ದೀಪಿಕಾ - ಐಶ್ವರ್ಯಾ: ನಟಿಯರ ಬ್ಯೂಟಿ ಸೀಕ್ರೇಟ್‌ಗಳು
ಸಿನಿಮಾ ನಟಿಯರ ಹಾಗೆ ಯಾವಾಗಲೂ ನಾವು, ನೀವೆಲ್ಲಾ ಸುಂದರವಾಗಿ ಕಾಣುವುದು ಸುಲಭವಲ್ಲ. ತಮ್ಮ ಸೌಂದರ್ಯದ ಬಗ್ಗೆ ಸಾಕಷ್ಷು ಕಾಳಜಿ ವಹಿಸುತ್ತಾರೆ ಈ ನಟಿಯರು. ಅವರದ್ದೇ ಕೆಲವು ಬ್ಯೂಟಿ ಸಿಕ್ರೇಟ್‌ಗಳನ್ನೂ ಹೊಂದಿರುತ್ತಾರೆ. ದೀಪಿಕಾ, ಐಶ್ವರ್ಯಾ, ಅನುಷ್ಕಾ ವರೆಗೆ ನಟಿಯರು ತಮ್ಮ ಸೌಂದರ್ಯ ರಹಸ್ಯ ಬಹಿರಂಗಪಡಿಸಿದ್ದಾರೆ. ಏನದು?

ಬಾಲಿವುಡ್ ತಾರೆಯರು ಸುಂದರವಾಗಿ ಕಾಣುವುದರಲ್ಲಿ ಕೇವಲ ನುರಿತ ಮೇಕಪ್ ಆರ್ಟಿಸ್ಟ್‌ಗಳ ಕೈಚಳಕ ಅಷ್ಟೇ ಕಾರಣವಲ್ಲ. ಹೆಚ್ಚಿನ ಸ್ಟಾರ್‌ಗಳು ಸೌಂದರ್ಯ ಕಾಪಾಡಿಕೊಳ್ಳಲು ತಮ್ಮದೇ ಬ್ಯೂಟಿ ಸಿಕ್ರೇಟ್‌ಗಳನ್ನು ಹೊಂದಿದ್ದಾರೆ.

ಅವರು ಯಾವಾಗಲೂ ಪ್ರೇಸೆಂಟ್‌ಬಲ್ ಆಗಿ ಕಾಣಬೇಕಾಗಿರುವುದರಿಂದ, ಅವರು ತಮ್ಮ ಲುಕ್ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಅಂದರೆ ನಿಯಮಿತವಾಗಿ ಸೌಂದರ್ಯವನ್ನು ಹೆಚ್ಚಿಸುವ ಕೆಲವು ಟಿಪ್ಸ್ ಫಾಲೋ ಮಾಡಬೇಕು.

ಐಶ್ವರ್ಯಾ ರೈ ಬಚ್ಚನ್: ಇಡೀ ವಿಶ್ವವೇ ಇವರ ಸೌಂದರ್ಯದ ಫ್ಯಾನ್. ಈ ಮಾಜಿ ಮಿಸ್ ವರ್ಲ್ಡ್ ಚಿನ್ನದ ಹೊಳಪು ಪಡೆಯಲು ಅಡಿಗೆ ಮನೆಯ ಪದಾರ್ಥಗಳನ್ನು ಬಳಸುತ್ತಾರಂತೆ. ಹೀಗಾಗಿ, ಕಡಲೆ ಹಿಟ್ಟು, ಅರಿಶಿನ ಮತ್ತು ಹಾಲಿನಿಂದ ತಯಾರಿಸಿದ ಫೇಸ್ ಪ್ಯಾಕ್ ಬಳಸುತ್ತಾರೆ. ಟ್ಯಾನ್ ಜೊತೆ ದೇಹದಿಂದ ಟಾಕ್ಸಿನ್ ಹೊರಹಾಕುತ್ತವೆ. ಚರ್ಮವನ್ನು ಹೈಡ್ರೇಟ್ ಮಾಡಲು ಸೌತೆಕಾಯಿ ಪ್ಯಾಕ್ ಬಳಸುತ್ತಾರಂತೆ.

