MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಕರುಪ್ಪು ಸೂಪರ್​ಹಿಟ್ ಆದ್ರೂ ಸೂರ್ಯ ಫ್ಯಾನ್ಸ್ ಗರಂ; ಡೈರೆಕ್ಟರ್ ಬಾಲಾಜಿ ಮೇಲೆ ಸಿಟ್ಟಾಗಿ ಸಖತ್ ಕ್ಲಾಸ್!

ಕರುಪ್ಪು ಸೂಪರ್​ಹಿಟ್ ಆದ್ರೂ ಸೂರ್ಯ ಫ್ಯಾನ್ಸ್ ಗರಂ; ಡೈರೆಕ್ಟರ್ ಬಾಲಾಜಿ ಮೇಲೆ ಸಿಟ್ಟಾಗಿ ಸಖತ್ ಕ್ಲಾಸ್!

ಬಾಲಾಜಿ ಅವರು ಈ ಹಿಂದೆ ವೇದಿಕೆಯೊಂದರಲ್ಲಿ ಮಾತನಾಡುತ್ತಾ, "ಈ ಸಿನಿಮಾದ ಕಥೆಯನ್ನು ಮೊದಲು ವಿಜಯ್ ಅವರಿಗೆ ಹೇಳಿದ್ದೆ. ಅದು ಅವರ ಕೊನೆಯ ಸಿನಿಮಾವಾಗಬೇಕಿತ್ತು. ಆದರೆ ಅವರು ಎಚ್. ವಿನೋದ್ ಅವರ ಸಿನಿಮಾಗೆ ಓಕೆ ಅಂದರು. ನಂತರ ನಾನು ಸೂರ್ಯ ಅವರಿಗೆ ಈ ಕಥೆ ಹೇಳಿದೆ" ಎಂದಿದ್ದರು.

2 Min read
Author : Shriram Bhat
Published : Jun 05 2026, 05:41 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : X

ಕರುಪ್ಪು' 300 ಕೋಟಿ ಕ್ಲಬ್ ಸೇರಿದ್ರೂ ಸೂರ್ಯ ಫ್ಯಾನ್ಸ್ ಸುಮ್ಮನಿಲ್ಲ! ಡೈರೆಕ್ಟರ್ ಆರ್‌ಜೆ ಬಾಲಾಜಿಗೆ ಕ್ಲಾಸ್ ತಗೊಂಡಿದ್ದೇಕೆ?

ಬಾಕ್ಸ್ ಆಫೀಸ್‌ನಲ್ಲಿ ಸೂರ್ಯ ಅವರ 'ಕರುಪ್ಪು' (Karuppu) ಸಿನಿಮಾ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಸೂರ್ಯ ಮತ್ತು ತ್ರಿಶಾ ಕಾಂಬಿನೇಷನ್‌ನ ಈ ಚಿತ್ರ ಈಗಾಗಲೇ 310 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿ ಸೂರ್ಯ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಎನಿಸಿಕೊಂಡಿದೆ. ಆದರೆ, ಇಷ್ಟೊಂದು ದೊಡ್ಡ ಯಶಸ್ಸು ಸಿಕ್ಕರೂ ಸೂರ್ಯ ಅಭಿಮಾನಿಗಳು ಮಾತ್ರ ಸಖತ್ ಆಕ್ರೋಶದಲ್ಲಿದ್ದಾರೆ. ಅವರ ಈ ಸಿಟ್ಟಿಗೆ ಗುರಿಯಾಗಿರುವುದು ಬೇರೆ ಯಾರೂ ಅಲ್ಲ, ಸ್ವತಃ ಚಿತ್ರದ ನಿರ್ದೇಶಕ ಆರ್‌ಜೆ ಬಾಲಾಜಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
Image Credit : Instagram

ವಿವಾದಕ್ಕೆ ಕಿಡಿ ಹಚ್ಚಿದ ಆ ಒಂದು ಭೇಟಿ!

ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ನಿರ್ದೇಶಕ ಆರ್‌ಜೆ ಬಾಲಾಜಿ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ (Thalapathy Vijay) ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಾಲಾಜಿ, "ಅವರಿಂದಾಗಿಯೇ 'ಕರುಪ್ಪು' ಚಿತ್ರ ಪ್ರಾರಂಭವಾಯಿತು. ಈ ಭೇಟಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಕ್ಯಾಪ್ಶನ್ ನೀಡಿದ್ದಾರೆ. ಬಾಲಾಜಿ ಅವರ ಈ ಮಾತು ಸೂರ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

Related Articles

Related image1
ಸಿಎಂ ವಿಜಯ್ ಮಗ ಜೇಸನ್ ಸಂಜಯ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಹೀರೋ; ಹೀಗೂ ಇರಬಹುದಾ ಸ್ಟಾರ್ ಮಗ?
Related image2
ವಿಜಯ್ ಸಿಎಂ ಆಗೋದಕ್ಕೂ ಮೊದಲು ತ್ರಿಶಾಗೆ ಬೈದಿದ್ದ ಈ ನಟ ಈಗ ಮಾಡಿದ್ದೇನು? ಮುಂದೇನ್ ಗ್ರಹಚಾರ ಕಾದಿದೆ!?
38
Image Credit : X

ಸೆಕೆಂಡ್ ಚಾಯ್ಸ್ ಕಥೆ ನೆನಪಿಸಿದ ಅಭಿಮಾನಿಗಳು!

ಬಾಲಾಜಿ ಅವರು ಈ ಹಿಂದೆ ವೇದಿಕೆಯೊಂದರಲ್ಲಿ ಮಾತನಾಡುತ್ತಾ, "ಈ ಸಿನಿಮಾದ ಕಥೆಯನ್ನು ಮೊದಲು ವಿಜಯ್ ಅವರಿಗೆ ಹೇಳಿದ್ದೆ. ಅದು ಅವರ ಕೊನೆಯ ಸಿನಿಮಾವಾಗಬೇಕಿತ್ತು. ಆದರೆ ಅವರು ಎಚ್. ವಿನೋದ್ ಅವರ ಸಿನಿಮಾಗೆ ಓಕೆ ಅಂದರು. ನಂತರ ನಾನು ಸೂರ್ಯ ಅವರಿಗೆ ಈ ಕಥೆ ಹೇಳಿದೆ" ಎಂದು ಬಹಿರಂಗಪಡಿಸಿದ್ದರು.

48
Image Credit : X

ಈಗ ಸಿನಿಮಾ ಇಷ್ಟೊಂದು ದೊಡ್ಡ ಹಿಟ್ ಆದಾಗ, ಚಿತ್ರದ ಯಶಸ್ಸಿನ ಕ್ರೆಡಿಟ್ ಅನ್ನು ಸೂರ್ಯ ಅವರಿಗೆ ನೀಡುವ ಬದಲು, ವಿಜಯ್ ಅವರನ್ನು ಭೇಟಿ ಮಾಡಿ "ಅವರಿಂದ ಸಿನಿಮಾ ಶುರುವಾಯಿತು" ಎನ್ನುತ್ತಿರುವುದು ಸೂರ್ಯ ಅಭಿಮಾನಿಗಳನ್ನು ಕೆರಳಿಸಿದೆ. "ನಮ್ಮ ಹೀರೋ ಈ ಚಿತ್ರಕ್ಕೆ ಸೆಕೆಂಡ್ ಚಾಯ್ಸ್ ಅಂದುಕೊಂಡರೂ ಪರವಾಗಿಲ್ಲ, ಆದರೆ ಯಶಸ್ಸಿನ ಕ್ರೆಡಿಟ್ ಕೊಡುವಾಗ ಹೀಗೆ ಮಾಡುವುದು ಸರಿಯಲ್ಲ" ಎಂದು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

58
Image Credit : instagram

ಬಾಕ್ಸ್ ಆಫೀಸ್‌ನಲ್ಲಿ ವಿಜಯ್ ದಾಖಲೆ ಮುರಿದ 'ಕರುಪ್ಪು'!

ಸೂರ್ಯ ಫ್ಯಾನ್ಸ್ ಸಿಟ್ಟಾಗಲು ಮತ್ತೊಂದು ಮುಖ್ಯ ಕಾರಣ ಬಾಕ್ಸ್ ಆಫೀಸ್ ಲೆಕ್ಕಾಚಾರ. ಸದ್ಯದ ವರದಿಗಳ ಪ್ರಕಾರ, 'ಕರುಪ್ಪು' ಚಿತ್ರವು ವಿಜಯ್ ಅಭಿನಯದ 'ಬಿಗಿಲ್' (300 ಕೋಟಿ) ಮತ್ತು 'ವಾರಿಸು' (310 ಕೋಟಿ) ಚಿತ್ರಗಳ ದಾಖಲೆಯನ್ನು ಮೀರಿಸಿದೆ. ವಿಜಯ್ ಅವರ ದಾಖಲೆಯನ್ನೇ ಮುರಿದ ಸಿನಿಮಾವನ್ನು ಹಿಡಿದುಕೊಂಡು, ನಿರ್ದೇಶಕರು ಮತ್ತೆ ವಿಜಯ್ ಅವರನ್ನೇ ಹೊಗಳುತ್ತಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. "ಸೂರ್ಯ ಇಲ್ಲದಿದ್ದರೆ ಈ ಸಿನಿಮಾ ಇಷ್ಟೊಂದು ಕಲೆಕ್ಷನ್ ಮಾಡುತ್ತಿರಲಿಲ್ಲ" ಎಂಬುದು ಅಭಿಮಾನಿಗಳ ವಾದ.

