ತಂಗಿ ಕೈ ಹಿಡಿದು ಬಂದ ದೀಪಿಕಾ; ಬೆಸ್ಟ್ ಸಿಸ್ಟರ್ಸ್ ಎಂದ ನೆಟ್ಟಿಗರು
ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡಕೋಣೆ ಸಿನಿಮಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ದೀಪಿಕಾ ಸಹೋದರಿ ಬಣ್ಣದ ಲೋಕದಿಂದ ದೂರ ಇದ್ದಾರೆ. ಆಗಾಗ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವ ದೀಪಿಕಾ ಸಹೋದರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿರುತ್ತವೆ.

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡಕೋಣೆ ಸಿನಿಮಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ದೀಪಿಕಾ ಸಹೋದರಿ ಬಣ್ಣದ ಲೋಕದಿಂದ ದೂರ ಇದ್ದಾರೆ. ಆಗಾಗ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವ ದೀಪಿಕಾ ಸಹೋದರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿರುತ್ತವೆ.
ದೀಪಿಕಾ ತನ್ನ ಪ್ರೀತಿಯ ಸಹೋದರಿ ಅನಿಶಾ ಪಡುಕೋಣೆ ಜೊತೆ ಮುಂಬೈ ಹೋಟೆಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಹೋದರಿ ಜೊತೆ ಡಿನ್ನರ್ ಮುಗಿಸಿ ದೀಪಿಕಾ ಹೋಟೆಲ್ ನಿಂದ ಹೊರ ಬರುತ್ತಿದ್ದಂತೆ ಪಾಪರಾಜಿಗಳು ಮುಂಚ್ಚಿಕೊಂಡರು. ಬಳಿಕ ತಂಗಿಯ ಕೈ ಹಿಡಿದು ಸೇಫ್ ಆಗಿ ಕರೆದುಕೊಂಡು ಬಂದಿದ್ದಾರೆ.
ಸಹೋದರಿಯರು ಕೈ ಕೈ ಹಿಡಿದು ಬಂದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ.ಇಬ್ಬರು ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ತನ್ನ ಸಹೋದರಿ ಜೊತೆ ಫೋಟೋ ಶೇರ್ ಮಾಡಿ ಸಿಂಪ್ಲಿ ದಿ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ದೀಪಿಕಾ ಪಡುಕೋಣೆ ಹೋಟೆಲ್ ಒಳಗೆ ಎಂಟ್ರಿ ಕೊಡುವಾಗ ಕಪ್ಪು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ದೀಪಿಕಾ ಸೀರೆಯುಟ್ಟು ಹೋಟೆಲ್ ಎಂಟ್ರಿಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಹೋಟೆಲ್ ನಿಂದ ಹೊರಬರುವಾಗ ಸಿಂಪಲ್ ಸ್ವೆಟ್‌ವೇರ್ ಧರಿಸಿ ಹೊರಬಂದಿದ್ದರು.
ಇತ್ತೀಚಿಗಷ್ಟೆ ದೀಪಿಕಾ ಮತ್ತು ಪತಿ ರಣವೀರ್ ಸಿಂಗ್ ಇಬ್ಬರು ಮನೀಶ್ ಮಲ್ಹೋತ್ರಾ ಫ್ಯಾಷನ್ ಶೋನಲ್ಲಿ ಮಿಂಚಿದ್ದರು. ರಾಯಲ್ ಲುಕ್ ನಲ್ಲಿ ಮಿಂಚಿದ್ದ ದೀಪಿಕಾ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ರಣ್ವೀರ್ ಸಿಂಗ್ ಗ್ರ್ಯಾಂಡ್ ಶೇರ್ವಾನಿಯಲ್ಲಿ ಕಾಣಿಸಿಕೊಂಡಿದ್ದರು. ದೀಪಿಕಾ ಲೆಹಂಗಾದಲ್ಲಿ ಮಿಂಚಿದ್ದರು.
ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್ ಜೊತೆಗೆ ದಕ್ಷಿಣ ಭಾರತದ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಜೊತೆ ಮೊದಲ ಬಾರಿಗೆ ದೀಪಿಕಾ ತೆರೆಹಂಚಿಕೊಳ್ಳುತ್ತಿದ್ದಾರೆ. ನಾಗ್ ಅಶ್ವಿನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ದೀಪಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ಶಾರುಖ್ ಖಾನ್ ಜೊತೆ ಪಠಾಣ್ ಸಿನಿಮಾ ಮುಗಿಸಿದ್ದಾರೆ.