ಐಶ್ವರ್ಯ ರೈ ಸಲ್ಮಾನ್ ಖಾನ್ ಜೀವನ ಹಾಳ್ ಮಾಡಿದ್ರಾ? ಸಹೋದರ ಸೋಹೈಲ್ ಹೀಗೆ ಹೇಳಿದ್ಯಾಕೆ?
ಸಲ್ಮಾನ್ ಖಾನ್ ತಮ್ಮ ಸೋಹೈಲ್ ಖಾನ್, ಐಶ್ವರ್ಯ ರೈ ಸಲ್ಮಾನ್ ಜೊತೆಗಿನ ಸಂಬಂಧವನ್ನು ಒಪ್ಪಿಕೊಳ್ಳಲೇ ಇಲ್ಲ ಅಂತ ಹೇಳಿದ್ದಾರೆ.
ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಅವರ ಪ್ರೇಮಕಥೆ ಬಾಲಿವುಡ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ವಿಚಾರ. ಸಲ್ಮಾನ್ ಮತ್ತು ಐಶ್ವರ್ಯ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಚಿತ್ರಗಳಲ್ಲಿ ಒಂದಾದ ಹಮ್ ದಿಲ್ ದೇ ಚುಕೆ ಸನಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಿನಿಂದ ಇವರಿಬ್ಬರ ಸಂಪರ್ಕವು ಅರಳಿದೆ. ಆದಾಗ್ಯೂ, ಸಲ್ಮಾನ್ ಮತ್ತು ಐಶ್ವರ್ಯ ಕೇವಲ ಎರಡು ವರ್ಷಗಳ ನಂತರ ತಮ್ಮ ಸಂಬಂಧವನ್ನು ಮುರಿದು ಕೊಂಡರು.
ಈ ಪ್ರೇಮಕಥೆಯು ಪ್ರಣಯದಿಂದ ನೋವಿನ ವಿಘಟನೆಗಳು ಮತ್ತು ಮಾನಸಿಕ ಯಾತನೆಯವರೆಗೆ ಎಲ್ಲವನ್ನೂ ಕಂಡಿದೆ. ಐಶ್ವರ್ಯ ಅವರು ಸಲ್ಮಾನ್ ಖಾನ್ ಕೆಟ್ಟ ವರ್ತನೆ, ದೈಹಿಕವಾಗಿ ಹೇಗೆ ಹೊಡೆದರು ಎಂದು ಉಲ್ಲೇಖಿಸಿದಾಗ ಇದು ಹೊರಬಂದಿತು. “ನಾನು ಅವರ ಕೆಟ್ಟ ಮದ್ಯದ ದುರ್ವರ್ತನೆಯ ಮೂಲಕ ಅವರೊಂದಿಗೆ ನಿಂತಿದ್ದೆ. ಪ್ರತೀಕಾರವಾಗಿ, ನಾನು ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂದಿದ್ದರು.
ಸಲ್ಮಾನ್ ಪಾತ್ರದ ಬಗ್ಗೆ ಆಕೆಯ ವಿವಾದಾತ್ಮಕ ಸಂದರ್ಶನ ಮತ್ತು ಹೇಳಿಕೆಗಳು ಅವರ ತಮ್ಮ ಸೋಹೈಲ್ ಅವರನ್ನು ಕೆರಳಿಸಿತು. “ಈಗ ಅವಳು (ಐಶ್ವರ್ಯ ರೈ) ಸಾರ್ವಜನಿಕವಾಗಿ ಅಳುತ್ತಿದ್ದಾಳೆ. ಅವಳು ಅವನೊಂದಿಗೆ ಪ್ರಯಾಣಿಸುತ್ತಿದ್ದಾಗ ಮತ್ತು ನಮ್ಮ ಮನೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾಗ ಸಂಬಂಧವನ್ನು ಎಂದಾದರೂ ಗುರುತಿಸಿದ್ದಾಳೆಯೇ? ವಿವೇಕ್ ಓಬೆರಾಯ್ ಜೊತೆ ಐಶ್ವರ್ಯ ರೈ ಸಂಬಂಧ ಹೊಂದಿದ್ದರು ಎಂದು ಕೂಡ ಸೋಹೈಲ್ ಬಾಂಬ್ ಸಿಡಿಸಿದರು.
ಐಶ್ವರ್ಯಾ ರೈ ಅವರೊಂದಿಗಿನ ಬ್ರೇಕಪ್ ಬಳಿಕ ಭಾಯಿಜಾನ್ ಜೀವನದಲ್ಲಿ ಅನೇಕ ಹುಡುಗಿಯರು ಬಂದರು, ಆದರೆ ಈ ಸಂಬಂಧವು ಮದುವೆಯ ವರೆಗೂ ಹೋಗಲಿಲ್ಲ. ಇಂದಿಗೂ, ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಇರುವ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ.
ಸಲ್ಮಾನ್ ಖಾನ್ ಮಾಜಿ ಪ್ರೇಮಿಗಳ ಪಟ್ಟಿಯಲ್ಲಿ ಸಂಗೀತಾ ಬಿಜಲಾನಿ, ಸೋಮಿ ಅಲಿ, ಐಶ್ವರ್ಯ ರೈ, ಕತ್ರಿನಾ ಕೈಫ್, ಯೂಲಿಯಾ ವಂತೂರ್ ಹೆಸರುಗಳು ಸೇರಿವೆ. ಆದರೆ ಅವುಗಳಲ್ಲಿ ಯಾವುದೂ ಸಲ್ಮಾನ್‌ನ ಮೊದಲ ಪ್ರೀತಿ ಅಲ್ಲ. ಅವರ ಮೊದಲ ಗೆಳತಿಯ ಹೆಸರು ಶಾಹೀನ್ ಜಾಫ್ರಿ. ಇವರು ಹಿರಿಯ ನಟ ಅಶೋಕ್ ಕುಮಾರ್ ಅವರ ಮೊಮ್ಮಗಳು ಎನ್ನಲಾಗುತ್ತದೆ. ಅಲ್ಲದೇ ಶಾಹೀನ್ ಕಿಯಾರಾ ಅಡ್ವಾಣಿ ಅವರ ತಾಯಿಯ ಮಲತಂಗಿ ಎನ್ನಲಾಗಿದೆ. ಸಲ್ಮಾನ್ ಖಾನ್ ಮತ್ತು ಶಾಹೀನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರಿತಿಯಲ್ಲಿದ್ದರು ಭಿನ್ನಾಬಿಪ್ರಯಾಗಳು ಬಳಿಕ ಸುಮಾರು ಮೂರು ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು.