ದೀಪಿಕಾ ಪಡುಕೋಣೆ ನಟಿಸಿದ ಭಾರೀ ನಷ್ಟದ ಸಿನಿಮಾಗಳು!
83, ಛಪಾಕ್, ತಮಾಷಾ, ಫೈಂಡಿಂಗ್ ಫ್ಯಾನಿ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳು ಬಜೆಟ್‌ಗಿಂತ ಕಡಿಮೆ ಗಳಿಕೆ ಕಂಡಿವೆ. ಈ ಚಿತ್ರಗಳು ನಿರ್ಮಾಣ ವೆಚ್ಚವನ್ನು ಮೀರಲು ವಿಫಲವಾದವು, ಇದರಿಂದಾಗಿ ನಿರ್ಮಾಪಕರಿಗೆ ನಷ್ಟ ಉಂಟಾಯಿತು.

83 ಸಿನಿಮಾ
2021ರಲ್ಲಿ ಬಿಡುಗಡೆಯಾದ 83 ಸಿನಿಮಾ ₹225-270 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಯಿತು. ಆದರೆ, ಇದು ₹109.02 ಕೋಟಿ ಗಳಿಸಿತು.
ಛಪಾಕ್ ಸಿನಿಮಾ
2020 ರಲ್ಲಿ ಬಿಡುಗಡೆಯಾದ ಛಪಾಕ್ ಸಿನಿಮಾ ₹35 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಯಿತು. ಆದರೆ, ಇದು ₹32.55 ಕೋಟಿ ಗಳಿಸಿತು.
ತಮಾಷಾ ಸಿನಿಮಾ
2015 ರಲ್ಲಿ ಬಿಡುಗಡೆಯಾದ ತಮಾಷಾ ಸಿನಿಮಾ ₹87 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಯಿತು. ಆದರೆ, ಇದು ₹68.55 ಕೋಟಿ ಗಳಿಸಿತು.
ಫೈಂಡಿಂಗ್ ಫ್ಯಾನಿ
2014 ರಲ್ಲಿ ಫೈಂಡಿಂಗ್ ಫ್ಯಾನಿ ಸಿನೆಮಾ. ಬಿಡುಗಡೆಯಾಗಿ ಗಳಿಸಿದ್ದು ಕೇವಲ 28.23 ಕೋಟಿ. ತಯಾರಾಗಿದ್ದು ₹37 ಕೋಟಿ ಬಜೆಟ್‌ನಲ್ಲಿ .
ಆರಕ್ಷಣ
2011 ರ ಆರಕ್ಷಣ ಸಿನಮಾ ತಯಾರಾಗಿದ್ದು ₹53 ಕೋಟಿ ಬಜೆಟ್‌ನಲ್ಲಿ ಗಳಿಸಿದ್ದು ಮಾತ್ರ ಕೇವಲ ₹41.89 ಕೋಟಿ ರೂ. ಸರಿ ಸುಮಾರು 10 ಕೋಟಿ ನಷ್ಟ ವಾಯ್ತು.
ಖೇಲೇ ಹಮ್ ಜೀ ಜಾನ್ ಸೇ
2010ರಲ್ಲಿ ತೆರೆ ಕಂಡ ಖೇಲೇ ಹಮ್ ಜೀ ಜಾನ್ ಸೇ ಚಿತ್ರ ₹45 ಕೋಟಿ ಬಜೆಟ್‌ನಲ್ಲಿ ಕೇವಲ ₹4.66 ಕೋಟಿ ಗಳಿಸಿ ಫ್ಲಾಪ್ ಆಯಿತು.
ಬ್ರೇಕ್ ಕೆ ಬಾದ್
2010ರಲ್ಲಿ ಬಿಡುಗಡೆಯಾದ ಬ್ರೇಕ್ ಕೆ ಬಾದ್ ಸಿನೆಮಾ ₹22 ಕೋಟಿ ಬಜೆಟ್‌ನಲ್ಲಿ ತಯಾರಾಗಿತ್ತು. ಆದರೆ ಬಿಡುಗಡೆಯಾಗಿ ₹16.86 ಕೋಟಿ ಗಳಿಸಿತು.
ಕಾರ್ತಿಕ್ ಕಾಲಿಂಗ್ ಕಾರ್ತಿಕ್
2010 ರಲ್ಲಿ ಕಾರ್ತಿಕ್ ಕಾಲಿಂಗ್ ಕಾರ್ತಿಕ್ ಚಿತ್ರ ಬಿಡುಗಡೆಯಾಯ್ತು, ಈ ಚಿತ್ರವನ್ನು ₹20 ಕೋಟಿ ಬಜೆಟ್‌ನಲ್ಲಿ ತಯರಾರಾದ ಈ ಚಿತ್ರ ಗಳಿಸಿದ್ದು ₹18 ಕೋಟಿ ಗಳಿಸಿತು.
ಚಾಂದನಿ ಚೌಕ್ ಟು ಚೈನಾ
2009 ರಲ್ಲಿ ಚಾಂದನಿ ಚೌಕ್ ಟು ಚೈನಾ ಚಿತ್ರ ₹80 ಕೋಟಿ ಬಜೆಟ್‌ನಲ್ಲಿ ತಯಾರಾಗಿ ಬಿಡುಗಡೆಯಾದ ಬಳಿಕ ₹29.45 ಕೋಟಿ ಗಳಿಸಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

