ನಟಿ ಶಿಲ್ಪಾ ಶೆಟ್ಟಿ ಒಡೆತನದ ರೆಸ್ಟೋರೆಂಟ್‌ಗೆ ಪೊಲೀಸರ ಎಂಟ್ರಿ; ಸಿಸಿಟಿವಿ ಪರಿಶೀಲನೆ
ಹಲವು ಚಿತ್ರ ತಾರೆಯರಂತೆ ಪ್ರಸಿದ್ಧ ನಟಿ ಶಿಲ್ಪಾ ಶೆಟ್ಟಿ ಕೂಡ ಮುಂಬೈ ನಗರದಲ್ಲಿ ಒಂದು ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಇದೀಗ ಈ ರೆಸ್ಟೋರೆಂಟ್‌ನಲ್ಲಿ ಕಾರ್ ಕಳ್ಳತನವಾಗಿದೆ.
ಶಿಲ್ಪಾ ಶೆಟ್ಟಿ
ಮುಂಬೈ ನಗರದ ದಾದರ್‌ನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ "ಫೈನ್ ಡೈನಿಂಗ್ ರೆಸ್ಟೋರೆಂಟ್" ಇದೆ. ಹಲವು ಶ್ರೀಮಂತರು ಊಟ ಮಾಡಿ ಹೋಗುವ ಆ ಪ್ರಸಿದ್ಧ ಹೋಟೆಲ್‌ನಲ್ಲಿ ಕಳ್ಳತನ ನಡೆದಿದೆ. ಪ್ರಸಿದ್ಧ ದಿನಪತ್ರಿಕೆಯೊಂದರ ವರದಿಯ ಪ್ರಕಾರ, ಆ ರೆಸ್ಟೋರೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿದ್ದ ಸುಮಾರು 80 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಇಂದು ಕಳವು ಮಾಡಲಾಗಿದೆ. ಕಾಣೆಯಾದ ಆ ಕಾರಿನ ಮಾಲೀಕ ಬಾಂದ್ರಾ ನಿವಾಸಿ ಉದ್ಯಮಿ ರುಹಾನ್ ಖಾನ್.
ಬಾಸ್ಟಿಯನ್
ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಹೊರಬಂದಾಗ ತಮ್ಮ 80 ಲಕ್ಷ ಮೌಲ್ಯದ ಕಾರು ಕಳುವಾಗಿರುವುದು ಗೊತ್ತಾಗಿದೆ. ತಕ್ಷಣ ಆ ಉದ್ಯಮಿ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ತಮ್ಮ ಕಾರಿನ ಕಳ್ಳತನದ ಬಗ್ಗೆ ಎಫ್‌ಐಆರ್ ದಾಖಲಿಸಿದ್ದಾರೆ. ಉದ್ಯಮಿ ರುಹಾನ್ ತಮ್ಮ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗೆ ಬಂದಿದ್ದರು. ಕಾರನ್ನು ಹೋಟೆಲ್‌ನ ನೆಲಮಾಳಿಗೆಯಲ್ಲಿ ನಿಲ್ಲಿಸಿ, ಹೋಟೆಲ್‌ನಲ್ಲಿ ಕೆಲಸ ಮಾಡುವ ಯುವಕನಿಗೆ ಕಾರಿನ ಕೀಲಿಯನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.
ಬಾಸ್ಟಿಯನ್ ಮುಂಬೈ
ಆ ವ್ಯಕ್ತಿ ಕಾರನ್ನು ಪಾರ್ಕ್ ಮಾಡಿ ಹೋದ ನಂತರ, ಬಂದ ಇಬ್ಬರು ವ್ಯಕ್ತಿಗಳು ನೆಲಮಾಳಿಗೆಗೆ ಪ್ರವೇಶಿಸುವುದನ್ನು ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಇಬ್ಬರು ಹ್ಯಾಕಿಂಗ್ ತಂತ್ರಜ್ಞಾನವನ್ನು ಬಳಸಿ ಕಾರನ್ನು ಕಳವು ಮಾಡಿದ್ದಾರೆ. ಪೊಲೀಸರ ವರದಿಯ ಪ್ರಕಾರ, ಕಳ್ಳರು ಕಾರನ್ನು ಕದ್ದು ತೆರೆದು, ನಂತರ ಓರ್ವ ಶಂಕಿತ ವ್ಯಕ್ತಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಬೆಳಗಿನ ಜಾವ 4 ಗಂಟೆಗೆ ರೆಸ್ಟೋರೆಂಟ್ ಮುಚ್ಚಿದಾಗ, ಹೋಟೆಲ್ ಮುಂಭಾಗದಲ್ಲಿ ಕಾರ್ ತರುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಚಾಲಕ ಪಾರ್ಕಿಂಗ್ ಸ್ಥಳಕ್ಕೆ ಹೋದಾಗ ಕಾರ್ ಅಲ್ಲಿ ಇರಲಿಲ್ಲ.
ಶಿಲ್ಪಾ ಶೆಟ್ಟಿ ಹೋಟೆಲ್
ಈ ಮಧ್ಯೆ, ಶಿಲ್ಪಾ ಶೆಟ್ಟಿಗೆ ಸೇರಿದ ಆ ರೆಸ್ಟೋರೆಂಟ್‌ನಲ್ಲಿನ ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಖಾನ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕಳುವಾದ ಕಾರನ್ನು ಪತ್ತೆಹಚ್ಚಿ, ತಪ್ಪಿತಸ್ಥರನ್ನು ಬಂಧಿಸಲು, ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚುವರಿ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ತನಿಖೆ ಮುಂದುವರಿಸುತ್ತಿರುವಾಗ, ಹೋಟೆಲ್ ಆಡಳಿತಕ್ಕೆ ಭದ್ರತೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ.
ಶಿಲ್ಪಾ ಅವರ ಈ ರೆಸ್ಟೋರೆಂಟ್ ಬಾಸ್ಟಿಯನ್ ದಾದರ್‌ನ ಕೋಹಿನೂರ್ ಸ್ಕ್ವೇರ್‌ನ 48ನೇ ಮಹಡಿಯಲ್ಲಿದೆ.