68
Image Credit : Asianet News

ಸೂರ್ಯ ಅವರ 'ಕ್ಲಾಸಿ' ಪೋಸ್ಟ್!

ವಿವಾದದ ಬೆಂಕಿ ಹೊತ್ತಿ ಉರಿಯುತ್ತಿರುವಾಗಲೇ ನಟ ಸೂರ್ಯ ಅವರು ಇನ್ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. "ಪ್ರೀತಿಯಿಂದ ಮುಂದುವರಿಯಿರಿ. ವಿನಮ್ರ ಮತ್ತು ಉದಾರರಾಗಿರಿ" ಎಂದು ಅವರು ಬರೆದುಕೊಂಡಿದ್ದಾರೆ.

78
Image Credit : Dream Warrior Pictures

ಈ ಪೋಸ್ಟ್ ಅನ್ನು ಅಭಿಮಾನಿಗಳು ತಮ್ಮ ನಟನ ಘನತೆಯ ಸಂಕೇತ ಎಂದು ಕೊಂಡಾಡುತ್ತಿದ್ದಾರೆ. ಗಲಾಟೆ ಮಾಡುವ ಅಭಿಮಾನಿಗಳಿಗೆ ಸೂರ್ಯ ಪರೋಕ್ಷವಾಗಿ ಶಾಂತವಾಗಿರಲು ಸಲಹೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

88
Image Credit : instagram

ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ಈ ಚಿತ್ರವು ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತದೆ. ಏನೇ ವಿವಾದಗಳಿದ್ದರೂ, 'ಕರುಪ್ಪು' ಸದ್ಯಕ್ಕೆ ಕಾಲಿವುಡ್‌ನ ಸುನಾಮಿಯಾಗಿ ಮಾರ್ಪಟ್ಟಿರುವುದಂತೂ ಸತ್ಯ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ನಟ ಸೂರ್ಯ
ದಳಪತಿ ವಿಜಯ್
ಮನರಂಜನಾ ಸುದ್ದಿ
ವೈರಲ್ ಸುದ್ದಿ
Latest Videos
Recommended Stories
Recommended image1
ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಜೂ.ಎನ್‌ಟಿಆರ್‌, ರಿಷಬ್ ಶೆಟ್ಟಿ ವಿಶ್: ‘ಡ್ರ್ಯಾಗನ್’ ಬಗ್ಗೆ ಕೊಟ್ಟ ಸುಳಿವು ವೈರಲ್!
Recommended image2
'ಓಟಿಟಿಗಳ ಕಾಲ ಮುಗಿದಿದೆ': ನಿರ್ಮಾಪಕರಿಗೆ ಅಲ್ಲು ಅರ್ಜುನ್‌ ತಂದೆ ಕೊಟ್ಟ ಎಚ್ಚರಿಕೆ ಏನು?
Recommended image3
Peddi: ರಾಮ್‌ ಚರಣ್‌-ಶಿವಣ್ಣ ಶ್ರಮ ಪಾಪ ನೀರಲ್ಲಿ ಹೋಮ: ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ಗೆ ಮತ್ತೊಂದು ಮೊಳೆ!
Related Stories
Recommended image1
ಸಿಎಂ ವಿಜಯ್ ಮಗ ಜೇಸನ್ ಸಂಜಯ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಹೀರೋ; ಹೀಗೂ ಇರಬಹುದಾ ಸ್ಟಾರ್ ಮಗ?
Recommended image2
ವಿಜಯ್ ಸಿಎಂ ಆಗೋದಕ್ಕೂ ಮೊದಲು ತ್ರಿಶಾಗೆ ಬೈದಿದ್ದ ಈ ನಟ ಈಗ ಮಾಡಿದ್ದೇನು? ಮುಂದೇನ್ ಗ್ರಹಚಾರ ಕಾದಿದೆ!?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved