- Home
- Entertainment
- Cine World
- OTTಯಲ್ಲಿ ಡಬಲ್ ಧಮಾಕ… ಈ ವಾರ ದರ್ಶನ್ ನಟನೆಯ ‘Devil’ ಸೇರಿ 8 ಥ್ರಿಲ್ಲರ್ ಸಿನಿಮಾಗಳು ರಿಲೀಸ್
OTTಯಲ್ಲಿ ಡಬಲ್ ಧಮಾಕ… ಈ ವಾರ ದರ್ಶನ್ ನಟನೆಯ ‘Devil’ ಸೇರಿ 8 ಥ್ರಿಲ್ಲರ್ ಸಿನಿಮಾಗಳು ರಿಲೀಸ್
OTT Release: ಜುಲೈ 17 ರಂದು, OTT ಯಲ್ಲಿ ಭರ್ಜರಿ ಧಮಾಕ ನಡೆಯಲಿದೆ. ನೆಟ್‌ಫ್ಲಿಕ್ಸ್‌ನಿಂದ ಪ್ರೈಮ್ ವೀಡಿಯೊದವರೆಗೆ, ಹೊಸ ಚಲನಚಿತ್ರಗಳು ಮತ್ತು ಸೀರೀಸ್ ಗಳು ಬಿಡುಗಡೆಯಾಗಲಿವೆ. ದರ್ಶನ್ ತೂಗುದೀಪ ಅಭಿನಯದ ‘ಡೆವಿಲ್’ ಸಿನಿಮಾ ಸೇರಿ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಲಿದೆ ನೋಡಿ.

OTTಯಲ್ಲಿ ಈ ವಾರ ಯಾವೆಲ್ಲಾ ಸಿನಿಮಾ-ಸೀರೀಸ್ ರಿಲೀಸ್?
ಈ ಶುಕ್ರವಾರ, OTT ಎರಡು ಪಟ್ಟು ಮನರಂಜನೆಯನ್ನು ನೀಡಲು ಸಜ್ಜಾಗಿದೆ. ಜುಲೈ 17 ರಂದು, OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ರೋಮಾಂಚಕಾರಿ ಚಲನಚಿತ್ರಗಳು ಮತ್ತು ಸೀರೀಸ್ ಬಿಡುಗಡೆಯಾಗಲಿವೆ. ಆಕ್ಷನ್‌ನಿಂದ ಹಾಸ್ಯದವರೆಗಿನ ಎಲ್ಲಾ ಮನರಂಜನೆ ನೀಡುವ ಸಿನಿಮಾಗಳು ನಿಮಗಾಗಿ.
23,000 ಲೈವ್ಸ್
ಲೂಯಿಸ್ ಹಾಫ್‌ಮನ್ ಮತ್ತು ಮಾಲಾ ಎಮ್ಡೆ ನಟಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದ, ಅಭಿಮಾನಿಗಳು ಅದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರ ಜುಲೈ 17 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವು ನಿಜವಾದ ಕಥೆಯನ್ನು ಆಧರಿಸಿದೆ.
ಮಾ ಇಂಟಿ ಬಂಗಾರಂ
ಸಮಂತಾ ರುತ್ ಪ್ರಭು ಅವರ ಬ್ಲಾಕ್‌ಬಸ್ಟರ್ ಆಕ್ಷನ್-ಕಾಮಿಡಿ ಚಿತ್ರ ಈ ಶುಕ್ರವಾರ ಬಿಡುಗಡೆಯಾಗಲಿದೆ. ಜುಲೈ 17 ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ನಿಮ್ಮ ಕುಟುಂಬದೊಂದಿಗೆ ಈ ಚಿತ್ರವನ್ನು ವೀಕ್ಷಿಸಬಹುದು. ಈ ಚಿತ್ರದಲ್ಲಿ ಸಮಂತಾ ಆಕ್ಷನ್ ಮೋಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಟ್ರಾನ್ಸ್‌ಫರ್ ತ್ರಿಮೂರ್ತುಲು
ಈ ತೆಲುಗು ಡ್ರಾಮಾ ಮತ್ತು ಆಕ್ಷನ್ ಚಿತ್ರವನ್ನು ನೀವು ZEE5 ನಲ್ಲಿ ವೀಕ್ಷಿಸಬಹುದು. ಈ ಚಿತ್ರವು ಕೋರ್ಟ್‌ರೂಮ್ ಡ್ರಾಮಾ ಕಥೆಯನ್ನು ಸಹ ಒಳಗೊಂಡಿದೆ. ನೀವು ಈ ಚಿತ್ರವನ್ನು ನಿಮ್ಮ ಕುಟುಂಬದೊಂದಿಗೆ ವೀಕ್ಷಿಸಬಹುದು.
