ಬಿ-ಟೌನ್ ಲೋಕಕ್ಕೆ ಎಂಟ್ರಿ ಕೊಡ್ತಾರಾ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ?
ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಸಾರಾ ತೆಂಡೂಲ್ಕರ್ ಹಾಟ್ ಲುಕ್, ಬಿ-ಟೌನ್‌ಗೆ ಕಾಲಿಡ್ತಾರಾ?
ಅತಿ ಚಿಕ್ಕ ವಯಸ್ಸಿಗೆ ಸೆಲೆಬ್ರಿಟಿ ಕಿಡ್ ಲಿಸ್ಟ್ ಸೇರಿಕೊಂಡಿರುವ ಸಾರಾ ಸಚಿನ್ ತೆಂಡೂಲ್ಕರ್ (Sara Sachin Tendulkar) ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಖಾಸಗಿ ವೆಬ್ ಸಂದರ್ಶನವೊಂದರಲ್ಲಿ ಸಾರಾ ಸಚಿನ್ ಆಕ್ಟಿಂಗ್ ಬಗ್ಗೆ ಕೊಂಚ ಆಸಕ್ತಿ ತೋರಿಸಿ ಮಾತನಾಡಿದ್ದಾರೆ. ಅಲ್ಲದೆ ಆಕ್ಟಿಂಗ್ ತರಬೇತಿ ಪಡೆದುಕೊಳ್ಳುತ್ತಿರುವ ಮಾಹಿತಿ ಕೂಡ ಇದೆ.
ಆಕ್ಟಿಂಗ್ ಲೋಕಕ್ಕೆ ಕಾಲಿಡುವ ಮುನ್ನ ಸಾರಾ ಕೆಲವೊಂದು ಬ್ರ್ಯಾಂಡ್‌ಗಳ ಜೊತೆ ಕೈ ಜೋಡಿಸಿ ಅನುಮೋದನೆ ಮಾಡಿದ್ದಾರೆ. ಲಂಡನ್ ವಿಶ್ವವಿದ್ಯಾಲಯದಲ್ಲಿ (London University) ಮೆಡಿಕಲ್ ವ್ಯಾಸಂಗ ಮಾಡಿರುವ ಸಾರಾ ಗ್ಲಾಮರ್ ಲೋಕ ಇಷ್ಟ ಪಡುತ್ತಿದ್ದಾರೆ.
ಕೆಲವೊಂದು ದಿನಗಳ ಹಿಂದೆ ಶಾಹಿತ್ ಕಪೂರ್‌ಗೆ (Shahid Kapoor) ಜೋಡಿಯಾಗುವ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಸಾರಾ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿತ್ತು.
ಸಾರಾ ಎಂಟ್ರಿ ಬಗ್ಗೆ ಹರಿದಾಡುತ್ತಿರುವ ಗಾಸಿಬ್‌ಗಳಿಗೆ ಸಚಿನ್ ಬ್ರೇಕ್ ಹಾಕಿದ್ದಾರೆ. 'ಆಕೆ ವಿದ್ಯಾಭ್ಯಾಸ ಎಂಜಾಯ್ ಮಾಡುತ್ತಿದ್ದಾರೆ ಚಿತ್ರರಂಗಕ್ಕೆ ಈಗ ಎಂಟ್ರಿ ಕೊಡುವುದಿಲ್ಲ ಅದೆಲ್ಲಾ ಫೇಕ್‌ನ್ಯೂಸ್' ಎಂದು ಹೇಳಿದ್ದಾರೆ.
ಸದ್ಯ ಲಂಡನ್‌ನಲ್ಲಿರುವ ಸಾರಾ springನ ಎಂಜಾಯ್ ಮಾಡುತ್ತಿದ್ದಾರೆ. ಇನ್‌ಸ್ಡಾಗ್ರಾಂ (Instagram) ಖಾತೆಯಲ್ಲಿ ಸಾರ 1.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.