Deepika Padukone Birthday: ಸಿನಿಮಾ ಮಾತ್ರವಲ್ಲ, ನಟಿಗೆ ಈ ಮೂಲಗಳಿಂದಲೂ ಕೋಟಿಗಟ್ಟಲೆ ಆದಾಯ
ಬಾಲಿವುಡ್ ದಿವಾ ದೀಪಿಕಾ ಪಡುಕೋಣೆಗೆ (Deepika Padukone) 36 ವರ್ಷಕ್ಕೆ ಕಾಲಿಟ್ಟಿದ್ದಾರೆ. ಜನವರಿ 5,1986 ರಂದು ಕೋಪನ್ ಹ್ಯಾಗನ್ ನಲ್ಲಿ ಜನಿಸಿದ ದೀಪಿಕಾ, ಮಾಡೆಲ್ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. 2006 ರ ಕನ್ನಡ ಚಲನಚಿತ್ರ ಐಶ್ವರ್ಯದೊಂದಿಗೆ ದೀಪಿಕಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಒಂದು ವರ್ಷದ ನಂತರ, 2007 ರಲ್ಲಿ, ಅವರು ಬಾಲಿವುಡ್ ಸಿನಿಮಾ 'ಓಂ ಶಾಂತಿ ಓಂ' ನಲ್ಲಿ ಅವಕಾಶ ಪಡೆದರು. ನಂತರ ಅವರು ಹಿಂತಿರುಗಿ ನೋಡಲಿಲ್ಲ. ಇಲ್ಲಿಯವರೆಗೆ, ದೀಪಿಕಾ ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಶ್ರೀಮಂತ ನಟಿಯರಲ್ಲಿ ಒಬ್ಬರು. ಸೆಲೆಬ್ರಿಟಿ ನೆಟ್‌ವರ್ತ್ ವರದಿ ಪ್ರಕಾರ, ದೀಪಿಕಾ 40 ಮಿಲಿಯನ್ ಡಾಲರ್ (300 ಕೋಟಿ ರೂ.) ಮೌಲ್ಯದ ಆಸ್ತಿ ಹೊಂದಿದ್ದಾರೆ. ಸಿನಿಮಾಗಳಲ್ಲದೆ ಇತರ ಮೂಲಗಳಿಂದಲೂ ದೀಪಿಕಾ ಹಣ ಸಂಪಾದಿಸುತ್ತಾರೆ.
ಇಲ್ಲಿಯವರೆಗಿನ ಬಾಲಿವುಡ್ ನಟಿಯರಲ್ಲಿ ದೀಪಿಕಾ ಪಡುಕೋಣೆ ಅತ್ಯಂತ ದುಬಾರಿ ನಟಿ. ಆಕೆ ಒಂದು ಚಿತ್ರಕ್ಕೆ 15-16 ಕೋಟಿ ತೆಗೆದುಕೊಳ್ಳುತ್ತಾರೆ. ಇದಲ್ಲದೇ ಜಾಹೀರಾತಿನಿಂದಲೂ ದೀಪಿಕಾ ಭಾರೀ ಹಣ ಸಂಪಾದಿಸುತ್ತಾರೆ. ವರದಿಯ ಪ್ರಕಾರ, ದೀಪಿಕಾ ಪ್ರತಿ ಬ್ರ್ಯಾಂಡ್‌ನಿಂದ ಜಾಹೀರಾತಿಗಾಗಿ ಸುಮಾರು 8 ಕೋಟಿ ರೂ ಚಾರ್ಜ್ ಮಾಡುತ್ತಾರೆ.
ದೀಪಿಕಾ ಪಡುಕೋಣೆ ಅನೇಕ ದೊಡ್ಡ ಬ್ರಾಂಡ್‌ಗಳಿಗೆ ಜಾಹೀರಾತುಗಳನ್ನು ಮಾಡುತ್ತಾರೆ. ಇವುಗಳಲ್ಲಿ ಏಷ್ಯನ್ ಪೇಂಟ್ಸ್, ಲೋರಿಯಲ್ ಪ್ಯಾರಿಸ್, ಟೆಟ್ಲಿ ಟೀ, ಮೈಂತ್ರಾ, ತನಿಷ್ಕ್, ಸ್ಪಾಟಿಫೈ, ನೆಸ್ಲೆ ಫ್ರೂಟ್ ವಿಲ್ಲಾ, ರಿಲಯನ್ಸ್ ಜಿಯೋ, ಆಕ್ಸಿಸ್ ಬ್ಯಾಂಕ್ ಮತ್ತು ಒಪ್ಪೋ ಮುಂತಾದ ಕಂಪನಿಗಳ ಜಾಹೀರಾತುಗಳು ಸೇರಿವೆ. ಈ ಕಂಪನಿಗಳಿಂದ ದೀಪಿಕಾ ವಾರ್ಷಕ್ಕೆ ಕೋಟಿಗಟ್ಟಲೆ ಆದಾಯ ಗಳಿಸುತ್ತಾರೆ.
