ದಿವ್ಯಾ ಭಾರತಿ ಅವರ ಅಪೂರ್ಣ ಚಿತ್ರಗಳನ್ನು ಪೂರ್ಣಗೊಳಿಸಿದ ನಟಿಯರು ಇವರೇ ನೋಡಿ!
ದಿವ್ಯಾ ಭಾರತಿ ಅವರ 32ನೇ ವರ್ಷದ ಪುಣ್ಯತಿಥಿಯಂದು, ಅವರ ಅಪೂರ್ಣ ಚಿತ್ರಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ, ಅವುಗಳನ್ನು ಇತರ ನಟಿಯರು ಪೂರ್ಣಗೊಳಿಸಿದರು.

ದಿವ್ಯಾ ಭಾರತಿ ತೀರಿಕೊಂಡು 32 ವರ್ಷಗಳಾಗಿವೆ. ಅವರ ಸಾವು 1993ರಲ್ಲಿ ಕಟ್ಟಡದಿಂದ ಬಿದ್ದು ಸಂಭವಿಸಿತು. ಅದರೆ ನಟಿ ದಿವ್ಯಾ ಭಾರತಿಯನ್ನು ಸಿನಿಪ್ರೇಮಿಗಳು ಯಾವತ್ತೂ ಮರೆಯಲು ಸಾಧ್ಯವಿಲ್ಲ.
ದಿವ್ಯಾ ಭಾರತಿ ಸಾಯುವ ಮೊದಲು ಸುಮಾರು 10 ಚಿತ್ರಗಳಲ್ಲಿ ನಟಿಸುತ್ತಿದ್ದರು. ಅವರ ಮರಣದ ನಂತರ, ನಿರ್ಮಾಪಕರು ಆ ಚಿತ್ರಗಳನ್ನು ಪೂರ್ಣಗೊಳಿಸಿದರು.
1993ರಲ್ಲಿ ಬಿಡುಗಡೆಯಾದ 'ಧನವಾನ್' ಚಿತ್ರದಲ್ಲಿ ಕರಿಷ್ಮಾ ಕಪೂರ್ ದಿವ್ಯಾ ಭಾರತಿ ಅವರ ಜಾಗಕ್ಕೆ ನಟಿಸಿದರು. ದಿವ್ಯಾ ಭಾರತಿಯವರ ಸ್ಥಾನ ತುಂಬಲು ಅಸಾಧ್ಯವಾದರೂ ಕೂಡ ಆ ಸಿನಿಮಾವನ್ನು ಪೂರ್ತಿಗೊಳಿಸಿ ಬಿಡುಗಡೆ ಮಾಡಲೇಬೇಕಿತ್ತು.
1994ರಲ್ಲಿ ಬಂದ 'ಲಾಡ್ಲಾ' ಚಿತ್ರದಲ್ಲಿ ಶ್ರೀದೇವಿ ದಿವ್ಯಾ ಭಾರತಿ ಅವರ ಜಾಗಕ್ಕೆ ನಟಿಸಿದರು. ಸಿನಿಮಾ ಹಿಟ್ ಆಯಿತು. ಶ್ರೀದೇವಿ ಮಾತ್ರ ದಿವ್ಯಾ ಭಾರತಿ ಜಾಗ ತುಂಬಲು ಸಾಧ್ಯ ಎಂಬ ಮಾತು ಸಿನಿಪ್ರೇಕ್ಷಕವಲಯದಲ್ಲಿ ಚಾಲ್ತಿಯಲ್ಲಿತ್ತು.
1994ರಲ್ಲಿ ಬಂದ 'ಮೊಹ್ರಾ' ಮತ್ತು 'ದಿಲ್ವಾಲೆ' ಚಿತ್ರಗಳಲ್ಲಿ ರವೀನಾ ಟಂಡನ್ ದಿವ್ಯಾ ಭಾರತಿ ಅವರ ಜಾಗಕ್ಕೆ ನಟಿಸಿದರು. ಆ ಎರಡೂ ಚಿತ್ರಗಳಲ್ಲಿ ಸಿನಿಪ್ರೇಕ್ಷಕರು ದಿವ್ಯಾ ಭಾರತಿಯವರನ್ನು ಮಿಸ್ ಮಾಡಿಕೊಂಡರು.
