Poonam pandey ಬಾತ್‌ರೂಮ್ ಸೀಕ್ರೆಟ್ ರಿವೀಲ್ ಮಾಡಿ ಬ್ಯಾನ್ ಆದ ನಟಿ
31ರ ವಸಂತಕ್ಕೆ ಕಾಲಿಟ್ಟ ಮಾಡೆಲ್ ಪೂನಂ ಪಾಂಡೆ ಜೀವನದಲ್ಲಿ ಯಾರೂ ಎಂದೂ ಮರೆಯಲಾಗದ ಕಾರಣಗಳಿಗೆ ಸುದ್ದಿಯಾಗಿದ್ದರು. ಏನು ಆ ಒಂಬತ್ತು ಕಾಂಟ್ರೋವರ್ಸಿಗಳು?
ಕೊರೋನಾ ಲಾಕ್‌ಡೌನ್ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪೂನಂ ವಿರುದ್ಧ ಮುಂಬೈ ಪೊಲೀಸರು ಸೆಕ್ಷನ್ 188, 269 ಮತ್ತು 51 (B) ದಾಖಲಿಸಿದ್ದರು. ಅಲ್ಲದೇ ಮರೈನ್ ಡ್ರೈವ್ ಪೊಲೀಸ್ ಠಾಣೆಯವರು ಅರೆಸ್ಟ್ ಸಹ ಮಾಡಿದ್ದರು.
2011ರ ವಿಶ್ವ ಕಪ್ ಸಮಯದಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟು, ಬೆತ್ತಲಾಗಿ ಓಡುವುದಾಗಿ ಕೇಳಿಕೆ ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅರೆ ಬೆತ್ತಲೆ ಫೋಟೋ ಅಪ್ಲೋಡ್ ಮಾಡಿ ಬಿಸಿಸಿಐ (BCCI) ನನಗೆ ಅನುಮತಿ ನೀಡಿಲ್ಲ, ಎಂದೂ ತಿಳಿಸಿದ್ದರು. ಪೂನಂ ಆಗಮನಕ್ಕೆ ಮಾಧ್ಯಮದವರು ಮಾತ್ರವಲ್ಲದೆ ದೊಡ್ಡ ಅಭಿಮಾನಿಗಳ ಬಳಗವೇ ಕಾದು ಕುಳಿತ್ತಿತ್ತು.
ಅರೆ ಬೆತ್ತಲೆ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಪೂನಂ ಯುಟ್ಯೂಬ್ ಚಾನೆಲ್ ತೆರೆದರು. ಬಾತ್‌ರೂಮ್ ಸೀಕ್ರೆಟ್ ಟೈಟಲ್ ನೀಡಿ ಅಪ್ಲೋಡ್ ಮಾಡುತ್ತಿದ್ದ ವೀಡಿಯೋಗಳು ಕೋಟಿಯಲ್ಲಿ ವೀಕ್ಷಣೆ ಪಡೆಯುತ್ತಿದ್ದವು. 18 ವಯಸ್ಸಿಗಿಂತ ಕಿರಿಯವರು ನೋಡುತ್ತಿದ್ದಾರೆ, ಎಂದು ತಿಳಿಯುತ್ತಿದ್ದಂತೆ ಯುಟ್ಯೂಬ್ ಬಾತ್‌ರೂಮ್ ಸೀಕ್ರೆಟ್ ಚಾನೆಲ್ ಅನ್ನು ಬ್ಯಾನ್ ಮಾಡಿತ್ತು.
ಸೆನ್ಸೇಷನ್ ಕ್ರಿಯೇಟ್ ಮಾಡುವ ಲುಕ್‌ನಲ್ಲಿ ಪೂನಂ ಕ್ರಿಕೆಟರ್ ಸಚಿನ್ ಜೊತೆ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ದೂರು ದಾಖಲಿಸಿದ ನಂತರ ತಿಳಿಯಿತು, ಎಡಿಟ್ ಮಾಡಿರುವ ಫೋಟೋ ಎಂದು. ಇದರಿಂದ ಸಚಿನ್ ವೃತ್ತಿ ಮೇಲೆ ದೊಡ್ಡ ಪರಿಣಾಮ ಬೀರಿತ್ತು.
