Instagram ಪ್ರತಿ ಪೋಸ್ಟ್‌ಗೆ ಭರ್ತಿ 3 ಕೋಟಿ ಗಳಿಸೋ ಸೆಲೆಬ್ರಿಟಿ; ಶಾರೂಕ್, ಸಲ್ಮಾನ್, ದೀಪಿಕಾ, ಆಲಿಯಾ ಅಲ್ಲ!
ಬಾಲಿವುಡ್ ನಟ-ನಟಿಯರು ಸಿನಿಮಾವೊಂದಕ್ಕೇ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಕೊಲೋಬರೇಶನ್, ಜಾಹೀರಾತಿನಿಂದಲೂ ಲಕ್ಷ ಲಕ್ಷ ದುಡಿಯುತ್ತಾರೆ. ಇನ್‌ಸ್ಟಾಗ್ರಾಂ ಬಳಸುವ ಮೂಲಕ ಬಾಲಿವುಡ್ ನಟ-ನಟಿಯರು ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ಹೀಗೆ ಇನ್‌ಸ್ಟಾಗ್ರಾಂನಿಂದ ಅತೀ ಹೆಚ್ಚು ಹಣ ಗಳಿಸುತ್ತಿರೋದು ಯಾರು ನಿಮ್ಗೊತ್ತಾ?
ಬಾಲಿವುಡ್ ನಟ-ನಟಿಯರು ಸಿನಿಮಾವೊಂದಕ್ಕೇ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಕೊಲೋಬರೇಶನ್, ಜಾಹೀರಾತಿನಿಂದಲೂ ಲಕ್ಷ ಲಕ್ಷ ದುಡಿಯುತ್ತಾರೆ. ಅಷ್ಟೇ ಯಾಕೆ, ಹಲವಾರು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಿಂದ ದೊಡ್ಡ ಮೊತ್ತದ ಹಣವನ್ನು ಗಳಿಸುತ್ತಾರೆ. ಅದರಲ್ಲೂ ಇನ್‌ಸ್ಟಾಗ್ರಾಂ ಬಳಸುವ ಮೂಲಕ ಬಾಲಿವುಡ್ ನಟ-ನಟಿಯರು ಕೋಟಿಗಟ್ಟಲೆ ಹಣ ಗಳಿಸುತ್ತಾರೆ.
ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ತಮ್ಮ ಜೀವನದ ಬಗ್ಗೆ ಅಪ್‌ಡೇಟ್ ಮಾಡಲು ಮಾತ್ರವಲ್ಲದೆ ಬ್ರ್ಯಾಂಡ್ ಪ್ರಮೋಶನ್‌ಗಳಿಗಾಗಿಯೂ Instagramನ್ನು ಬಳಸುತ್ತಾರೆ. ಆದರೆ ಹೀಗೆ ಇನ್‌ಸ್ಟಾಗ್ರಾಂನಿಂದ ಅತೀ ಹೆಚ್ಚು ಹಣ ಗಳಿಸುತ್ತಿರೋದು ಬಾಲಿವುಡ್‌ನ ಟಾಪ್ ನಟರಾಗಿರುವ ಶಾರೂಕ್, ಸಲ್ಮಾನ್, ದೀಪಿಕಾ, ಆಲಿಯಾ ಯಾರೂ ಅಲ್ಲ.
Instagramನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರೋ ನಟಿ ಪ್ರಿಯಾಂಕ ಚೋಪ್ರಾ. ಈಕೆ ಪ್ರತಿ ಪೋಸ್ಟ್‌ಗೆ 3 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ಅಪಾರ ಅಭಿಮಾನಿಗಳನ್ನು ಹೊಂದಿರೋ ಈ ನಟಿ ಬಾಲಿವುಡ್‌ನಲ್ಲಿ ಅಭಿಮಾನಿಗಳನ್ನು ಮೆಚ್ಚಿಸಿದ್ದು ಮಾತ್ರವಲ್ಲದೆ, ಹಾಲಿವುಡ್‌ನಲ್ಲಿಯೂ ತಮ್ಮ ಅಭಿನಯದಿಂದ ಬಲವಾದ ಛಾಪು ಮೂಡಿಸಿದ್ದಾರೆ.
