Box office report: ಮುಂದುವರೆದ 777 Charile ಮೋಡಿ!
ಶುಕ್ರವಾರದಂದು ಅನೇಕ ಚಿತ್ರಗಳು ಬಿಡುಗಡೆಯಾಗಿದೆ. ಅದರಲ್ಲಿ ಪ್ರಮುಖ ಮೂರು ಹೊಸ ಬಿಡುಗಡೆಗಳಾದ ಜನ್ಹಿತ್ ಮೇ ಜಾರಿ (Janhit Mein Jaari) , ಜುರಾಸಿಕ್ ವರ್ಲ್ಡ್ ಡೊಮಿನಿಯನ್ (Jurassic World Dominion) ಮತ್ತು 777 ಚಾರ್ಲಿ (777 Charlie ) ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿವೆ. ‘ಜನ್ಹಿತ್ ಮೇ ಜಾರಿ’ ಕುರಿತು ಹೇಳುವುದಾದರೆ, ಚಿತ್ರವು ಎರಡನೇ ದಿನದಲ್ಲಿ ಅದರ ಸಂಗ್ರಹದಲ್ಲಿ 60 ಪ್ರತಿಶತವನ್ನು ಏರಿಕೆ ಕಂಡಿದೆ. ಅಂದಹಾಗೆ, ಕನ್ನಡ ಚಿತ್ರವಾಗಿರುವ ‘777 ಚಾರ್ಲಿ’ ಹಿಂದಿ ಬೆಲ್ಟ್‌ನಲ್ಲಿ ಸಾಕಷ್ಟು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಆದರೂ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ಎರಡನೇ ದಿನವೂ ತನ್ನ ವೇಗವನ್ನು ಕಾಯ್ದುಕೊಂಡಿರುವ ಒಂದು ಚಿತ್ರ ಹಾಲಿವುಡ್‌ನ 'ಜುರಾಸಿಕ್ ವರ್ಲ್ಡ್ ಡೊಮಿನಿಯನ್'. ಮತ್ತೊಂದೆಡೆ, ಅಕ್ಷಯ್ ಕುಮಾರ್ ಅವರ 'ಸಾಮ್ರಾಟ್ ಪೃಥ್ವಿರಾಜ್' ಗಲ್ಲಾಪೆಟ್ಟಿಗೆಯ ಹೋರಾಟವು ಮುಂದುವರಿದರೆ, ಕಮಲ್ ಹಾಸನ್ ಅವರ 'ವಿಕ್ರಮ್' ಮತ್ತು ಕಾರ್ತಿಕ್ ಆರ್ಯನ್ ಅವರ 'ಭೂಲ್ ಭುಲೈಯಾ 2' ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಮುಂದುವರೆದಿದೆ. ಶನಿವಾರದಂದು ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಪ್ರದರ್ಶನ ನೀಡಿವೆ ಎಂಬುದನ್ನು ಇಲ್ಲಿದೆ ನೋಡಿ.
ಜುರಾಸಿಕ್ ವರ್ಲ್ಡ್ ಡೊಮಿನಿಯನ್:
ಚಿತ್ರವು ಮೊದಲ ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 11.47 ಕೋಟಿ ಗಳಿಸಿ ಸಖತ್ ಓಪನಿಂಗ್ ಮಾಡಿದೆ. ಎರಡನೇ ದಿನದಲ್ಲಿ ಚಿತ್ರದ ಗಳಿಕೆ ಉತ್ತಮವಾಗಿದೆ. ಪ್ರಾಥಮಿಕ ಅಂಕಿ ಅಂಶಗಳ ಪ್ರಕಾರ ಶನಿವಾರ ಚಿತ್ರ 11.50 ಕೋಟಿ ಗಳಿಸಿದೆ. ಇದರೊಂದಿಗೆ ಚಿತ್ರದ ಎರಡೂ ದಿನಗಳ ಒಟ್ಟು ಗಳಿಕೆ 22.97 ಕೋಟಿ ರೂ.ಗೆ ಏರಿಕೆಯಾಗಿದೆ. ಭಾರತದಲ್ಲಿ 'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಚಿತ್ರದ ಮೊದಲ ದಿನದ ಓಪನಿಂಗ್ 'ಡೆಡ್‌ಪೂಲ್ 2', 'ದಿ ಲಯನ್ ಕಿಂಗ್', 'ಅವೆಂಜರ್ಸ್: ಏಜ್ ಆಫ್ ಅಲ್ಟ್ರಾನ್' ಮತ್ತು 'ದಿ ಜಂಗಲ್ ಬುಕ್'ಗಿಂತ ಹೆಚ್ಚಾಗಿದೆ.