ದಿ ಮ್ಯಾಪ್ ಆಫ್ ಲಾಂಗಿಂಗ್ಸ್
ಈ ಇಮೋಶನಲ್ -ಡ್ರಾಮಾ ಸೀರಿಸ್ ನ್ನು ನೀವು ಜುಲೈ 17 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಈ ಸೀರೀಸ್ ಆಲಿಸ್ ಕೆಲ್ಲನ್ ಅವರ ಹೆಚ್ಚು ಮಾರಾಟವಾಗಿರುವ ಕಾದಂಬರಿಯನ್ನು ಆಧರಿಸಿದೆ. ಈ ಕಥೆಯು ಗ್ರೇಟಾ ಎಂಬ ಹುಡುಗಿಯ ಸುತ್ತ ಸುತ್ತುತ್ತದೆ.
ದಿ ಡೆವಿಲ್
ದರ್ಶನ್ ತೂಗುದೀಪ ಮತ್ತು ಮಹೇಶ್ ಮಂಜ್ರೇಕರ್ ಅವರ ಈ ಆಕ್ಷನ್-ಥ್ರಿಲ್ಲರ್ ZEE5 ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಹಲವಾರು ಟ್ವಿಸ್ಟ್ ಗಳನ್ನು ಒಳಗೊಂಡಿದೆ. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದಲ್ಲಿ ಭರಪೂರ ಆಕ್ಷನ್ ಎಂಜಾಯ್ ಮಾಡಬಹುದು. ಥಿಯೇಟರ್ ನಲ್ಲಿ ದರ್ಶನ್ ಸಿನಿಮಾ ನೋಡಲು ಮಿಸ್ ಆಗಿದ್ರೆ, ಓಟಿಟಿಯಲ್ಲಿ ಮಿಸ್ ಮಾಡದೆ ನೋಡಿ.
ಹಾರ್ಟ್‌ಸ್ಟಾಪರ್ ಫಾರೆವರ್
ಕಿಟ್ ಕಾನರ್ ಮತ್ತು ಜೋ ಲಾಕ್ ನಟಿಸಿರುವ ಈ ಚಿತ್ರವು ಈ ಶುಕ್ರವಾರ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ಜುಲೈ 17 ರಿಂದ ನೀವು ಇದನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಈ ಚಿತ್ರವು ನಿಕ್ ಮತ್ತು ಚೋರ್ಲಿಯ ಲವ್ ಸ್ಟೋರಿಯನ್ನು ಹೇಳುತ್ತದೆ. ಇದನ್ನು ವಾಶ್ ವೆಸ್ಟ್‌ಮೋರ್‌ಲ್ಯಾಂಡ್ ನಿರ್ದೇಶಿಸಿದ್ದಾರೆ.
ದಿ ಈಸ್ಟ್ ಪ್ಯಾಲೇಸ್
ಹಾರರ್ ಮತ್ತು ಮ್ಯಾಜಿಕಲ್ ಕಥೆಯಿಂದ ತುಂಬಿರುವ ಈ ಸರಣಿಯು ಜುಲೈ 17 ರಂದು ನೆಟ್‌ಫ್ಲಿಕ್ಸ್‌ನಲ್ಲಿಯೂ ಬಿಡುಗಡೆಯಾಗುತ್ತಿದೆ. ಇದರ ಕಥೆ ರಾಜಮನೆತನದ ಸುತ್ತ ಸುತ್ತುತ್ತದೆ. ಈ ಸೀರೀಸ್ ನಲ್ಲಿ ಹೊಸ ಹೊಸ ಟ್ವಿಸ್ಟ್ ಗಳನ್ನು ನೀವು ಕಾಣಬಹುದು.
ಡಿಸೈರ್
ಈ ಚಿತ್ರವು ಜುಲೈ 17 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಜೊತೆಗೆ ಡೇಂಜರಸ್ ಟ್ರೈ ಆಂಗಲ್ ಲವ್ ಸ್ಟೋರಿಯನ್ನು ಒಳಗೊಂಡಿದೆ. ನೀವು ಈ ಚಿತ್ರವನ್ನು ನಿಮ್ಮ ವೀಕೆಂಡ್ ಎಂಜಾಯ್ ಮಾಡಲು ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