Image: Deepika Padukone/Instagram
ರಣವೀರ್ ಮತ್ತು ದೀಪಿಕಾ ಸೆಪ್ಟೆಂಬರ್ 2021 ರಲ್ಲಿ ಅಲಿಬಾಗ್‌ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಈ ವಾರಾಂತ್ಯದಲ್ಲಿ ಇಬ್ಬರೂ ಅಲಿಬಾಗ್ ಕಾಣಿಸಿಕೊಂಡರು. ಇಬ್ಬರೂ ಸೇರಿ ಇಲ್ಲಿನ ರಿಜಿಸ್ಟ್ರಾರ್ ಕಛೇರಿಯಲ್ಲಿ ಆಸ್ತಿಗೆ ಸಂಬಂಧಿಸಿದ ಪೇಪರ್ ವರ್ಕ್ ಮುಗಿಸಿ ಡೀಲ್ ಅಂತಿಮಗೊಳಿಸಿದರು.
ರಣವೀರ್ ಮತ್ತು ದೀಪಿಕಾ ಅವರ ಈ ಹೊಸ ಆಸ್ತಿಯಲ್ಲಿ ಎರಡು ಬಂಗಲೆಗಳಲ್ಲದೆ, ತೆಂಗು ಮತ್ತು ಅಡಿಕೆ ತೋಟವೂ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಆಸ್ತಿಯ ಮೌಲ್ಯ ಕೋಟಿಗಟ್ಟಲೆ ಇದೆ. ದೀಪಿಕಾ-ರಣವೀರ್ ಈಗ ತಮ್ಮ ಈ ಐಷಾರಾಮಿ ಬಂಗಲೆಯನ್ನು ರಜೆಯಲ್ಲಿ ಪಾರ್ಟಿ ಎಂಜಾಯ್ ಬಳಸುತ್ತಾರೆ.
Deepika Padukone
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುತ್ತಾರೆ. ದೀಪಿಕಾ ಪಡುಕೋಣೆ ಆಗಸ್ಟ್ 2021 ರಲ್ಲಿ ತನ್ನ ತವರು ಬೆಂಗಳೂರಿನಲ್ಲಿ ವಿಸ್ತಾರವಾದ ಸರ್ವಿಸ್ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಕೋಟಿಗಟ್ಟಲೆ ಮೌಲ್ಯದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ನಟಿ ಅಪಾರ್ಟ್ಮೆಂಟ್ ಅನ್ನು ಬುಕ್ ಮಾಡಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ನವೆಂಬರ್ 2018 ರಲ್ಲಿ ವಿವಾಹವಾದರು. ಅಂದಿನಿಂದ ದಂಪತಿಗಳು ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿರುವ ಐಷಾರಾಮಿ 4BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. 2776 ಚದರ ಅಡಿ ವಿಸ್ತೀರ್ಣದ ಈ ಮನೆಯ ಬೆಲೆ ಸುಮಾರು 20 ಕೋಟಿ. 2010ರಲ್ಲಿ ದೀಪಿಕಾ ಈ ಫ್ಲಾಟ್ ಖರೀದಿಸಿದ್ದರು.
ದೀಪಿಕಾ ಪಡುಕೋಣೆ ಅವರ ಕಾರು ಸಂಗ್ರಹದಲ್ಲಿ ಅನೇಕ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ಒಳಗೊಂಡಿದೆ. ದೀಪಿಕಾ ಲಕ್ಷುರಿಯಸ್ ಕಾರುಗಳಾದ ಆಡಿ ಎ9, ಮರ್ಸಿಡಿಸ್ ಬೆಂಜ್, ರೇಂಜ್ ರೋವರ್ ಮತ್ತು 1.2 ಕೋಟಿ ರೂ ಬೆಲೆಯ ಬಿಎಂಡಬ್ಲ್ಯು ಓನರ್. ಇದರ ಜೊತೆಗೆ ದೀಪಿಕಾ ಬ್ಲೂ ಸ್ಮಾರ್ಟ್, ಡ್ರಮ್ಸ್ ಫುಡ್ ಮತ್ತು ಏರೋಸ್ಪೇಸ್, ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ನಲ್ಲಿ ಹೂಡಿಕೆ ಮಾಡಿದ್ದಾರೆ.
ದೀಪಿಕಾ ಪಡುಕೋಣೆ 2019 ರಲ್ಲಿ 48 ಕೋಟಿ ಗಳಿಸಿದ್ದರು, ಆದರೆ ಆ ವರ್ಷ ಅವರ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಈ ಎಲ್ಲಾ ಆದಾಯವು ಅವರ ಬ್ಯುಸಿನೆಸ್ ಮತ್ತು ಇತರ ಪ್ರಾಜೆಕ್ಟ್‌ಗಳ ಮೂಲಕ ಬಂದಿತು. ಈ ಗಳಿಕೆಯಿಂದಾಗಿ ಫೋರ್ಬ್ಸ್ ಸೆಲೆಬ್ ಪಟ್ಟಿಯಲ್ಲಿ ದೀಪಿಕಾ 10ನೇ ಸ್ಥಾನ ಪಡೆದಿದ್ದರು.