- Home
- Entertainment
- Cine World
- Bollywood Stars Wife's Nicknames: ಬಾಲಿವುಡ್ ಸ್ಟಾರ್ ಗಳು ತಮ್ಮ ಪತ್ನಿಯನ್ನು ಪ್ರೀತಿಯಿಂದ ಏನೇನು ಕರಿತಾರೆ ನೋಡಿ
Bollywood Stars Wife's Nicknames: ಬಾಲಿವುಡ್ ಸ್ಟಾರ್ ಗಳು ತಮ್ಮ ಪತ್ನಿಯನ್ನು ಪ್ರೀತಿಯಿಂದ ಏನೇನು ಕರಿತಾರೆ ನೋಡಿ
ಅನೇಕ ಬಿ-ಟೌನ್ ನಟರು ತಮ್ಮ ಸ್ಟಾರ್ ಪತ್ನಿಯರಿಗೆ ವಿಶಿಷ್ಟ ಹೆಸರುಗಳನ್ನು ಇಟ್ಟು ಕರೆಯುತ್ತಾರೆ. ಜಾನು, ಬೇಬಿ ಅಲ್ಲ… ಬದಲಾಗಿ ಈ ಸ್ಟಾರ್ ನಟರು ಪ್ರೀತಿಯಿಂದ ತಮ್ಮ ಪತ್ನಿಯನ್ನು ಏನೆಂದು ಕರೆಯುತ್ತಾರೆ ನೋಡಿ.

ಬಾಲಿವುಡ್ ಸೆಲೆಬ್ರಿಟಿಗಳನ್ನು ಜನರು ಅಡ್ಡ ಹೆಸರುಗಳನ್ನಿಟ್ಟು ಕರೆಯೋದು ಸಾಮಾನ್ಯ. ಆದ್ರೆ ಬಾಲಿವುಡ್ ನ ಸ್ಟಾರ್ ನಟರು ತಮ್ಮ ಪತ್ನಿಯನ್ನು ಮುದ್ದಾಗಿ, ಪ್ರೀತಿಯಿಂದ ಯಾವ ಹೆಸರಿನಿಂದ ಕರೆಯುತ್ತಾರೆ ಅನ್ನೋದು ನಿಮಗೆ ಗೊತ್ತೇ? ಇಲ್ಲಿದೆ ನೊಡಿ ಅಭಿಷೇಕ್ ಬಚ್ಚನ್ ನಿಂದ ಹಿಡಿದು, ರಣವೀರ್ ಸಿಂಗ್ ವರೆಗೂ ಯಾವ ನಟರು ತಮ್ಮ ಪತ್ನಿಯನ್ನು ಏನೆಂದು ಕರೆಯುತ್ತಾರೆ(Nicknames of B-Town Celebrities) ನೋಡೋಣ.
ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ (Aishwarya Rai) ದಂಪತಿಗಳು ಬಿ ಟೌನ್‌ನ ಅತ್ಯಂತ ಜನಪ್ರಿಯ ಜೋಡಿಗಳು. ಮಾಧ್ಯಮ ವರದಿಗಳ ಪ್ರಕಾರ, ಅಭಿಷೇಕ್ ಕೆಲವೊಮ್ಮೆ ತನ್ನ ಪತ್ನಿ ಐಶ್ವರ್ಯಾ ಅವರನ್ನು ಪ್ರೀತಿಯಿಂದ ಆಶ್ ಎಂದು ಮತ್ತು ಕೆಲವೊಮ್ಮೆ ವೈಫಿ ಎಂದು ಕರೆಯುತ್ತಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ (Kiara Advani) ಒಬ್ಬರಿಗೊಬ್ಬರು ಪ್ರೀತಿಯ ಹೆಸರಿನಿಂದ ಅಲ್ಲ, ಪ್ರಾಣಿಯ ಹೆಸರಿನಿಂದ ಕರೆಯುತ್ತಾರೆ. ಇಬ್ಬರು ಕೂಡ ಮಂಕಿ ಎಂದು ಪ್ರೀತಿಯಿಂದ ಕರೆಯುತ್ತೇವೆ ಎಂದು ಕಾಫಿ ವಿತ್ ಕರಣ್ ನಲ್ಲಿ ಕಿಯಾರ ತಿಳಿಸಿದ್ದರು.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್
ಆಲಿಯಾ ಮತ್ತು ರಣಬೀರ್ ಕಪೂರ್ (Ranbir Kapoor) ಬಗ್ಗೆ ಹೇಳುವುದಾದರೆ, ಅವರ ಅಡ್ಡಹೆಸರುಗಳು ತುಂಬಾ ಭಿನ್ನವಾಗಿವೆ. ಆಲಿಯಾ ತನ್ನ ಫೋನ್‌ನಲ್ಲಿ ಪತಿ ರಣಬೀರ್ ಹೆಸರನ್ನು 8 ಎಂದು ಸೇವ್ ಮಾಡಿದ್ದಾರೆ. ಯಾಕಂದ್ರೆ ರಣಬೀರ್ ಸಂಖ್ಯೆ 8ನ್ನು ಲಕ್ ಎಂದು ಪರಿಗಣಿಸುತ್ತಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್
ರಣವೀರ್ ಸಿಂಗ್ ತಮ್ಮ ಸುಂದರ ಪತ್ನಿ ಮತ್ತು ನಟಿ ದೀಪಿಕಾ ಪಡುಕೋಣೆ (Deepika Padukone) ಅವರನ್ನು ಪ್ರೀತಿಯಿಂದ ಬಟರ್‌ಫ್ಲೈ ಎಂದು ಕರೆಯುತ್ತಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್
ವಿಕಿ ಕೌಶಲ್ ಸಂದರ್ಶನವೊಂದರಲ್ಲಿ, ಕತ್ರಿನಾ ತುಂಬಾ ವಿಷಯಗಳ ಬಗ್ಗೆ ಚಿಂತೆ ಮಾಡುತ್ತಿರುತ್ತಾರೆ, ಹಾಗಾಗಿ ನಾನು ಕತ್ರೀನಾಳನ್ನು ಪ್ಯಾನಿಕ್ ಬಟನ್ (panic button)ಎಂದು ಕರೆಯೋದಾಗಿ ಹೇಳಿದ್ದರು.
ಜಯಾ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್
ಬಾಲಿವುಡ್‌ನ ಶಹೆನ್‌ಶಾ ಅಮಿತಾಬ್ ಬಚ್ಚನ್(Amitabh Bachchan) ತಮ್ಮ ಪತ್ನಿ ಜಯಾ ಬಚ್ಚನ್‌ಗೆ ಒಂದು ಸುಂದರವಾದ ಹೆಸರನ್ನು ಇಟ್ಟಿದ್ದಾರೆ ಮತ್ತು ಅವರನ್ನು ಪ್ರೀತಿಯಿಂದ ದೇವಿ ಜಿ ಎಂದು ಕರೆಯುತ್ತಾರೆ.