ವಿಘ್ನೇಶ್ ಶಿವನ್ ಜೊತೆ ಬ್ರೇಕಪ್‌ನ ಹಿಂಟ್‌ ನೀಡಿದ್ರಾ ನಯನತಾರಾ ?

First Published Jun 11, 2020, 6:11 PM IST

ದಕ್ಷಿಣದ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಬಹುಭಾಷಾ ನಟಿ. ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಯನತಾರಾ ಪರ್ಸನಲ್‌‌ ಲೈಫ್‌ ಸಖತ್‌ ಇಂಟರೆಸ್ಟಿಂಗ್‌. ಡೈರೆಕ್ಟರ್‌ ವಿಘ್ನೇಶ್ ಶಿವನ್ ಜೊತೆ ನಟಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ಈ ಲಾಕ್‌ಡೌನ್‌ ಸಮಯದಲ್ಲಿ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬೊಂದು ಗಾಸಿಪ್ ಹರಡುತ್ತಿತ್ತು. ಆದರೆ ನಟಿಯ ಪರ್ಸನಲ್‌ ಲೈಫ್‌ಗೆ ಸಂಬಂಧಿಸಿದ ಹೊಸ ಅಪ್ಡೇಟ್ ಬಂದಿದ್ದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ಸಂಬಂಧವನ್ನು ಕೊನೆಗೊಳ್ಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬೊಂದು ಗಾಸಿಪ್ ಹರಡಿದೆ.