ಕತ್ರಿನಾ, ಅನುಷ್ಕಾರನ್ನು ಸೋಲಿಸಿದ ದೀಪಿಕಾ ಪಡುಕೋಣೆ! ಹೇಗೆ?
ಇತ್ತೀಚಿನ ಗಾಲಾ ಬಿಂಗೊ ವರದಿಗಳ ಪ್ರಕಾರ ದೀಪಿಕಾ ಪಡುಕೋಣೆಚಲನಚಿತ್ರ/ಟಿವಿಯಲ್ಲಿ ಏಷ್ಯಾದ ಅತ್ಯಂತ ಪ್ರಭಾವಿ ಮಹಿಳೆ ಎಂದು ಹೆಸರಿಸಲ್ಪಟ್ಟಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಕತ್ರಿನಾ ಕೈಫ್, ಅನುಷ್ಕಾ ಶರ್ಮಾ ಅವರನ್ನು ಸೋಲಿಸಿದರು ಮತ್ತು ಅರಿಯಾನ ಗ್ರಾಂಡೆ, ಕಿಮ್ ಕಾದರ್ಶೈನ್ ಅವರ ಜೊತೆ ಸೇರಿದ್ದಾರೆ. ಇದು ಹೇಗೆ? ಇಲ್ಲಿದೆ ವಿವರ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಗೇಮ್ ಚೇಂಜರ್ ಮತ್ತು ಫ್ರಂಟ್ ರನ್ನರ್ ಎಂದೂ ಕರೆಯುತ್ತಾರೆ ಮತ್ತು ಈಗ ಅವರು ಮತ್ತೊಂದು ಪುರಸ್ಕಾರಗಳ ಪಟ್ಟಿಗೆ ಸೇರಿದ್ದಾರೆ.
ಇತ್ತೀಚಿನ ಗಾಲಾ ಬಿಂಗೊ ವರದಿಗಳ ಪ್ರಕಾರ, ದೀಪಿಕಾ ಇತ್ತೀಚೆಗೆ ಚಲನಚಿತ್ರ/ಟಿವಿಯಲ್ಲಿ ಏಷ್ಯಾದ ಅತ್ಯಂತ ಪ್ರಭಾವಿ ಮಹಿಳೆ ಎಂದು ಹೆಸರಿಸಲ್ಪಟ್ಟಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಕತ್ರಿನಾ ಕೈಫ್, ಅನುಷ್ಕಾ ಶರ್ಮಾ ಅವರನ್ನು ಸೋಲಿಸಿದರು.
ಇಂಗ್ಲೆಂಡಿನಾದ್ಯಂತ 137ಕ್ಕೂ ಹೆಚ್ಚು ಕ್ಲಬ್‌ಗಳ ಹೆಗ್ಗಳಿಕೆ ಹೊಂದಿರುವ ಗಾಲಾ ಬಿಂಗೊ ವಿಶ್ವಾದ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣಗಳಿಂದ ಗೂಗಲ್ ಸರ್ಚ್ ಮತ್ತು ಮಾಧ್ಯಮದ ಉಲ್ಲೇಖಗಳವರೆಗೆ ಹಲವಾರು ರಾಂಕಿಂಗ್ ಫಾಕ್ಟರ್‌ಗಳ ಆಧಾರದ ಮೇಲೆ ವಿಶ್ವಾದ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಸ್ಟಡಿ ಸಿನಿಮಾ, ಸಂಗೀತ, ಟಿವಿ ಮತ್ತು ಫ್ಯಾಷನ್, ರಾಜಕೀಯ ಮತ್ತು ವ್ಯಾಪಾರ ಇತ್ಯಾದಿ ಕ್ಷೇತ್ರಗಳನ್ನು ಒಳಗೊಂಡಂತೆ ವಿಶ್ವದ 100 ಅತಿದೊಡ್ಡ ದೇಶಗಳ ವಿವಿಧ ಸ್ಟ್ರೀಮ್‌ಗಳಿಂದ ಅತ್ಯಂತ ಪ್ರಭಾವಶಾಲಿ ಹೆಸರುಗಳನ್ನು ಹೆಸರಿಸಿದೆ.
