ನಿನ್ನಷ್ಟು ಸುಂದರಿ ಯಾರಿಲ್ಲ: ಪತ್ನಿಯನ್ನು ಹೊಗಳಿದ ಶಾಹಿದ್ ಕಪೂರ್!
ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಪ್ರೀತಿ ತೋರಿಸಿಕೊಳ್ಳಲು ನಾಚಿಕೊಳ್ಳದ ನಟ ಶಾಹಿದ್ ಎಂದ ನೆಟ್ಟಿಗರು. ನೆಟ್ಟಿಗರ ಕಾಮೆಂಟ್ ನೋಡಿ...
ಬಾಲಿವುಡ ಕ್ಯೂಟ್ ಜೋಡಿ ಶಾಹಿದ್ ಕಪೂರ್ ಮತ್ತು ಮೀರಾ ರಾಜಪುತ್ ಸೋಷಿಯಲ್ ಮೀಡಿಯಾದಲ್ಲಿ ಲವಿ ಡವಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಇನ್‌ಸ್ಟಾಗ್ರಾಂನಲ್ಲಿ ಮೀರಾ ಅಡುಗೆ ಮನೆ ರೆಡಿ ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. 'ಫುಡ್ ಕವರ್, ಪ್ಲೇಟ್, ಬೌಲ್, ನ್ಯಾಪ್ಕಿನ್ ಎಲ್ಲವೂ ಪರ್ಫೆಕ್ಟ್ ಆಗಿರಬೇಕು' ಎಂದು ಮೀರಾ ಬರೆದಿದ್ದಾರೆ.
ನೀಲಿ ಬಣ್ಣದ ಡ್ರೆಸ್‌ನಲ್ಲಿ ಮಿಂಚುತ್ತಿರುವ ಮೀರಾ ಫೋಟೋಗೆ 'ನಿನ್ನಷ್ಟು ಸುಂದರಿ ಯಾರಿಲ್ಲ' ಎಂದು ಶಾಹಿದ್ ಕಪೂರ್ ಕಾಮೆಂಟ್ ಮಾಡಿದ್ದಾರೆ.
ಮೀರಾ ಸಿನಿಮಾ ಬ್ಯಾಗ್ರೌಂಡ್‌ನಿಂದ ಬಂದವರಲ್ಲ ಆದರೆ ಶಾಹಿದ್ ಕಪೂರ್ ಗ್ಲಾಮರ್ ಲೋಕಕ್ಕೆ ಹೊಂದಿಕೊಂಡು ನೇಮ್ ಆಂಡ್ ಫೇಮ್ ಕಾಪಾಡಿಕೊಳ್ಳುತ್ತಿದ್ದಾರೆ ಮೀರಾ.
ಸಾಮಾನ್ಯವಾಗಿ ನಟರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದಿಲ್ಲ, ಇದ್ದರೂ ಪತ್ನಿಯರ ಫೋಟೋಗೆ ಕಾಮೆಂಟ್ ಮಾಡುವುದಿಲ್ಲ. ಶಾಹಿದ್ ಮಾಡಿದ್ದಾರೆ ಅಂದ್ರೆ ರೊಮ್ಯಾಂಟಿಕ್ ಗಂಡ ಎಂದು ಕಾಮೆಂಟ್ ಮಾಡಿದ್ದಾರೆ.
ಶಾಹಿದ್ ಕಪೂರ್‌ಗಿಂತ ಮೀರಾ 13 ವರ್ಷ ಕಿರಿಯವರು. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ಕೆಲವರು, ಇಲ್ಲ ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದು ಇನ್ನೂ ಕೆಲವರು ಹೇಳುತ್ತಾರೆ.