ಅನುಷ್ಕಾ ಶರ್ಮಾ: ನಟಿಯ ಹೊಳೆಯುವ ಚರ್ಮದ ಹಿಂದಿನ ರಹಸ್ಯವೆಂದರೆ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್. ಅನುಷ್ಕಾ ತನ್ನ ರಹಸ್ಯ ಫೇಸ್ ಪ್ಯಾಕ್ ಪದಾರ್ಥಗಳನ್ನು ಬಹಿರಂಗಪಡಿಸುತ್ತಾಳೆ. ಬೇವಿನ ಪುಡಿ, ಮೊಸರು, ರೋಸ್ ವಾಟರ್ ಮತ್ತು ಹಾಲು.

ದೀಪಿಕಾ ಪಡುಕೋಣೆ: ಈ ಸೂಪರ್ ಮಾಡೆಲ್ ಕಮ್ ನಟಿಯ ಮೇಕ್ಅಪ್ ಹಾಗೂ ನೋ ಮೇಕಪ್ ಲುಕ್ ಬೆರಗುಗೊಳಿಸುತ್ತದೆ. ಪಡುಕೋಣೆಯ ಸೌಂದರ್ಯ ರಹಸ್ಯವೆಂದರೆ ಪ್ರತಿದಿನ ಕನಿಷ್ಠ ಹತ್ತು ಲೋಟ ನೀರು ಕುಡಿಯುವುದು. ಇದು ಚರ್ಮದಿಂದ ಹಾನಿಕಾರಕ ಟಾಕ್ಸಿನ್ ಮತ್ತು ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ನೈಸರ್ಗಿಕವಾಗಿ ಚರ್ಮಕ್ಕೆ ಅಗತ್ಯವಾದ ಪೋಷಣೆ ನೀಡುವ ಮೂಲಕ ಚರ್ಮದ ತೇವವನ್ನು ಕಾಪಾಡುತ್ತದೆ.

ಸೋನಮ್ ಕಪೂರ್:  ಬಾಲಿವುಡ್‌ನ ಫ್ಯಾಷನಿಸ್ಟಾ ಸೋನಮ್ ಕಪೂರ್ ಆರೋಗ್ಯ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಬೆಳಗ್ಗೆ ಒಂದು ಚಮಚ ಜೇನುತುಪ್ಪ ಮತ್ತು ನಿಂಬೆಹಣ್ಣಿನೊಂದಿಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುತ್ತಾರಂತೆ.

ಕರೀನಾ ಕಪೂರ್ ಖಾನ್: ಪಟೌಡಿ ಕುಟುಂಬದ ಬೇಗಂ ಕರೀನಾ ಪ್ರತಿದಿನ ಎಂಟರಿಂದ ಹತ್ತು ಗ್ಲಾಸ್ ಕುದಿಸಿದ ನೀರನ್ನು ಕುಡಿಯುತ್ತಾರೆ. ದೇಹದಿಂದ ಎಲ್ಲಾ ಹಾನಿಕಾರಕ ಟಾಕ್ಸಿನ್ಸ್ ಹೊರಹಾಕಲು ಇದು ಸಹಾಯ ಮಾಡುತ್ತದೆ. ಒತ್ತಡದಿಂದ ಮುಕ್ತವಾಗಿರಲು ಅವಳ ಸೌಂದರ್ಯ ರಹಸ್ಯವೆಂದರೆ ನೆತ್ತಿಗೆ ಬಿಸಿ ಎಣ್ಣೆ ಮಸಾಜ್. ಇದು ವಿಶ್ರಾಂತಿ ಪಡೆಯಲು ಮತ್ತು ಮನಸ್ಸನ್ನು ಶಾಂತವಾಗಿ ಹಾಗೂ ಕಂಪೋಸ್ ಆಗಿಡಲು ಸಹಾಯ ಮಾಡುತ್ತದೆ.