Deepika Padukone
ವರದಿಗಳ ಪ್ರಕಾರ, 'ಟಿವಿ ಮತ್ತು ಚಲನಚಿತ್ರ' ವಿಭಾಗದ ಅಡಿಯಲ್ಲಿ, ದೀಪಿಕಾರ ಎಂಗೇಜ್‌ಮೆಂಟ್ ದರ (ಇನ್‌ಸ್ಟಾ), ಇಂಪ್ರೆಶನ್ಸ್ ಪರ್ ಟ್ವೀಟ್, 3 ಮಿಲಿಯನ್ ಗೂಗಲ್ ಸರ್ಚ್‌ಗಳು ಮತ್ತು ಹೆಚ್ಚಿನ ಮಾಧ್ಯಮ ಉಲ್ಲೇಖಗಳಂತಹ ಮಾನದಂಡಗಳಲ್ಲಿ ಹೆಚ್ಚು ಸರ್ಚ್ ಹೊಂದಿದ್ದಾರೆ.
ದೀಪಿಕಾ ಪಡುಕೋಣೆ ಅರಿಯನ್ನಾ ಗ್ರಾಂಡೆ, ಕಿಮ್ ಕಾದರ್ಶೈನ್, ಅಡೆಲೆ ಮತ್ತು ಸೆಲೀನ್ ಡಿಯೋನ್ ಮುಂತಾದ ಹೆಸರುಗಳ ಜೊತೆ ಸೇರಿಕೊಳ್ಳುತ್ತಾರೆ. ದೀಪಿಕಾ ಇಂಟರ್‌ನ್ಯಾಷನಲ್ ಎಂಡೋರ್ಸ್‌ಮೆಂಟ್‌ಗಳ ಭಾರತೀಯ ರಾಣಿಯಾಗಿದ್ದು, ಲೆವಿಸ್, ನೈಕ್, ಟಿಸ್ಸಾಟ್ ಮತ್ತು ಚೋಪಾರ್ಡ್‌ನ ಮೊದಲ ಭಾರತೀಯ ಗ್ಲೋಬಲ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ದೀಪಿಕಾ ತನ್ನ ಎರಡನೇ ಹಾಲಿವುಡ್ ಚಿತ್ರವಾದ ಎಸ್‌ಟಿಎಕ್ಸ್ ಫಿಲ್ಮ್ಸ್ ಅಂಡ್ ಟೆಂಪಲ್ ಹಿಲ್ ರೋಮ್ಯಾಂಟಿಕ್ ಕಾಮಿಡಿಗೆ ಸಹಿ ಹಾಕಿದರು, ಇದು ಅವರ ಕಾ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ. ಆಕೆ ತನ್ನ ಗ್ಲೋಬಲ್ ಲೈಫ್‌ಸ್ಟೈಲ್ ಬ್ರಾಂಡ್ ಅನ್ನು ಶೀಘ್ರದಲ್ಲೇ ಆರಂಭಿಸಲಿದ್ದು, ಇದು ಭಾರತೀಯ ಮೂಲದಿಂದ ಸ್ಫೂರ್ತಿ ಪಡೆದಿದ್ದು ಮತ್ತು ವಿಜ್ಞಾನದಿಂದ ಬೆಂಬಲಿತವಾಗಿದೆ.
ಬಾಲಿವುಡ್ ನಲ್ಲಿ ದೀಪಿಕಾ ಪಠಾಣ್ ಸಿನಿಮಾದಲ್ಲಿ ಶಾರೂಖ್ ಖಾನ್ ಜೊತೆ ಹಾಗೂ ಅನನ್ಯ ಪಾಂಡೆ ಮತ್ತು ಸಿದ್ದಾಂತ್ ಚತುರ್ವೇದಿ ಜೊತೆ ಶಕುನ್ ಬಾತ್ರಾ ಅವರ ಮುಂದಿನ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ದಿ ಇಂಟರ್ನ್‌ನ ಹಿಂದಿ ರೀಮೇಕ್ ಅನ್ನು ಅಮಿತಾಬ್ ಬಚ್ಚನ್ ಜೊತೆಗೆ ಮತ್ತು ಹೃತಿಕ್ ರೋಷನ್ ಜೊತೆ ಫೈಟರ್ ಮಾಡಲಿದ್ದಾರೆ.