ಇದಕ್ಕಾಗಿಯೇ ಹೇಳೋದು ಹೆಣ್ಣು ಮಗುವಿನ ಅಪ್ಪ ಆಗೋದು The Best Feeling ಅಂತ!
ಹೆಣ್ಣು ಮಗುವಿನ ಅಪ್ಪನಾಗಿರುವುದು ಖಂಡಿತವಾಗಿಯೂ ಒಂದು ವಿಶಿಷ್ಟ ಅನುಭವ, ಈ ಸೆಲೆಬ್ರಿಟಿ ಅಪ್ಪಂದಿರು ನೋಡಿದ್ರೆ, ಈ ಮಾತು ನಿಜ ಅನ್ನೋದು ನಿಮಗೆ ಗೊತ್ತಾಗುತ್ತೆ.

ಈವಾಗ ಕಾಲ ಬದಲಾಗಿದೆ. ಮೊದಲೆಲ್ಲಾ ಹೆಣ್ಣು ಮಗು ಬೇಡ ಅಂತಿದ್ದವರು, ಈವಾಗ ಹೆಣ್ಣು ಮಗು ಮಾತ್ರ ಸಾಕು ಎನ್ನುವಂತಾಗಿದೆ. ಅದರಲ್ಲೂ ಹೆಣ್ಣು ಮಕ್ಕಳ ಅಪ್ಪನಾಗಿರೋದು ಒಂದು ಸುಂದರ, ವಿಶಿಷ್ಟ ಅನುಭವಕ್ಕಿಂತ ಬೇರೆ ಅಲ್ಲ. ಇಲ್ಲಿದೆ ನೋಡಿ ಮುದ್ದು ಮಗಳ ಜೊತೆಗೆ ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳ ಕ್ಯೂಟ್ ಕ್ಷಣಗಳು.
ಶಾರುಖ್ ಖಾನ್
ಶಾರುಖ್ ಖಾನ್ (Shah Rukh Khan) ಸಿನಿಮಾ ಇಂಡಷ್ಟ್ರಿಗೆ ಸೂಪರ್ ಸ್ಟಾರ್ ಇರಬಹುದು ಆದರೆ ಮಗಳಿಗೆ ಯಾವಾಗಲೂ ಸೂಪರ್ ಡ್ಯಾಡ್ ಅಷ್ಟೇ. ಅಪ್ಪನ ಕೂದಲಿನ ಜೊತೆ ಆಡುತ್ತಿರುವ ಪುಟ್ಟ ಸುಹಾನ ಖಾನ್ ನೋಡಿ.
ರಣಬೀರ್ ಕಪೂರ್
ಮದುವೆಯಾಗಿ ಮಗಳು ಹುಟ್ಟಿದ ಬಳಿಕ ರಣಬೀರ್ ಕಪೂರ್ ನಲ್ಲಿ ಹಲವು ಬದಲಾವಣೆ ಕಂಡಿದೆ. ಮಗಳನ್ನು ಯಾವಾಗಲೂ ಕೈಯಲ್ಲಿ ಹಿಡಿದುಕೊಂಡೆ ತಿರುಗಾಡುತ್ತಾರೆ ಈ ನಟ. ಮಗಳು ರಾಹ ಅಪ್ಪನ ಟೋಪಿ ಮೇಲೆ ಏನ್ ಮಾಡಿದ್ದಾರೆ ನೋಡಿ.
ನಿಕ್ ಜೋನಸ್
ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಹೇಗೆ ಕಾಣಿಸ್ತಿದ್ದಾರೆ ನೋಡಿದ್ರ? ಮಗಳು ಮಾಲ್ತಿ ಅಪ್ಪನಿಗೆ ಹೇರ್ ಸ್ಟೈಲ್ ಮಾಡಿದ್ರೆ, ಅಪ್ಪ ಕ್ಯೂಟ್ ಆಗಿಯೇ ಕಾಣಿಸ್ತಾರೆ ಅಲ್ವಾ?