ಸಿಯಾಸತ್ ಡೈಲಿ ವರದಿಯ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ 89.4 ಮಿಲಿಯನ್ ಅಭಿಮಾನಿಗಳನ್ನು ಹೊಂದಿರುವ ಪ್ರಿಯಾಂಕಾ ಚೋಪ್ರಾ, ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ರೂ 3 ಕೋಟಿ ಗಳಿಸುತ್ತಾರೆ. ಇನ್ನು ಉಳಿದ ಖ್ಯಾತ ನಟ-ನಟಿಯರಾದ ಶಾರುಖ್ ಖಾನ್ 80 ರಿಂದ 1 ಕೋಟಿ, ಆಲಿಯಾ ಭಟ್ 1 ಕೋಟಿ, ಶ್ರದ್ಧಾ ಕಪೂರ್ 1.18 ಕೋಟಿ, ಮತ್ತು ದೀಪಿಕಾ ಪಡುಕೋಣೆ 1.5 ಕೋಟಿ ಗಳಿಸುತ್ತಾರೆ.
ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಅಮೇರಿಕನ್ ವೆಬ್ ಸೀರೀಸ್ ಸಿಟಾಡೆಲ್‌ನಲ್ಲಿ ತಮ್ಮ ಆಕ್ಷನ್-ಪ್ಯಾಕ್ಡ್ ಅಭಿನಯದ ಮೂಲಕ ಅಭಿಮಾನಿಗಳನ್ನು ಸೆಳೆದರು. ನಟಿ ನಂತರ ಅಮೇರಿಕನ್ ಚಲನಚಿತ್ರ 'ಲವ್ ಎಗೇನ್'ನಲ್ಲಿ ಕಾಣಿಸಿಕೊಂಡರು. ಸ್ಯಾಮ್ ಹ್ಯೂಘನ್ ಅವರೊಂದಿಗಿನ ಪ್ರಿಯಾಂಕ ಕೆಮೆಸ್ಟ್ರಿ ಪ್ರೇಕ್ಷಕರನ್ನು ಆಕರ್ಷಿಸಿತು.
ನಟಿ ಪ್ರಸ್ತುತ ತನ್ನ ಮುಂಬರುವ ಚಿತ್ರ 'ಹೆಡ್ಸ್ ಆಫ್ ಸ್ಟೇಟ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ನಟಿ ಇದ್ರಿಸ್ ಎಲ್ಬಾ ಮತ್ತು ಜಾನ್ ಸೆನಾ ಅವರೊಂದಿಗೆ ನಟಿಸಲಿದ್ದಾರೆ. ಕೆಲಸದ ಬದ್ಧತೆಯ ಕಾರಣದಿಂದ ನಟಿ ತನ್ನ ಸೋದರಸಂಬಂಧಿ ಪರಿಣಿತಿ ಚೋಪ್ರಾ ಅವರ ಮದುವೆಯಲ್ಲಿ ಉಪಸ್ಥಿತರಿರಲ್ಲಿಲ್ಲ.
ಅಷ್ಟೇ ಅಲ್ಲ, ಬಾಲಿವುಡ್ ಚಿತ್ರ 'ಜೀ ಲೇ ಝರಾ'ದಲ್ಲಿಯೂ ನಟಿ ಕಾಣಿಸಿಕೊಳ್ಳಲಿದ್ದಾರೆ. ಫರ್ಹಾನ್ ಅಖ್ತರ್ ನಿರ್ದೇಶಿಸಿದ ಈ ಚಲನಚಿತ್ರವನ್ನು 2019ರಲ್ಲಿ ಘೋಷಿಸಲಾಗಿತ್ತು. ಆದ್ರೆ, ಪ್ರಿಯಾಂಕಾ ಚೋಪ್ರಾ ಡೇಟ್ ಸಮಸ್ಯೆಯಿಂದ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ.
ಜೀ ಲೇ ಝರಾ ಚಿತ್ರವು ಮೂವರು ಹುಡುಗಿಯರ ನಡುವಿನ ಫ್ರೆಂಡ್‌ಶಿಪ್‌ನ ಕುರಿತಾದಕಥೆಯನ್ನು ಹೊಂದಿದೆ. ಆಲಿಯಾ ಭಟ್, ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.