ಕೊನೆಗೂ ಎಕ್ಸ್‌ ಬಾಯ್‌ಫ್ರೆಂಡ್‌ ರಣಬೀರ್ ಟ್ಯಾಟೂ ಬಗ್ಗೆ ಪ್ರತಿಕ್ರಿಯಿಸಿದ ಡಿಪ್ಪಿ

First Published Jun 1, 2020, 5:45 PM IST

ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಸಹ ನಟ ರಣವೀರ್ ಸಿಂಗ್‌ರನ್ನು ಮದುವೆಯಾಗಿ ಮೋಸ್ಟ್‌ ಲವಿಂಗ್‌ ಕಪಲ್‌ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಇವರ ಪಾಸ್ಟ್‌ ಮಾತ್ರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಮದುವೆಗೆ ಮುಂಚೆ  ದೀಪಿಕಾಳ ಹೆಸರು ಹಲವರೊಂದಿಗೆ ಕೇಳಿ ಬರುತ್ತಿತ್ತು. ಆದರಲ್ಲಿ ಕೋ ಸ್ಟಾರ್‌ ರಣಬೀರ್‌ ಕಪೂರ್‌ ಜೊತೆಯ ಅಫೇರ್‌ ಹೆಚ್ಚು ಸೆನ್ಸೇಷನ್‌ ಹುಟ್ಟುಹಾಕಿತ್ತು. ದೀಪಿಕಾ ರಣಬೀರ್ ಕಪೂರ್ ಹೆಸರಿನ ಟ್ಯಾಟೋ ತನ್ನ ಕತ್ತಿನ ಹಿಂಭಾಗದಲ್ಲಿ ಹಾಕಿಸಿಕೊಂಡಿದ್ದು, ಸಖತ್‌ ವೈರಲ್‌ ಆಗಿತ್ತು. ಆದರೆ ಈಗ ಹಳೆಯ ಬಾಯ್‌ ಫ್ರೆಂಡ್‌ ಹೆಸರಿನ ಹಚ್ಚೆಯನ್ನು ಡಿಪ್ಪಿ ಅಳಸಿಕೊಂಡಿದ್ದಾರೆಯೇ ಎಂಬುದು ಇನ್ನೂ ಹೆಚ್ಚು ಸುದ್ದಿಯಲ್ಲಿದೆ. ಇದಕ್ಕೆ ಪದ್ಮಾವತ್‌ ನಟಿ ಏನ್ನಾನುತ್ತಾರೆ?