್ ಎಂಬ ಇಸ್ಲಾಂ ಪುರೋಹಿತರನ್ನು ಮದುವೆಯಾದ ನಟಿ ತಮ್ಮ ಹೆಸರನ್ನು ಸೈಯದ್ ಸನಾ ಖಾನ್ ಎಂದು ಬದಲಾಯಿಸಿಕೊಂಡಿದ್ದಾರೆ.
ಅಲ್ಲಾನಿಗಾಗಿ ಪ್ರೀತಿಸುತ್ತೇವೆ, ಅಲ್ಲಾನಿಗಾಗಿ ಮದುವೆಯಾಗಿದ್ದೇವೆ, ಅಲ್ಲಾನಿಗಾಗಿ ಜನ್ನತ್‌ನಲ್ಲಿಯೂ ಒಂದಾಗುತ್ತೇವೆ ಎಂದು ಪೋಸ್ಟ್ ಹಾಕಿದ್ದಾರೆ ನಟಿ.
ತಿಂಗಳ ಹಿಂದಷ್ಟೇ ನಟಿ ನಟನೆ, ಟಿವಿ, ಕಾರ್ಯಕ್ರಮಗಳಿಗೆ ಗುಡ್ ಬೈ ಹೇಳಿ ಹೊಸ ಜರ್ನಿ ಶುರು ಮಾಡೋದಾಗಿ ಹೇಳಿದ್ದರು.
ನಮ್ಮ ಸೃಷ್ಟಿಕರ್ತನ ಆಜ್ಞೆಯಂತೆ ಬದುಕುವ ಎಂಬುದಾಗಿತ್ತು ನಟಿ ಪೋಸ್ಟ್ ಸಾರ
ಸೆಲೆಬ್ರಿಟಿ ಕೊರಿಯೋಗ್ರಫರ್ ಜೊತೆ ಬ್ರೇಕಪ್: ಸನಾ ಖಾನ್‌ಗೂ ಬಾಯ್‌ಫ್ರೆಂಡ್ ಇದ್ದರು. ಆದರೆ ಬ್ರೇಕ್ ಅಪ್ ಆಗಿತ್ತು.
ಸನಾ ಮತ್ತು ಮೆಲ್ವಿನ್ ಇನ್‌ಸ್ಟಾಗ್ರಾಂನಲ್ಲಿ ಜೋಡಿ ಫೋಟೋಗಳು ರಾರಾಜಿಸಿದ್ದವು.
ಆದರೆ ನಂತರ ನಟಿ ಖಾಸಗಿ ಚಾಟ್‌ಗಳ ಸ್ಕ್ರೀನ್ ಶಾಟ್ ಶೇರ್ ಮಾಡಿ ಮತ್ತೊಮ್ಮೆ ಸುದ್ದಿಯಾಗಿದ್ದರು.
ಮೆಲ್ವಿನ್‌ನನ್ನು ಕೆಟ್ಟವನ್ನು ಎಂದು, 18 ವರ್ಷದ ಬಾಲೆಯನ್ನು ಗರ್ಭಿಣಿ ಮಾಡಿದ್ದಾನೆ ಎಂಬ ಆರೋಪ ಮಾಡಿದ್ದ ನಟಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದರು.
ಸನಾ ಖಾನ್ ಸಲ್ಮಾನ್ ಖಾನ್‌ನನ್ನು ತಬ್ಬಿಕೊಂಡಾದ ನಟ ಸಲ್ಮಾನ್ ತಮ್ಮ ಮುಷ್ಟಿ ಹಿಡಿದುಕೊಂಡಿದ್ದರು.
ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಹಗ್ ಮಾಡಿದ ನಟಿಯ ವರ್ತನೆ ಸಲ್ಮಾನ್‌ಗೆ ಮುಜುಗರ ತಂದಿತ್ತು ಎನ್ನಲಾಗಿದೆ.
ಬಹಳಷ್ಟು ಜನರು ಸೇರಿದ್ದ ಜಾಗದಲ್ಲಿಯೇ ಬೋಲ್ಡ್ ಆಗಿ ಬಂದು ಸಲ್ಮಾನ್ ಖಾನ್‌ನನ್ನು ಅಪ್ಪಿಕೊಂಡಿದ್ದರು ನಟಿ.
ಬಿಗ್‌ಬಾಸ್ ಮನೆಯಲ್ಲಿ ಕಿರುತೆರೆ ನಟಿಯ ಜೊತೆಗಿನ ಸನಾ ಖಾನ್ ಫ್ರೆಂಡ್‌ಶಿಪ್ ಸುದ್ದಿಯಾಗಿತ್ತು.
ಇದರಲ್ಲಿ ನಟಿ ಆಷ್ಕಾ ಸನಾ ಖಾನ್ ಎದೆಗೆ ಬಾಮ್ ಹಚ್ಚಿದ್ದರು.