ಲಂಡನ್ ಮನೆಯಿಂದ ಐಷಾರಾಮಿ ಕಾರುಗಳವರೆಗೆ; ಈ ದುಬಾರಿ ವಸ್ತುಗಳ ಓನರ್ ಕತ್ರಿನಾ ಕೈಫ್
ಕತ್ರಿನಾ ಕೈಫ್ (Katrina Kaif) ಇಂದು ಜುಲೈ 16 ರಂದು ತಮ್ಮ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕತ್ರಿನಾ ಪ್ರತಿಭಾವಂತ ನಟಿ ಮಾತ್ರವಲ್ಲದೆ, ಕೂಡ ಅದ್ಭುತ ವ್ಯಕ್ತಿ ಕೂಡ ಹೌದು. ವಿವಿಧ ವರದಿಗಳ ಪ್ರಕಾರ, ವಿಕ್ಕಿ ಮತ್ತು ಕತ್ರಿನಾ ಅವರ ನಿವ್ವಳ ಮೌಲ್ಯ ಸುಮಾರು 250 ಕೋಟಿ ರೂಗಳು. ಕತ್ರಿನಾ ಕೈಫ್ ಒಡೆತನದ ಕೆಲವು ದುಬಾರಿ ಆಸ್ತಿ ಮತ್ತು ಕಾರುಗಳ ವಿವರ ಇಲ್ಲಿದೆ.
ಲಂಡನ್‌ನಲ್ಲಿ ಕತ್ರಿನಾ ಕೈಫ್, 7.2 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ನಟಿ ಒಡೆತನದ ಸುಂದರವಾದ ಬಂಗಲೆಯು ಲಂಡನ್‌ನ ಹ್ಯಾಂಪ್‌ಸ್ಟೆಡ್ ಪ್ರದೇಶದಲ್ಲಿದೆ.
ಕತ್ರಿನಾ ಮತ್ತು ವಿಕ್ಕಿ ಇಬ್ಬರೂ ಮುಂಬೈ ನಗರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಕತ್ರಿನಾ ಕೈಫ್ ತನ್ನ ಸಹೋದರಿ ಇಸಾಬೆಲ್ಲೆ ಕೈಫ್ ಅವರೊಂದಿಗೆ ಮುಂಬೈನ ಅಂಧೇರಿ ವೆಸ್ಟ್‌ನ ಮೌರ್ಯದಲ್ಲಿ ಎರಡು ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಅಪಾರ್ಟ್ಮೆಂಟ್ ಬೆಲೆ 45 ಕೋಟಿ ಎಂದು ಅಂದಾಜಿಸಲಾಗಿದೆ
ಕತ್ರಿನಾ ಕೈಫ್ ಐಷಾರಾಮಿ ರೇಂಜ್ ರೋವರ್ ವೋಗ್ ಎಲ್‌ಡಬ್ಲ್ಯೂಬಿ ಮಾಲೀಕರಾಗಿದ್ದಾರೆ. ರೇಂಜ್ ರೋವರ್ ವೋಗ್ ಎಲ್‌ಡಬ್ಲ್ಯೂಬಿ ಐಷಾರಾಮಿ ಕಾರು ತಯಾರಕರ ಪ್ರಮುಖ ಮಾದರಿಯಾಗಿದ್ದು, ಇದರ ಬೆಲೆ 2.37 ಕೋಟಿ ರೂಪಾಯಿ.
ನಟಿ ಕತ್ರಿನಾ ಕೈಫ್ ಅವರ ಕಾರು ಸಂಗ್ರಹವು ಮರ್ಸಿಡಿಸ್ ML 350 ಅನ್ನು ಸಹ ಒಳಗೊಂಡಿದೆ, ಇದರ ಬೆಲೆ ಸುಮಾರು 66 ಲಕ್ಷಗಳು. ಕಾರು ಬಿಳಿ ಬಣ್ಣದಲ್ಲಿದ್ದು, ಕತ್ರಿನಾರ ಫೇವರೇಟ್ ಆಗಿದೆ.
Audi Q7 ಜರ್ಮನ್ ವಾಹನ ತಯಾರಕರ SUV ಗಳಲ್ಲಿ ಒಂದಾಗಿದೆ. ವಿವಿಧ ಮಾಧ್ಯಮ ಕಾರ್ಯಕ್ರಮಗಳಲ್ಲಿ ಕತ್ರಿನಾ ಕೈಫ್ ಜೊತೆ ಅವರ ಈ ಆಡಿ ಕ್ಯೂ7 ಕಾರು ಕಾಣಿಸಿಕೊಂಡಿದೆ. ಇದು ಗಾಢ ಕಂದು ಬಣ್ಣದ ಕಾರು ಆಗಿದೆ. ಕೈಫ್ ಕಸ್ಟಮೈಸ್ ಮಾಡಿದ ನಂಬರ್ ಪ್ಲೇಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಆಡಿ ಕ್ಯೂ7 ಬೆಲೆ ರೂ.80 ಲಕ್ಷ (ಎಕ್ಸ್ ಶೋ ರೂಂ).