ಪೂನಂ ಮೊದಲ ಬಾರಿ ಬಾಲಿವುಡ್‌ನಲ್ಲಿ ನಟಿಸಿದ ಸಿನಿಮಾ Nasha. ಕಾಲೇಜ್ ಹುಡುಗ ಟೀಚರ್‌ನ ಪ್ರೀತಿಸುತ್ತಾನೆ ಅನ್ನೋದು ಒನ್ ಲೈನ್ ಸ್ಟೋರಿ. ಸಿನಿಮಾದಲ್ಲಿ ಅಶ್ಲೀಲ ದೃಶ್ಯ ಮತ್ತು ಕೆಟ್ಟ ಸಂದೇಶವಿದೆ ಎಂಬ ಸಂಶಯದಿಂದ ಸಿನಿಮಾ ಬ್ಯಾನ್ ಮಾಡಿದ್ದರು.
2012ರಲ್ಲಿ 'ನಿಮ್ಮ ಆ್ಯಟಿಟ್ಯೂಡ್ ಅಂಡರ್‌ವೇರ್ ರೀತಿ ಇರಬೇಕು. ಧರಿಸಿರಬೇಕು ಅದರೆ ಯಾರಿಗೂ ತೋರಿಸಬಾರದು,' ಎಂದು ಪೂನಂ ಟ್ಟೀಟ್ ಮಾಡಿದ್ದರು. ಆಗ 'ಬೆತ್ತಲೆಯಾದರೂ ನಿನಗೆ ತೃಪ್ತಿ ಸಿಕ್ಕಿಲ್ಲ. ಯಾರೂ ಮಾಡಿರದ ಅಸಹ್ಯಗಳನ್ನು ನೀನು ಮಾಡಬೇಕು. ಪಬ್ಲಿಕ್‌ನಲ್ಲಿ * ಮಾಡಬೇಕು,' ಎಂದು Taslima Nasreen ಸಹ ಪ್ರತಿಕ್ರಿಯೆ ಕೊಟ್ಟಿದ್ದರು.
2020ರಲ್ಲಿ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದ್ದರು. ಅವರ ನಡುವೆ ಇದ್ದ ಒಪ್ಪಂದ ಮುಗಿದ ಮೇಲೂ ನನ್ನ ವಿಡಿಯೋ ಬಳಸಿಕೊಂಡು ಹಣ ಮಾಡುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದರು ಪೂನಂ.
ಬ್ಯುಸಿನೆಸ್ ಮ್ಯಾನ್ ಸ್ಯಾಮ್ ಬಾಂಬೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಹನಿಮೂನ್‌ನಲ್ಲಿಯೇ ದೊಡ್ಡ ಜಗಳವಾಡಿ ದೂರು ದಾಖಲಿಸಿದ್ದರು. ಈ ಜಗಳದಲ್ಲಿ ಪೂನಂ ಮುಖ ಮೂತಿ ಊದಿ ಕೊಂಡಿತ್ತು.
2017ರಲ್ಲಿ ಯಾರೂ ನನ್ನನ್ನು ಬ್ಯಾನ್ ಮಾಡಬಾರದು ಎಂದು ತಮ್ಮದೇ ಆದ ಆ್ಯಪ್ ಸೃಷ್ಟಿಸಿದ್ದರು. ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದರು. ಆದರೆ ಅಶ್ಲೀಲವಾಗಿದೆ ಎಂದು ನೆಟ್ಟಿಗರು ರಿಪೋರ್ಟ್ ಮಾಡಿದ್ದಕ್ಕೆ ಗೂಗಲ್ ತಮ್ಮ ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿತ್ತು.