- Home
- Entertainment
- Cine World
- 3 ನಿಮಿಷ 24 ಸೆಕೆಂಡ್ ವಿಡಿಯೋ ಲೀಕ್, ಖ್ಯಾತ ನಟಿ ವೈರಲ್ ಕ್ಲಿಪ್‌ಗಾಗಿ ಮಿಲಿಯನ್ ಸರ್ಚ್
3 ನಿಮಿಷ 24 ಸೆಕೆಂಡ್ ವಿಡಿಯೋ ಲೀಕ್, ಖ್ಯಾತ ನಟಿ ವೈರಲ್ ಕ್ಲಿಪ್‌ಗಾಗಿ ಮಿಲಿಯನ್ ಸರ್ಚ್
3 ನಿಮಿಷ 24 ಸೆಕೆಂಡ್ ವಿಡಿಯೋ ಲೀಕ್, ಈ ವೈರಲ್ ಕ್ಲಿಪ್‌ಗಾಗಿ ಜನ ಗೂಗಲ್, ಸೋಶಿಯಲ್ ಮೀಡಿಯಾ ಸೇರಿದಂತ ಎಲ್ಲೆಡೆ ಜಾಲಾಡುತ್ತಿದ್ದಾರೆ. ಯಾರು ಈ ಜನಪ್ರಿಯ ನಟಿ, ಏನಿದು ವಿಡಿಯೋ ಲೀಕ್ ಪ್ರಕರಣ?

ನಟಿ ವಿಡಿಯೋಗಾಗಿ ಹುಡುಕಾಟ
ಮೂರು ನಿಮಿಷ 24 ಸೆಕೆಂಡ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ನಟಿ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅರೋಹಿ ಮಿಮ್ ಅವರದ್ದು ಎನ್ನಲಾದ ಈ ವಿಡಿಯೋಗಾಗಿ ಜನ ಎಲ್ಲಿಲ್ಲದ ಹುಡುಕಾಟ ನಡೆಸುತ್ತಿದ್ದಾರೆ. ಗೂಗಲ್, ಎಕ್ಸ್, ಇನ್‌ಸ್ಟಾಗ್ರಾಂ ಸೇರಿದಂತೆ ಇರೋ ಬರೋ ಎಲ್ಲಾ ಸೈಟ್‌ಗಳಲ್ಲಿ ಜನರು ಹುಡುಕಾಡುತ್ತಿದ್ದಾರೆ. ಏಕಾಏಕಿ ಅರೋಹಿ ಮಿಮ್ ವೈರಲ್ ಕ್ಲಿಪ್ ಟ್ಯಾಗ್ ಮಿಲಿಯನ್ ಸರ್ಚ್ ಕಂಡಿದೆ.
ಅರೋಹಿ ಮಿಮ್ ನಟಿಯದ್ದು ಎನ್ನಲಾದ ಕ್ಲಿಪ್
ಅರೋಹಿ ಮಿಮ್ ಬಾಂಗ್ಲಾದೇಶದ ಜನಪ್ರಿಯ ನಟಿ. ಟಿಕ್‌ಟಾಕ್ ಮೂಲಕ ಜನಪ್ರಿಯರಾದ ನಟಿ ಹಲವು ಬ್ರ್ಯಾಂಡ್ ಪ್ರಮೋಶನ್‌ಗಳ ಮೂಲಕ ಬಾಂಗ್ಲಾದೇಶ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಬಾಂಗ್ಲಾದೇಶದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಜನಪ್ರಿಯರಾಗಿರುವ ಅರೋಹಿ ಮಿಮ್ ಅವರದ್ದು ಎನ್ನಲಾದ 3 ನಿಮಿಷದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಟ್ರೆಂಡ್ ಆದ ಹ್ಯಾಶ್‌ಟ್ಯಾಗ್
ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಅರೋಹಿ ಮಿಮ್ ವಿಡಿಯೋ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಹಲವರು ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ ಎಂದು ಹಲವು ಲಿಂಕ್ ನೀಡಿದ್ದಾರೆ. ಜನರು ವಿಡಿಯೋಗಾಗಿ ಲಿಂಕ್ ಕ್ಲಿಕ್ ಮಾಡುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ ಎಂದು ಹೇಳಲಾಗುತ್ತಿದೆ. ಉದ್ದೇಶಪೂರ್ವಕವಾಗಿ ನಕಲಿ ವಿಡಿಯೋ ಸೃಷ್ಟಿಸಿ ಹರಿಬಿಡಲಾಗಿದೆ ಅನ್ನೋ ಮಾತಗಳು ಕೇಳಿಬರುತ್ತಿದೆ.
ಸೈಬರ್ ವಾರ್ನಿಂಗ್
ಅರೋಹಿ ಮಿಮ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿ ಮೋಸ ಹೋಗಬೇಡಿ. ಇದು ಸೈಬರ್ ವಂಚನೆ ಮತ್ತೊಂದು ದಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೆಲ ವಿಡಿಯೋಗಳು ಹರಿದಾಡುತ್ತಿರುವುದು ನಿಜ. ಆದರೆ ನಿಜಕ್ಕೂ ಇದು ನಟಿ ಅರೋಹಿ ಮಿಮ್ ವಿಡಿಯೋ ಅಥವಾ ನಕಲಿ ವಿಡಿಯೋ ಅನ್ನೋದು ಸ್ಪಷ್ಟವಾಗಿಲ್ಲ.
ಅರೋಹಿ ಮಿಮ್ ಪ್ರತಿಕ್ರಿಯೆ ಏನು?
ಘಟನೆ ಸಂಬಂಧ ಅರೋಹಿ ಮಿಮ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಘಟನೆ ಸಂಬಂಧ ತಮ್ಮ ಸೋಶಿಯಲ್ ಮೀಡಿಯಾ ಅಥವಾ ಮಾಧ್ಯಮಗಳ ಮುಂದೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಸೋಶಿಯಲ್ ಮೀಡಿಯಾಗಲ್ಲಿ ಕೋಲಾಹಲ ಎಬ್ಬಿಸಿರುವುದು ಸ್ಪಷ್ಟ.ಇದಕ್ಕೂ ಮುನ್ನ ಇದೇ ರೀತಿ ವೈರಲ್ ವಿಡಿಯೋ ಎಂದು ವಿವಾದ ಸೃಷ್ಟಿಯಾಗಿತ್ತು.
ಅರೋಹಿ ಮಿಮ್ ಜನಪ್ರಿಯತೆ
ಬಾಂಗ್ಲಾದೇಶದ ಢಾಕದಲ್ಲಿ ನೆಲೆಸಿರುವ ಅರೋಹಿ ಅತೀ ಕಡಿಮೆ ಅವಧಿಯಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ. ಅರೋಹಿ ಮಿಮ್ ಸೌಂದರ್ಯಕ್ಕೆ ಬಾಂಗ್ಲಾದೇಶ ಸಿನಿಮಾ ಕ್ಷೇತ್ರವೆ ಫಿದಾ ಆಗಿದೆ. ಇನ್ನು ಕೆಲ ಟಿವಿ ಶೋಗಳಲ್ಲಿ ಅರೋಹಿ ಮಿಮ್ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಯಾ ಇನ್‌ಫ್ಲುಯೆನ್ಸರ್ ಆಗಿ, ನಟಿಯಾಗಿ ಗಮನಸೆಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

