ದಕ್ಷಿಣದ ಚೆಲುವೆಯರನ್ನು ವರಿಸಿದ ಬಾಲಿವುಡ್ ನಟರು!
ಬಾಲಿವುಡ್ ಹಾಗೂ ದಕ್ಷಿಣದ ಸಿನಿಮಾರಂಗದ ಸಂಬಂಧ ಬಹಳ ಹಿಂದಿನಿಂದಲೂ ಇದೆ. ದಕ್ಷಿಣದ ಹಲವು ನಟನಟಿಯರು ಬಾಲಿವುಡ್‌ನಲ್ಲೂ ತಮ್ಮ ಛಾಫು ಮೂಡಿಸಿದ್ದಾರೆ. ಸೌತ್‌ನ ಕೆಲವು ನಟಿಯರು ಬಾಲಿವುಡ್‌ನಲ್ಲಿ ಕೆರಿಯರ್ ಜೊತಗೆ ಪರ್ಸನಲ್ ಲೈಫ್ ಅನ್ನು ಕಟ್ಟಿಕೊಂಡಿದ್ದಾರೆ. ಬಾಲಿವುಡ್‌ನ ಸ್ಟಾರ್ಸ್ ದಕ್ಷಿಣದ ಚೆಲುವೆಯರಿಗೆ ಮನಸೋತು ವಿವಾಹವಾದ ಉದಾರಹಣೆಗಳಿವೆ.
ದಕ್ಷಿಣ ಸಿನಿಮಾ ರಂಗ ಹಿಂದಿ ಚಲನಚಿತ್ರೋದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದು, ದಕ್ಷಿಣದ ಕೆಲವು ನಟಿಯರು ಬಾಲಿವುಡ್‌ನಲ್ಲಿ ಫೇಮಸ್ ಆಗಿದ್ದಾರೆ. ದಕ್ಷಿಣ ಭಾರತದ ನಟಿಯರನ್ನು ಪ್ರೀತಿಸಿ ಮದುವೆಯಾದ ಕೆಲವು ಬಿ ಟೌನ್ ನಟರು ಇವರು.
ರಾಜ್‌ಕುಂದ್ರಾ ತಮ್ಮ ಮೊದಲ ಹೆಂಡತಿ ಕವಿತಾರಿಗೆ ಡಿವೋರ್ಸ್ ನೀಡಿ ಕರಾವಳಿ ಬೆಡಗಿ ಶಿಲ್ವಾರನ್ನು ಮದುವೆಯಾಗಿದ್ದಾರೆ. ಅವರು ನವೆಂಬರ್ 22, 2009ರಂದು ಮಂಗಳೂರಿನ ಸಂಪ್ರದಾಯದಂತೆ ವಿವಾಹವಾದರು.
ಬಾಲಿವುಡ್‌ನ ಡ್ರೀಮ್‌ಗರ್ಲ್ ಹೇಮಮಾಲಿನಿ ಪ್ರೀತಿಯಲ್ಲಿ ಬಿದ್ದವರು ನಟ ಧರ್ಮೇಂದ್ರ. ಮದುವೆಯಾಗಿ ಸೇರಿ ಸುಮಾರು 40 ವರ್ಷಗಳನ್ನು ಪೂರೈಸಿರುವ ಈ ಕಪಲ್‌ಗೆ ಎರಡು ಹೆಣ್ಣು ಮಕ್ಕಳಿವೆ. ತಮಿಳು ಅಯ್ಯರ್ ಕುಟುಂಬಕ್ಕೆ ಸೇರಿದವರು ಹೇಮಾ.
ಮೋನಾರನ್ನು ಮದುವೆಯಾಗಿದ್ದ ಬೋನಿ ಕಪೂರ್ ತಮಿಳು ಸಿನಿಮಾದಲ್ಲಿ ಮೊದಲ ಬಾರಿಗೆ ಶ್ರೀದೇವಿ ಅವರನ್ನು ನೋಡಿ ಮರುಳಾದರು. ಈ ಜೋಡಿ 1996ರಲ್ಲಿ ವಿವಾಹವಾಯಿತು. ಶ್ರೀದೇವಿ ತಮಿಳುನಾಡಿನ ಶಿವಕಾಸಿಯ ಮೀನಂಪಟ್ಟಿಯಲ್ಲಿ ಜನಿಸಿದ್ದರು.
ಬೆಂಗಳೂರು ಚೆಲುವೆ ದೀಪಿಕಾ ಪಡುಕೋಣೆ ಅವರನ್ನು ವರಿಸಿದ್ದಾರೆ ಬಾಲಿವುಡ್ ನಟ ರಣವೀರ್‌ಸಿಂಗ್. ಈ ಜೋಡಿ 2018ರಲ್ಲಿ ಸಪ್ತಪದಿ ತುಳಿಯಿತು.
ಮಂಗಳೂರಿನ ಬಂಟ್ ಕುಟುಂಬದಲ್ಲಿ ಜನಿಸಿರುವ ಐಶ್ವರ್ಯಾ ರೈ ಅವರನ್ನು ವರಿಸಿದ್ದಾರೆ ಅಭಿಷೇಕ್ ಬಚ್ಚನ್.
ತಮಿಳು ಅಯ್ಯರ್ ಕುಟುಂಬಕ್ಕೆ ಸೇರಿರುವ ಬಾಲಿವುಡ್‌ನ ನಟಿ ವಿದ್ಯಾ ಬಾಲನ್ ಪಂಜಾಬಿ ಕುಟುಂಬಕ್ಕೆ ಸೇರಿರುವ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ಮದುವೆಯಾಗಿದ್ದಾರೆ.