ಜನಹಿತ್ ಮೇ ಜಾರಿ:
ನುಶ್ರತ್ ಭರುಚ್ಚಾ, ಅನುದ್ ಸಿಂಗ್ ಢಾಕಾ ಮತ್ತು ಪರಿತೋಷ್ ತ್ರಿಪಾಠಿ ಅಭಿನಯದ 'ಜನ್ಹಿತ್ ಮೇ ಜಾರಿ' ಶುಕ್ರವಾರ 100 ರೂಪಾಯಿ ಟಿಕೆಟ್ ದರದಲ್ಲಿ ಬಿಡುಗಡೆಯಾಗಿದೆ. ಕಡಿಮೆ ದರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ನಿರ್ಮಾಪಕರು ನಿರ್ಧಾರ ಚಿತ್ರದ ಮೇಲೆ ಅಡ್ಡ ಪರಿಣಾಮ ಬೀರಿದರೂ ಶನಿವಾರದಂದು ಚಿತ್ರವು ಶೇಕಡಾ 60 ಕ್ಕಿಂತ ಹೆಚ್ಚು ಏರಿಕೆಯನ್ನು ದಾಖಲಿಸಿದೆ. ಆದರೆ ಬಾಕ್ಸ್ ಆಫೀಸ್ ರೇಸ್‌ನಲ್ಲಿ ಉಳಿಯಲು ಚಿತ್ರವು ಭಾನುವಾರ ಅದ್ಭುತವಾಗಿ ಗಳಿಕೆ ಮಾಡಬೇಕಾಗುತ್ತದೆ. 43 ಲಕ್ಷದಲ್ಲಿ ತೆರೆಕಂಡ ಚಿತ್ರ ಶನಿವಾರದಂದು ಆರಂಭಿಕ ಅಂಕಿ ಅಂಶಗಳ ಪ್ರಕಾರ 70 ಲಕ್ಷ ಗಳಿಸಿದೆ.
777 ಚಾರ್ಲಿ:
ಶುಕ್ರವಾರ ಬಿಡುಗಡೆಯಾದ ಕನ್ನಡ ಚಿತ್ರ '777 ಚಾರ್ಲಿ' ಮೊದಲ ದಿನವೇ ಹಿಂದಿ ಭಾಷಿಕ ಪ್ರೇಕ್ಷಕರಿಂದ ಸಂಪೂರ್ಣವಾಗಿ ತಿರಸ್ಕರಿಸಲ್ಪಟ್ಟಿದೆ. ಅಂತಿಮ ಅಂಕಿ ಅಂಶಗಳ ಪ್ರಕಾರ, ಚಿತ್ರವು ಮೊದಲ ದಿನದಲ್ಲಿ ಒಟ್ಟು 6.2 ಕೋಟಿ ಗಳಿಸಿದೆ ಮತ್ತು ಅದರ ಹಿಂದಿ ಆವೃತ್ತಿಯ ಪಾಲು ಕೇವಲ 15 ಲಕ್ಷ ರೂಪಾಯಿಗಳು. ಬಿಡುಗಡೆಯಾದ ಎರಡೇ ದಿನದಲ್ಲಿ ಚಿತ್ರವು ಆರಂಭಿಕ ಅಂಕಿಅಂಶಗಳ ಪ್ರಕಾರ 7.60 ಕೋಟಿ ಗಳಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟು ಗಳಿಕೆ ಈಗ 13.80 ಕೋಟಿ ರೂ.
