- Home
- Entertainment
- Cine World
- ಕೇವಲ 8 ಕೋಟಿ ಬಜೆಟ್‌ನಲ್ಲಿ ತೆಗೆದ ಪುಟ್ಟ ಸಿನಿಮಾ ಗಳಿಸಿದ್ದು 30 ಕೋಟಿ: ಲಾಭದ ಸಿನಿಮಾ ಯಾವುದು?
ಕೇವಲ 8 ಕೋಟಿ ಬಜೆಟ್‌ನಲ್ಲಿ ತೆಗೆದ ಪುಟ್ಟ ಸಿನಿಮಾ ಗಳಿಸಿದ್ದು 30 ಕೋಟಿ: ಲಾಭದ ಸಿನಿಮಾ ಯಾವುದು?
ಕೇವಲ 8 ಕೋಟಿ ಬಜೆಟ್‌ನಲ್ಲಿ ತೆಗೆದ ಪುಟ್ಟ ಸಿನಿಮಾ ಇದು. ಅನಿರೀಕ್ಷಿತವಾಗಿ ಬ್ಲಾಕ್‌ಬಸ್ಟರ್ ಆಗಿ 30 ಕೋಟಿ ಕಲೆಕ್ಷನ್ ಮಾಡಿದೆ. ಲಾಭದ ಹೊಳೆ ಹರಿಸುತ್ತಿರುವ ಆ ಸಿನಿಮಾ ಯಾವುದು ಗೊತ್ತಾ?

ಒಂದು ಸಣ್ಣ ಸಿನಿಮಾ ದೊಡ್ಡ ಗೆಲುವು ಸಾಧಿಸಿದೆ. ಈಗಿನ ಸಿನಿಮಾಗಳ ಪರಿಸ್ಥಿತಿಯೂ ಅದೇ ಅಲ್ವಾ? ಅದರಲ್ಲಿ ದೊಡ್ಡ ವಿಷಯ ಏನಿದೆ ಅನ್ಕೋಬೇಡಿ. ಈ ಸಿನಿಮಾ ಗೆಲುವಿನ ಜೊತೆಗೆ ಲಾಭಾನೂ ತಂದುಕೊಟ್ಟಿದೆ. ಬಾಕ್ಸ್ ಆಫೀಸ್‌ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಆ ಸಣ್ಣ ಸಿನಿಮಾ ಯಾವುದು? ಅಷ್ಟು ದೊಡ್ಡ ಗೆಲುವು ಹೇಗೆ ಸಾಧ್ಯವಾಯಿತು ನೋಡೋಣ ಬನ್ನಿ?
2018ರಲ್ಲಿ ಸೋಹಮ್ ಶಾ ನಿರ್ಮಿಸಿ ನಟಿಸಿದ 'ತುಂಬಾಡ್' ತರಹಾನೇ ಲೇಟೆಸ್ಟ್ ಸಿನಿಮಾ 'ಕ್ರೇಜಿ' (Crazy) ಬಾಕ್ಸ್ ಆಫೀಸ್‌ನಲ್ಲಿ ದುಡ್ಡು ಹೊಡೆಯುತ್ತಿದೆ. ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾಗೆ ಹಾಕಿರುವ ಬಜೆಟ್ ಕೇವಲ 8.4 ಕೋಟಿ ರೂಪಾಯಿಗಳು ಮಾತ್ರ. ಆದರೆ ಈಗ ಬರೋಬ್ಬರಿ 30 ಕೋಟಿ ಕೊಳ್ಳೆ ಹೊಡೆಯಲು ರೆಡಿಯಾಗಿದೆ. ಸಿನಿಮಾಕ್ಕೆ ಹಾಕಿದ ಬಜೆಟ್ಗಿಂತ 300% ಹೆಚ್ಚು ಲಾಭ ಗಳಿಸಲಿದೆ.
ಸೋಹಮ್ ಶಾ ಈ ಹಿಂದೆ 'ತುಂಬಾಡ್' ಸಿನಿಮಾ ರೆಕಾರ್ಡ್ ಅನ್ನು ಕೂಡಾ ಇದು ಬ್ರೇಕ್ ಮಾಡುವ ಹಾಗೆ ಕಾಣ್ತಿದೆ. ಕಂಟೆಂಟ್ ಇರುವ ಸಿನಿಮಾಗಳಿಂದ ಆಡಿಯನ್ಸ್‌ನಲ್ಲಿ ಒಳ್ಳೆ ಹೆಸರು ಸಂಪಾದಿಸಿಕೊಂಡಿದ್ದಾರೆ. ಈಗ ಒಳ್ಳೆ ಕಂಟೆಂಟ್ ಜೊತೆಗೆ ಕಮರ್ಷಿಯಲ್ ಆಗಿಯೂ ಸೋಹಮ್ ಸ್ಟ್ರಾಂಗ್ ಆಗ್ತಿದ್ದಾರೆ. 'ಕ್ರೇಜಿ' ಸಿನಿಮಾವನ್ನು ತುಂಬಾ ಕಡಿಮೆ ಬಜೆಟ್‌ನಲ್ಲಿ ತೆಗೆದಿದ್ದಾರೆ. ಪ್ರೊಡಕ್ಷನ್‌ಗೆ 4.4 ಕೋಟಿ, ಪಬ್ಲಿಸಿಟಿ, ಡಿಸ್ಟ್ರಿಬ್ಯೂಷನ್‌ಗೆ ಇನ್ನೊಂದು 4 ಕೋಟಿ.. ಟೋಟಲ್ ಸೇರಿ 8.4 ಕೋಟಿ ಮಾತ್ರ ಖರ್ಚು ಮಾಡಿದ್ದಾರೆ. ಆದರೆ ಬುದ್ಧಿವಂತಿಕೆಯಿಂದ ಈ ಸಿನಿಮಾ ರಿಲೀಸ್‌ಗೆ ಮುಂಚೆ ಪ್ರೀರಿಲೀಸ್ ಬಿಸಿನೆಸ್‌ನಲ್ಲಿ ಡಿಜಿಟಲ್, ಸ್ಯಾಟಲೈಟ್, ಮ್ಯೂಸಿಕ್ ರೈಟ್ಸ್ ಮಾರಿ 15 ಕೋಟಿ ಸಂಪಾದಿಸಿದ್ದಾರೆ ಟೀಮ್.
