- Home
- Entertainment
- Cine World
- ಬಾಲಿವುಡ್ ಸೀಕ್ರೆಟ್ ವ್ಯಾಟ್ಸಾಪ್ ಗ್ರೂಪ್ ಕರಾಳತೆ ಬಿಚ್ಚಿಟ್ಟ ಕನ್ನಡ ಸಿನಿಮಾ ನಟಿ ಎರಿಕಾ
ಬಾಲಿವುಡ್ ಸೀಕ್ರೆಟ್ ವ್ಯಾಟ್ಸಾಪ್ ಗ್ರೂಪ್ ಕರಾಳತೆ ಬಿಚ್ಚಿಟ್ಟ ಕನ್ನಡ ಸಿನಿಮಾ ನಟಿ ಎರಿಕಾ
ನಿನ್ನಿಂದಲೇ, ಬುಗುರಿ ಸೇರಿದಂತೆ ಕೆಲ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಎರಿಕಾ ಇದೀಗ ಬಾಲಿವುಡ್ ಪರದೆ ಹಿಂದೆ ನಡೆಯುತ್ತಿರುವ ಕರಾಳ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಸೀಕ್ರೆಟ್ ವ್ಯಾಟ್ಸಾಪ್ ಗ್ರೂಪ್ ಸೇರಿದಂತೆ ಹಲವು ಊಹೆಗೂ ನಿಲುಕದ ಘಟನೆಗಳನ್ನು ಏರಿಕಾ ಹೇಳಿದ್ದಾರೆ.

ಎರಿಕಾ ಫೆರ್ನಾಂಡೀಸ್ ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಚಿರಪರಿಚಿ. ನಿನ್ನಿಂದಲೇ, ಬುಗುರಿ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಎರಿಕಾ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಹಿಂದಿ ಸೀರಿಯಲ್ ಸೇರಿದಂತೆ ಟೆಲಿವಿಶನ್‌ನಲ್ಲೂ ಮಿಂಚಿದ್ದಾರೆ. ಇದರ ನಡುವೆ ಬಾಲಿವುಡ್ ಆಫರ್‌ನಿಂದ ಕೆಲಸ ಶುರು ಮಾಡಿದ ಎರಿಕಾ ಫೆರ್ನಾಂಡಿಸ್ ದಿಢೀರ್ ಬ್ರೇಕ್ ಪಡೆದು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೀಗ ಎರಿಕಾ ಈ ಬ್ರೇಕ್ ಹಿಂದಿನ ಕಾರಣವನ್ನೂ ಬಹಿರಂಗಪಡಿಸಿದ್ದಾರೆ.
ಎರಿಕಾ ಫೆರ್ನಾಂಡಿಸ್ ಬಾಲಿವುಡ್‌ನಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ದಾರೆ. ಈ ವೇಳೆ ಪರದೆ ಮುಂದೆ ಉತ್ತಮವಾಗಿದ್ದರೂ ಪರದೆ ಹಿಂದೆ ಅಸಲಿ ಮುಖ ಬಯಲಾಗುತ್ತದೆ. ನಟಿಯರನ್ನು ಬಾಲಿವುಡ್ ಯಾವ ರೀತಿ ಬಳಸಿಕೊಳ್ಳುತ್ತಿದೆ ಅನ್ನೋ ಕುರಿತು ಎರಿಕಾ ಫರ್ನಾಂಡಿಸ್ ಹೇಳಿದ್ದಾರೆ. ಇದೇ ವೇಳೆ ಬಾಲಿವುಡ್‌ನ ಸೀಕ್ರೆಟ್ ವ್ಯಾಟ್ಸೂಪ್ ಗ್ರೂಪ್ ಕುರಿತು ಹೇಳಿದ್ದಾರೆ.
ಬಾಲಿವುಡ್‌ನ ಕರಾಳತೆಯಿಂದ ಬೇಸತ್ತ ಎರಿಕಾ ನಟನೆಯಿಂದ ದೂರ ಉಳಿದಿದ್ದಾರೆ. ಇತ್ತೀಚೆಗೆ ಪಾಡ್ ಕಾಸ್ಟ್ ಒಂದರಲ್ಲಿ ಏರಿಕಾ ಈ ರಹಸ್ಯಗಳನ್ನು ಹೇಳಿದ್ದಾರೆ. ಬಾಲಿವುಡ್ ಹೊರಗಿನಿಂದ ಹೊಳೆಯು ರೀತಿ ಒಳಗಿಲ್ಲ. ಗ್ಲಾಮರ್, ಫನ್, ಫೇಮ್ ಎಂದೆಲ್ಲಾ ಹೊರಗಿನಿಂದ ಕಾಣುತ್ತೆ. ಆದರೆ ಒಳಗೆ ಇರುವಷ್ಟು ಹುಳುಕು ಮತ್ಯಾವ ಕ್ಷೇತ್ರದಲ್ಲೂ ಇರವುದಿಲ್ಲ ಎಂದಿದ್ದಾರೆ.
ಬಾಲಿವುಡ್‌ನಲ್ಲಿ ಕೆಲವೇ ಕೆಲವು ಮಂದಿ ಉತ್ತಮರಿದ್ದಾರೆ.ಇನ್ನುಳಿದವರು ಪರದೆ ಮುಂದೆ ಉತ್ತಮರಾಗಿ ಕಾಣಿಸುತ್ತಾರೆ. ಆದರೆ ಅವರ ನಿಜ ರೂಪ ಗೊತ್ತಾದರೆ ನೀವು ಒಂದು ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಕಾಸ್ಟಿಂಗ್ ಕೌಚ್ ಕುರಿತು ಹೇಳಿದ ನಟಿ, ನನಗೆ ಕೆಲ ಅವಕಾಶಗಳು ಬಂದಿತ್ತು. ಪಾತ್ರ, ಅದಕ್ಕೆ ತಯಾರಿ ಸೇರಿದಂತೆ ಕೆಲ ಮಾತುಗಳು ನಡೆದ ಬಳಿಕ ಕೊನೆಯ ಹಂತದಲ್ಲಿ ಇದರ ಬೇಡಿಕೆಗಳೇ ಹೆಚ್ಚಾಗುತ್ತಿತ್ತು. ರಾತ್ರಿಯ ಕೆಲಸ, ಅವಶ್ಯಕತೆ, ಮಂಚ ಹಂಚಿಕೊಳ್ಳುವ ಅನಿವಾರ್ಯತೆ ಕುರಿತು ಹೇಳಲಾಗುತ್ತೆ. ಇವನ್ನು ನಿರಾಕರಿಸಿದ ಕಾರಣ ಬಾಲಿವುಡ್‌ನಲ್ಲಿ ಅವಕಾಶ ಸಿಗಲಿಲ್ಲ ಎಂದು ಎರಿಕಾ ಫರ್ನಾಂಡಿಸ್ ಹೇಳಿದ್ದಾರೆ.
ಹಾಗಂತ ಎಲ್ಲರೂ ಹಾಗಲ್ಲ. ಯಾವುದೇ ಬೆಂಬಲವಿಲ್ಲದೆ, ಗಾಡ್‌ಫಾಧರ್ ಅಥವಾ ರೆಫರೆನ್ಸ್ ಇಲ್ಲದೆ ಬಾಲಿವುಡ್‌ನಲ್ಲಿ ಪ್ರತಿಭೆ ಒಂದರಿಂದಲೇ ಮಿಂಚಲು ಅಸಾಧ್ಯ ಎನ್ನುವಂತಾಗಿದೆ. ಇದಕ್ಕಾಗಿ ಕೆಲ ಸೀಕ್ರೆಟ್ ವ್ಯಾಟ್ಸಾಪ್ ಗ್ರೂಪ್‌ಗಳಿದೆ. ಇಲ್ಲಿ ಈ ರೀತಿಯ ವಿಷಗಳೇ ಚರ್ಚೆ. ಅವರ ಬೇಡಿಕೆ ಒಪ್ಪಿಕೊಂಡರೆ ಪ್ರತಿಭೆ ಇಲ್ಲದಿದ್ದರೂ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತದೆ ಎಂದಿದ್ದಾರೆ.
ಏರಿಕಾ ಫೆರ್ನಾಂಡಿಸ್ ಸದ್ಯ ನಟನೆಯಿಂದ ದೂರ ಉಳಿದಿದ್ದಾರೆ. ಅದರಲ್ಲೂ ಬಾಲಿವುಡ್ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಸದ್ಯ ಎರಿಕಾ ಫೆರ್ನಾಂಡಿಸ್ ದುಬೈನಲ್ಲಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.