1994ರಲ್ಲಿ ಬಂದ 'ವಿಜಯಪಥ್' ಚಿತ್ರದಲ್ಲಿ ಟಬು ದಿವ್ಯಾ ಭಾರತಿ ಅವರ ಜಾಗಕ್ಕೆ ನಟಿಸಿದರು. ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಪಾತ್ರವನ್ನು ನಟಿ ದಿವ್ಯಾ ಭಾರತಿ ತುಂಬಾ ಇಷ್ಟಪಟ್ಟಿದ್ದರಂತೆ.
1995ರಲ್ಲಿ ಬಂದ 'ಆಂದೋಲನ್' ಚಿತ್ರದಲ್ಲಿ ಮಮತಾ ಕುಲಕರ್ಣಿ ದಿವ್ಯಾ ಭಾರತಿ ಅವರ ಜಾಗಕ್ಕೆ ನಟಿಸಿದರು. ಆದರೆ, ಆ ಚಿತ್ರ ಹೇಳಿಕೊಳ್ಳುವಂಥಾ ಸಕ್ಸಸ್ ಪಡೆಯಲಿಲ್ಲ.
1995ರಲ್ಲಿ ಬಂದ 'ಕರ್ತವ್ಯ' ಚಿತ್ರದಲ್ಲಿ ಜೂಹಿ ಚಾವ್ಲಾ ದಿವ್ಯಾ ಭಾರತಿ ಅವರ ಜಾಗಕ್ಕೆ ನಟಿಸಿದರು. ಆ ಸಿನಿಮಾದ ಪಾತ್ರ ದಿವ್ಯಾ ಭಾರತಿಯವರಿಗೆ ಹೊಂದಿಕೆ ಆದಷ್ಟು ಜೂಹಿ ಚಾವ್ಲಾಗೆ ಆಗಲಿಲ್ಲ ಎಂಬಮಾತು ಕೇಳಿ ಬಂತು.
1995ರಲ್ಲಿ ಬಂದ 'ಕನ್ಯಾದಾನ' ಚಿತ್ರದಲ್ಲಿ ಮನೀಷಾ ಕೊಯಿರಾಲಾ ದಿವ್ಯಾ ಭಾರತಿ ಅವರ ಜಾಗಕ್ಕೆ ನಟಿಸಿದರು. ಆ ಪಾತ್ರವನ್ನೂ ಕೂಡ ದಿವ್ಯಾ ಭಾರತಿಯವರು ತುಂಬಾ ಇಷ್ಟಪಟ್ಟಿದ್ದರಂತೆ.
1995ರಲ್ಲಿ ಬಂದ 'ಹಲ್ಚಲ್' ಚಿತ್ರದಲ್ಲಿ ಕಾಜೋಲ್ ಅಗಲಿದ ನಟಿ ದಿವ್ಯಾ ಭಾರತಿ ಅವರ ಜಾಗಕ್ಕೆ ನಟಿಸಿದರು. ಆ ಚಿತ್ರದ ಪಾತ್ರ ಕೂಡ ದಿವ್ಯಾ ಭಾರತಿಗೆ ಹೆಚ್ಚು ಸ್ಯೂಟ್ ಆಗುತ್ತಿತ್ತು ಎಂಬ ಮಾತು ಕೇಳಿ ಬಂದಿದೆ.
1995ರಲ್ಲಿ ಬಂದ 'ಅಂಗರಕ್ಷಕ' ಚಿತ್ರದಲ್ಲಿ ಪೂಜಾ ಭಟ್ ದಿವ್ಯಾ ಭಾರತಿ ಅವರ ಜಾಗಕ್ಕೆ ನಟಿಸಿದರು. ಆದರೆ ಆ ಚಿತ್ರ ಅಷ್ಟೇನೂ ಯಶಸ್ಸು ಸಾಧಿಸಲಿಲ್ಲ.