ಅಯ್ಯೋ! ಇದೆಂತ ಕರ್ಮ...ಮದ್ವೆ ಆಗದೇ ಇರೋದಕ್ಕೆ ಅಪ್ಪನೇ ಕಾರಣ ಎಂದು ಬಿಟ್ಟ ಏಕ್ತಾ!
ಸೆರೋಗೆಸಿ ಮೂಲಕ ಮಗು ಮಾಡಿಕೊಂಡ ಏಕ್ತಾ ಕಪೂರ್ ಮದುವೆ ಆಗದೇ ಇರಲು ತಂದೆನೇ ಕಾರಣ ಎಂದಿದ್ದಾರೆ....

ಏಕ್ತಾ ಕಪೂರ್. ಕಸೌಟಿ ಜಿಂದಗಿ ಕೀ, ಕಹಾನಿ ಘರ್ ಘರ್ ಕಿ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ, ಬಡೇ ಅಚೇ ಲಗ್ತೇ ಹೈ, ಕಸಮ್ ಸೇ, ಪವಿತ್ರ ರಿಶ್ತಾ, ಕುಂಕುಮ್ ಭಾಗ್ಯ, ನಾಗಿನ್ ಮುಂತಾದ ಹಿಟ್ ಧಾರಾವಾಹಿ ನೀಡಿದ ಏಕ್ತಾ ಕಪೂರ್.
134 ಧಾರಾವಾಹಿಗಳ ನಿರ್ಮಾಣ, 38 ಸಿನಿಮಾಗಳ ನಿರ್ಮಾಣ, 28 ವೆಬ್ ಸೀರಿಸ್‌ಗಳ ನಿರ್ಮಾಣ ಮಾಡಿ ಪ್ರಖ್ಯಾತ ಬಾಲಾಜಿ ಟೆಲಿಫಿಲಮ್ಸ್ ಒಡತಿಯಾಗಿದ್ದಾರೆ.
48 ವರ್ಷ ಏಕ್ತಾ ಕಪೂರ್ ಈಗಾಗಲೆ ಗಂಡು ಮಗುವಿನ ತಾಯಿ ಆಗಿದ್ದಾರೆ. ಆದರೆ ಏಕ್ತಾ ಇನ್ನು ಮದುವೆಯಾಗಿಲ್ಲ ಯಾಕೆ ಅನ್ನೋದಕ್ಕೆ ಇಲ್ಲಿದೆ ಉತ್ತರ...
ನಿರ್ಮಾಪಕ ಕರಣ್ ಜೋಹಾರ್ ಮತ್ತು ಏಕ್ತಾ ಕಪೂರ್ ಸುದ್ದಿಯಲ್ಲಿದ್ದಾರೆ. ಬಹಳ ವರ್ಷಗಳಿಂದ ಒಟ್ಟಿಗೆ ಇದ್ದರು ಎನ್ನಲಾಗಿದೆ ಅಲ್ಲದ ಬಾಲ್ಯದಿಂದಲೂ ಪರಸ್ಪರ ಸಂಪರ್ಕದಲ್ಲಿದ್ದವರು. ಮದುವೆಯಾಗಲು ಸಿದ್ಧವಾಗಿದ್ದಾರೆ ಎಂದು ಸುದ್ದಿ ಹಬ್ಬಿತ್ತು.
ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಏಕ್ತಾ ಕಪೂರ್, ತಮ್ಮ ತಾಯ್ತನದ ಬಗ್ಗೆ ಮಾತನಾಡಿದ್ದರು. ಮದುವೆ ಆಗದೆ ತಾಯಿ ಆಗಲು ನಿಶ್ಚಯಿಸಿದ್ದೇಕೆ ಎಂಬುದರ ಬಗ್ಗೆ ಅವರು ತಿಳಿಸಿದ್ದರು.
ಏಕ್ತಾ ಕಪೂರ್ ಕೇವಲ 17ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು (Career) ಪ್ರಾರಂಭಿಸಿದರು. ಕೇವಲ 19 ನೇ ವಯಸ್ಸಿನಲ್ಲಿ ಹಮ್ ಪಾಂಚ್ (Hum Panch) ಎಂಬ ಧಾರಾವಾಹಿಯನ್ನು ನಿರ್ಮಿಸಿದ್ದರು.
ನನಗೆ 17 ವರ್ಷ ಮತ್ತು ಆ ಸಮಯದಲ್ಲಿ ನನ್ನ ತಂದೆ ಮದುವೆಯಾಗು ಸೆಟಲ್ ಆಗು ಅಥವಾ ಕೆಲಸ ಮಾಡಿ ನಿಮ್ಮ ವೃತ್ತಿಜೀವನವನ್ನು ಮಾಡು' ಎಂದು ಹೇಳಿದ್ದರು. ಪಾಕೆಟ್ ಮನಿ ಬಿಟ್ಟು ನನಗೆ ಒಂದು ರೂಪಾಯಿ ಕೊಡುವುದಿಲ್ಲ ಎಂದಿದ್ದರು.
ಅದಕ್ಕಾಗಿಯೇ ನನಗೆ ಹಣ ಬೇಕಾದರೆ ಅದನ್ನು ನಾನೇ ಸಂಪಾದಿಸಬೇಕು ಎಂದು ನಾನು ನಿರ್ಧರಿಸಿದೆ. ನಂತರ ನಾನು ಜಾಹೀರಾತು ಏಜೆನ್ಸಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ.
ಆ ಸಮಯದಲ್ಲಿ ನಾನು ಇದ್ದ ಪರಿಸ್ಥಿತಿಯಿಂದ ನನಗೆ ತುಂಬಾ ಸಂತೋಷವಾಯಿತು ಮತ್ತು ಎಲ್ಲವೂ ಚೆನ್ನಾಗಿ ಆಗುತ್ತಿತ್ತು, ಆದ್ದರಿಂದ 22 ವರ್ಷ ವಯಸ್ಸಿನಲ್ಲಿ ನಾನು ಮದುವೆಯ ಬಗ್ಗೆ ಯೋಚಿಸುತ್ತೇನೆ ಎಂದು ಕೊಂಡಿದ್ದೆ.
ಆಗ ಮದುವೆಯಾಗುವ ಮನಸ್ಸು ಬರಲಿಲ್ಲ. ಅಪ್ಪನ ಮಾತು ಕಿವಿಯಲ್ಲಿ ಗುನುಗುತ್ತಲೇ ಇತ್ತು. ದುಡಿಯುವ ಹಂಬಲ ಹೆಚ್ಚಾಗಿತ್ತು ಎಂದಿದ್ದಾರೆ.ನಾನು ನಿರ್ಮಿಸಿದ ಹಲವು ಧಾರಾವಾಹಿಗಳ ಮೂಲಕ ಮಹಿಳೆಯರಲ್ಲಿ ಮದುವೆಯೇ ಅಂತಿಮ. ಮದುವೆ ಆಗದೇ ಇದ್ದರೆ ಭವಿಷ್ಯ ಇಲ್ಲ ಎಂಬಂತಹ ಭಾವನೆ ಹುಟ್ಟುವಂತೆ ಮಾಡಿಬಿಟ್ಟಿದ್ದೇನೆ. ಹಾಗಾಗಿ ನಾನು ಮದುವೆ ಆಗಬಾರದೆಂದು ವಿಧಿ ನಿರ್ಧರಿಸಿದಂತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.