ಆಲಿಯಾ ಭಟ್: ಸ್ಟುಡೆಂಟ್ ಅಫ್ ದಿ ಈಯರ್ ನಟಿ ಒಣ ಬೇವಿನ ಎಲೆಗಳು ಮತ್ತು ತುಳಸಿ ಎಲೆಗಳಿಂದ ಮಾಡಿದ ಫೇಸ್ ಪ್ಯಾಕ್ ಬಳಸುತ್ತಾರೆ. ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮವನ್ನು ಡಿಟಾಕ್ಸ್ ಮಾಡುತ್ತದೆ ಮತ್ತು ಚರ್ಮದಿಂದ ಕಲ್ಮಶಗಳನ್ನು ತೆಗೆದುಹಾಕುತ್ತದೆ.

ಹೇಮಾ ಮಾಲಿನಿ: ಬಾಲಿವುಡ್‌ನ ಡ್ರೀಮ್‌ಗರ್ಲ್ 69ನೇ ವಯಸ್ಸಿನಲ್ಲೂ ಯಂಗ್ ಆಗಿ ಕಾಣುತ್ತಾರೆ. ಬಿಸಿ ಎಣ್ಣೆ ಮಸಾಜ್ ನೀಡಿ, ಕೊಬ್ಬರಿ ಎಣ್ಣೆ ಜೊತೆ ನೆಲ್ಲಿಕಾಯಿ, ತುಳಸಿ ,ಬೇವಿನ ಎಲೆಗಳ ಹಾಟ್ ಆಯಿಲ್ ಮಸಾಜ್ ಹೇಮಮಾಲಿನಿಯ ಬ್ಯೂಟಿ ಸಿಕ್ರೇಟ್. ತೆಂಗಿನ ಎಣ್ಣೆಯಲ್ಲಿ ಈ ಪದಾರ್ಥಗಳನ್ನು ಸೇರಿಸುವುದು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇವು ಫಂಗಸ್ ಮತ್ತು ಇತರ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತವೆ.

ಮಾಧುರಿ ದೀಕ್ಷಿತ್: ಧಕ್ ಧಕ್ ಹುಡುಗಿ 50 ವರ್ಷ ವಯಸ್ಸಿನಲ್ಲಿಯೂ ಫ್ಲಾಲೆಸ್ ಸ್ಕೀನ್ ಹೊಂದಿದ್ದಾರೆ. ಆಲಿವ್ ಎಣ್ಣೆ ಮತ್ತು ಹರಳೆಣ್ಣೆಗಳ ಮಿಶ್ರಣವನ್ನು ಕೂದಲಿಗೆ ಹಚ್ಚುತ್ತಾರಂತೆ. ವಾಸ್ತವವಾಗಿ, ಹೊಳೆಯುವ ಮತ್ತು ಸ್ಟ್ರಾಂಗ್ ಕೂದಲನ್ನು ಪಡೆಯಲು ಪ್ರತಿ ರಾತ್ರಿ ಈ ಎರಡು ಎಣ್ಣೆ ಮಿಶ್ರಣವನ್ನು ಹಚ್ಚಿಕೊಳ್ಳಲು ಸೂಚಿಸುತ್ತಾರೆ.

ಕೃತಿ ಸನೋನ್: ಈ ಬಾಲಿವುಡ್ ನಟಿಯ ಬ್ಯೂಟಿ ಸಿಕ್ರೇಟ್ ಫಾಲೋ ಮಾಡಲು ತುಂಬಾ ಸರಳ. ಕೃತಿ ದಿನದ ಕೊನೆಯಲ್ಲಿ ಮೇಕಪ್ ತೆಗೆಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದು ಮಾಯಿಶ್ಚರೈಸರ್ ಅಪ್ಲೈ ಮಾಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.