ಕುನಾಲ್ ಖೇಮು
ನಟ ಕುನಾಲ್ ಖೇಮು ತಮ್ಮ ಮುದ್ದಿನ ಮಗಳು ಇನಾಯಗೆ ತಲೆ ಬಾಚಿ ಪಾನಿ ಟೇಲ್ ಕಟ್ಟುತ್ತಿರುವ ಫೋಟೊ ನೋಡಿ, ಹೆಣ್ಣು ಮಗುವಿನ ತಂದೆ ತನ್ನ ಮಗಳಿಗಾಗಿ ಏನ್ ಬೇಕಾದ್ರೂ ಮಾಡ್ತಾರೆ.
ಶಾಹಿದ್ ಕಪೂರ್
ನಟ ಶಾಹಿದ್ ಕಪೂರ್ (Shahid Kapoor) ತನ್ನ ಮುದ್ದಿನ ಮಗಳು ಮಿಶಾ ಜೊತೆ ಮುದ್ದಾಗಿ ಆಟ ಆಡ್ತಿರೋದು ನೋಡಿದ್ರೆ ಎಷ್ಟು ಕ್ಯೂಟ್ ಆಗಿದೆ ಅಲ್ವ?
ಕರಣ್ ಸಿಂಗ್ ಗ್ರೋವರ್
ಹೆಣ್ಣು ಮಕ್ಕಳಿಗೆ ಮೇಕಪ್ ಅಂದ್ರೆ ತುಂಬಾನೆ ಇಷ್ಟ, ಅದರಲ್ಲೂ ಅಪ್ಪನಿಗೆ ಮೇಕಪ್ ಮಾಡೋದನ್ನು ಬಿಟ್ಟು ಬಿಡ್ತಾರಾ? ಇಲ್ಲಿದೆ ನೋಡಿ ನಟ ಕರಣ್ ಸಿಂಗ್ ಗ್ರೋವರ್ ಮುದ್ದು ಮಗಳು ದೇವಿ ಅಪ್ಪನಿಗೆ ಮೇಕಪ್ ಬ್ರಶ್ ನಿಂದ ಮೇಕಪ್ ಮಾಡ್ತಿರೋದು.
ಡ್ವಾನೆ ಜಾನ್ಸನ್
ಪ್ರಖ್ಯಾತ ರೆಸ್ಲರ್ ರಾಕ್ ಎಂದೇ ಕರೆಯಲ್ಪಡುವ ಡ್ವಾನೆ ಜಾನ್ಸನ್ (Dwayne Johnson) ತನ್ನ ಮಗಳ ಮೇಕಪ್ ನಿಂದ ಹೇಗೆ ರೆಡಿಯಾದ್ರೂ ನೋಡಿ, ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ ಅಲ್ವಾ? ದಿ ರಾಕ್!
ಸೈಫ್ ಆಲಿ ಖಾನ್
ಸಾರಾ ಆಲಿ ಖಾನ್ ಪುಟ್ಟ ಮಗುವಾಗಿರೋವಾಗ ಅಪ್ಪ ಸೈಫ್ ಆಲಿ ಖಾನ್ ಅವರಿಗೆ ಶೇವ್ ಮಾಡೊದಕ್ಕೆ ಹೇಗೆ ಸಹಾಯ ಮಾಡ್ತಿದ್ದಾರೆ ನೋಡಿ.
ರೋಹಿತ್ ಶರ್ಮಾ
ತನ್ನ ಮುದ್ದು ಮಗಳು ಸಮೈರಾ ಮಡಿಲಲ್ಲಿ ಮಗುವಾಗಿ ಮಲಗಿದ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma).
ಅನಿಲ್ ಕಪೂರ್
ಅನಿಲ್ ಕಪೂರ್ (Anil Kapoor) ತಮ್ಮ ಇಬ್ಬರು ಮಕ್ಕಳಾದ ಸೋನಂ ಕಪೂರ್ ಮತ್ತು ರಿಯಾ ಕಪೂರ್ ಜೊತೆ ಕ್ವಾಲಿಟಿ ಸಮಯ ಕಳೆಯುತ್ತಿರುವ ಮುದ್ದಾದ ಹಳೆಯ ಫೋಟೊ ವೈರಲ್ ಆಗುತ್ತಿದೆ.