ಕಥೆ ಸ್ಟ್ರಾಂಗ್ ಆಗಿದ್ರೆ ಸಾಕು.. ಕಂಟೆಂಟ್ ಇದ್ರೆ ಖರ್ಚು ಬೇಕಿಲ್ಲ.. ಲಾಭ ತಾನಾಗೇ ಬರುತ್ತೆ ಅಂತ ಟಾಲಿವುಡ್‌ನಲ್ಲಿ ಬಲಗಂ ತರಹದ ಕೆಲವು ಸಿನಿಮಾಗಳು ಪ್ರೂವ್ ಮಾಡಿವೆ. ಈಗ ಬಾಲಿವುಡ್‌ನಲ್ಲೂ ಈ ಟೈಪ್ ಸಿನಿಮಾಗಳಿಗೆ ಬೆಂಬಲ ಸಿಗ್ತಿದೆ. ದೊಡ್ಡ ಬಜೆಟ್ ಸಿನಿಮಾಗಳು ಹೇಗೋ ಓಡ್ತವೆ. ಮಧ್ಯದಲ್ಲಿ ಈ ತರಹದ ಸಿನಿಮಾಗಳು ಬಿದ್ರೆನೇ ಪ್ರೇಕ್ಷಕರಿಗೆ ಸ್ವಲ್ಪ ಹೊಸತನ ಸಿಗುತ್ತೆ. ಆ ವಿಷಯವನ್ನು 'ಕ್ರೇಜಿ' ಸಿನಿಮಾ ಪ್ರೂವ್ ಮಾಡಿದೆ. 'ಕ್ರೇಜಿ' ಸಿನಿಮಾ ರಿಲೀಸ್ ಆದ ತಕ್ಷಣ ಮೊದಲ ಆರು ದಿನಗಳಲ್ಲಿ 6.50 ಕೋಟಿ ಕಲೆಕ್ಷನ್ ಮಾಡಿದೆ. ಸಿನಿಮಾ ಅಂದ್ರೇನೆ ವೀಕೆಂಡ್‌ನಲ್ಲಿ ಜಾಸ್ತಿ, ವೀಕ್ ಡೇಸ್‌ನಲ್ಲಿ ಕಡಿಮೆ ಕಲೆಕ್ಷನ್ ಬರುತ್ತೆ. ಆದರೆ ಈ ಸಿನಿಮಾಕ್ಕೆ ವೀಕ್ ಡೇಸ್‌ಲ್ಲೂ ಕಲೆಕ್ಷನ್ ಸ್ವಲ್ಪನೂ ಕಡಿಮೆ ಆಗ್ತಿಲ್ಲ. ಈ ಮೂವಿಗೆ ಬರ್ತಿರೋ ರೆಸ್ಪಾನ್ಸ್ ನೋಡಿ ಇನ್ನೂ 20 ಹೊಸ ಸಿಟಿಗಳಲ್ಲಿ ಸ್ಕ್ರೀನ್ಸ್ ಹೆಚ್ಚಿಸಿದ್ದಾರೆ. ಸದ್ಯಕ್ಕೆ ಸಿನಿಮಾ ನೋಡ್ತಿರೋ ಹುಮ್ಮಸ್ಸು ನೋಡ್ತಿದ್ರೆ ಬಾಕ್ಸ್ ಆಫೀಸ್‌ನಲ್ಲಿ ಇನ್ನೊಂದು 15-18 ಕೋಟಿ ಕಲೆಕ್ಟ್ ಮಾಡುವ ಹಾಗೆ ಇದೆ. ಪ್ರೀ ರಿಲೀಸ್ ಬಿಸಿನೆಸ್ 15 ಕೋಟಿ ಜೊತೆಗೆ ಟೋಟಲ್ ಆಗಿ 30 ಕೋಟಿಗಿಂತ ಜಾಸ್ತಿ ಕಲೆಕ್ಷನ್ ಟಾರ್ಗೆಟ್ ಆಗಿ ಕ್ರೇಜಿ ಮೂವಿ ನುಗ್ಗುತ್ತಿದೆ.