ಸಾಮ್ರಾಟ್ ಪೃಥ್ವಿರಾಜ್:
ಅಕ್ಷಯ್ ಕುಮಾರ್ ಮತ್ತು ಮಾನುಷಿ ಛಿಲ್ಲರ್ ಅಭಿನಯದ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ತನ್ನ ಹೋರಾಟವನ್ನು ಮುಂದುವರೆಸುತ್ತಿದೆ. ಮೊದಲ ವಾರದಲ್ಲಿ ನಿರಾಶಾದಾಯಕ 55.05 ಕೋಟಿ ಗಳಿಸಿದ ಚಿತ್ರ ಶುಕ್ರವಾರದ ಅಂತಿಮ ಅಂಕಿ ಅಂಶಗಳ ಪ್ರಕಾರ ಬಿಡುಗಡೆಯಾದ ಎಂಟನೇ ದಿನಕ್ಕೆ 1.66 ಕೋಟಿ ಗಳಿಸಿದೆ ಮತ್ತು ಪ್ರ ಶನಿವಾರದ ಆರಂಭಿಕ ಅಂಕಿಅಂಶಗಳಂತೆ, ಚಿತ್ರವು ತನ್ನ ಒಂಬತ್ತನೇ ದಿನಕ್ಕೆ 2.30 ಕೋಟಿ ಗಳಿಸಿತು. ತಮಿಳು ಮತ್ತು ತೆಲುಗು ಪ್ರೇಕ್ಷಕರು ಚಿತ್ರವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಮೊದಲ ವಾರದಲ್ಲಿ, ಅದರ ತೆಲುಗು ಆವೃತ್ತಿಯು ಕೇವಲ 5 ಲಕ್ಷ ರೂಪಾಯಿಗಳನ್ನು ಗಳಿಸಿದರೆ, ತಮಿಳು ಆವೃತ್ತಿಯು 6 ಲಕ್ಷ
ರೂಪಾಯಿಗಳನ್ನು ಗಳಿಸಿದೆ.
ವಿಕ್ರಮ್:
ನಿರ್ದೇಶಕ ಲೋಕೇಶ್ ಕನ್ನಗರಾಜ್ ಅವರ ಕಮಲ್‌ಹಾಸನ್ ಅಭಿನಯದ 'ವಿಕ್ರಮ' ಚಿತ್ರ ಬಿಡುಗಡೆಯಾದ ಎರಡನೇ ವಾರದಲ್ಲೂ ಬಾಕ್ಸ್ ಆಫೀಸ್ ನಲ್ಲಿ ತನ್ನ ಹಿಡಿತವನ್ನು ಕಾಯ್ದುಕೊಳ್ಳುತ್ತಿದೆ. ತಮಿಳು ಆವೃತ್ತಿಯಿಂದ ಚಿತ್ರದ ಗರಿಷ್ಠ ಬ್ಯುಸಿನೆಸ್ ನಡೆಯುತ್ತಿದೆ. ಮೊದಲ ವಾರದಲ್ಲಿ 143.95 ಕೋಟಿ ಗಳಿಸಿದ್ದು, ಈ ಪೈಕಿ ಹಿಂದಿ ಆವೃತ್ತಿ 2.85 ಕೋಟಿ ಗಳಿಸಿದೆ. ಬಿಡುಗಡೆಯಾದ ಎರಡನೇ ಶುಕ್ರವಾರ 7.95 ಕೋಟಿ ಗಳಿಸುವ ಮೂಲಕ ಚಿತ್ರವು 150 ಕೋಟಿ ರೂಪಾಯಿಗಳ ಗಡಿ ದಾಟಿತು. ಎರಡನೇ ಶನಿವಾರದ ಆರಂಭಿಕ ಅಂಕಿ ಅಂಶಗಳ ಪ್ರಕಾರ ಚಿತ್ರ 13 ಕೋಟಿ ಗಳಿಸಿದೆ.
ಭೂಲ್ ಭುಲೈಯಾ 2:
ನಿರ್ದೇಶಕ ಅನೀಸ್ ಬಜ್ಮಿ ಅವರ ಚಿತ್ರ 'ಭೂಲ್ ಭುಲೈಯಾ 2' ನಾಲ್ಕನೇ ವಾರದಲ್ಲಿ ತನ್ನ ಹಿಡಿತವನ್ನು ಮುಂದುವರೆಸಿದೆ. ಮೊದಲ ವಾರದಲ್ಲಿ 92.05 ಕೋಟಿ ರೂ., ಎರಡನೇ ವಾರದಲ್ಲಿ 49.0 ಕೋಟಿ ರೂ. ಮತ್ತು ಮೂರನೇ ವಾರದಲ್ಲಿ 21.40 ಕೋಟಿ ರೂ. ಗಳಿಸಿದೆ ಮತ್ತು ಬಿಡುಗಡೆಯಾದ ನಾಲ್ಕನೇ ಶುಕ್ರವಾರ ಮತ್ತು ಶನಿವಾರದಂದು, ಕಾರ್ತಿಕ್ ಆರ್ಯನ್ ಅವರ ಚಿತ್ರವು ಕ್ರಮವಾಗಿ ರೂ 1.56 ಕೋಟಿ ಮತ್ತು ರೂ 2.70 ಕೋಟಿ ಗಳಿಸಿತು. ಈ ಚಿತ್ರವು ಇಲ್ಲಿಯವರೆಗೆ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 167.41 ಕೋಟಿ ಗಳಿಸಿದೆ.