ಮತ ಚಲಾಯಿಸಲು ಬಂದ ದೀಪಿಕಾ; ಬೇಬಿ ಬಂಪ್ ನೋಡಿ ಗಂಡು ಮಗು ಅಂತಿರೋದ್ಯಾಕೆ ನೆಟಿಜನ್ಸ್?
ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮುಂಬೈನಲ್ಲಿ ಮತದಾನ ಮಾಡಲು ಆಗಮಿಸಿದ ಸಂದರ್ಭದಲ್ಲಿ ಮ್ಯಾಚಿಂಗ್ ಬಟ್ಟೆಗಳಲ್ಲಿ ಕಾಣಿಸಿಕೊಂಡರು.

ಬಾಲಿವುಡ್ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ಐದನೇ ಹಂತದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮುಂಬೈನ ಪಾಲಿ ಹಿಲ್‌ನಲ್ಲಿ ಮತದಾನ ಮಾಡಲು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾಳ ಬೇಬಿ ಬಂಪ್ ಮೊದಲ ಬಾರಿಗೆ ಎಲ್ಲರ ಕಣ್ಣಿಗೆ ಬಿದ್ದಿದೆ. ಈ ಮೂಲಕ ಜೋಡಿ ಬಾಡಿಗೆ ತಾಯ್ತನ ಆಶ್ರಯಿಸಿದ್ದಾರೆ ಎಂಬ ವದಂತಿಗೂ ತೆರೆ ಬಿದ್ದಿದೆ.
ಇತ್ತೀಚೆಗೆ ವಿದೇಶಿ ಪ್ರವಾಸದಿಂದ ಹಿಂದಿರುಗುತ್ತಿದ್ದಾಗ ಎದುರಾದ ಪಾಪಾರಾಜಿಗಳಿಗೆ ಫೋಟೋ ತೆಗೆಯಲು ದೀಪಿಕಾ ಬಿಟ್ಟಿರಲಿಲ್ಲ. ಬೇಬಿಬಂಪ್ ಫೋಟೋ ಬೇಡವೆಂದು ಕ್ಯಾಮೆರಾ ಮೇಲೆ ಕೈ ಹಾಕಿದ್ದರು.
ಆದರೆ ಈ ಬಾರಿ ಪತಿ ಪತ್ನಿ ಇಬ್ಬರೂ ಬಿಳಿ ಶರ್ಟ್, ನೀಲಿ ಜೀನ್ಸ್ ಧರಿಸಿ ಮತ ಚಲಾಯಿಸಲು ಬಂದರು. ಇಬ್ಬರೂ ಸನ್‌ಗ್ಲಾಸ್ ಧರಿಸಿದ್ದರಲ್ಲದೆ ಫೋಟೋ, ವಿಡಿಯೋಗೆ ಯಾವುದೇ ಅಸಮ್ಮತಿ ತೋರಲಿಲ್ಲ.
ಆಕೆಗೆ ನಡೆಯಲು ರಣವೀರ್ ಸಹಾಯ ಮಾಡುತ್ತಿದ್ದುದ್ದಲ್ಲದೆ, ಉದ್ದಕ್ಕೂ ಅವಳ ಕೈಯ್ಯನ್ನು ಗಟ್ಟಿಯಾಗಿ ಹಿಡಿದೇ ನಡೆಯುತ್ತಿದ್ದರು. ಜನಸಂದಣಿ ಮತ್ತು ಮಾಧ್ಯಮದಿಂದ ರಕ್ಷಿಸುತ್ತಾ ಕಾರ್‌ನೊಳಗೆ ಕುಳಿತುಕೊಳ್ಳಲು ಸಹಾಯ ಮಾಡಿದರು.
ಲೂಸ್ ಶರ್ಟ್ ಧರಿಸಿದ್ದರೂ ಐದು ತಿಂಗಳ ಗರ್ಭಿಣಿಯಾಗಿರುವ ದೀಪಿಕಾಳ ಬೇಬಿ ಬಂಪ್ ಕಾಣಿಸುತ್ತಿತ್ತು. ದೀಪಿಕಾಳ ನಡಿಗೆಯೂ ಸಹಜವಾಗೇ ಬದಲಾಗಿದೆ.
ಇದನ್ನು ನೋಡಿದ ನೆಟ್ಟಿಗರು ದೀಪಿಕಾ ಹೊಟ್ಟೆಯಲ್ಲಿ ಗಂಡು ಮಗುವೇ ಇದೆ, ಈ ಜೋಡಿಗೆ ಗಂಡು ಮಗುವೇ ಆಗುವುದು ಎಂದು ಭವಿಷ್ಯ ಹೇಳುತ್ತಿದ್ದಾರೆ.
ಆಕೆ ದಪ್ಪಗಾಗಿಲ್ಲ, ಕೇವಲ ಹೊಟ್ಟೆ ಬಂದಿದೆ, ಮುಖದಲ್ಲಿ ಗ್ಲೋ ಕಡಿಮೆಯಾಗಿದೆ- ಹೀಗಾಗಿ ಹೊಟ್ಟೆಯಲ್ಲಿ ಗಂಡು ಮಗುವೇ ಇದೆ ಎಂದು ಕೆಲವರು ಹೇಳಿದ್ದಾರೆ.
ಮತ್ತೆ ಕೆಲವರು- ದೀಪ್‌ವೀರ್ ಬಾಡಿಗೆ ತಾಯ್ತನದ ಮೊರೆ ಹೊಕ್ಕಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದ್ದರಿಗೆ ಇಷ್ಟು ಸಾಕ್ಷಿ ಸಾಕೇ ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ದೀಪಿಕಾ ಬೇಬಿ ಬಂಪ್ ಅಭಿಮಾನಿಗಳಿಗೆ ಸಂತಸ ತಂದಿದೆ. ಇನ್ನು ಕೇವಲ 4 ತಿಂಗಳಲ್ಲಿ ಮುದ್ದಾದ ಭವಿಷ್ಯದ ಸ್ಟಾರ್ ಹುಟ್ಟಲಿದೆ ಎಂದವರು ಹೇಳುತ್ತಿದ್ದಾರೆ.
ಇನ್ನು ಚಿತ್ರಗಳ ವಿಷಯಕ್ಕೆ ಬಂದರೆ, ಸಿಂಗಮ್ ಎಗೇನ್ ಚಿತ್ರದಲ್ಲಿ ದೀಪಿಕಾ ತನ್ನ ಗಂಡ ರಣವೀರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಆಕೆಯ 'ಕಲ್ಕಿ 2898 AD' ಕೂಡ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.