ಬಿಕಿನಿಯಲ್ಲಿ ಕಾಣಿಸಿಕೊಂಡ ಕಾಂತಾ ಲಗಾ ಬೆಡಗಿ, ಮೊದಲ ನೋಟಕ್ಕೆ ಬೋಲ್ಡ್!
ಕಾಂತಾ ಲಗಾ ಬೆಡಗಿ ಶೆಫಾಲಿ ಬೋಲ್ಡ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಶೆಫಾಲಿ ಜರಿವಾಲ್ ಬಿಕಿನಿ ಫೋಟೋ ಹಂಚಿಕೊಂಡಿದ್ದಾರೆ. ಏನಿದೆ ಫ್ಯಾನ್ಸ್ ಕಮೆಂಟ್ಸ್?

ಕಾಂತಾ ಲಗಾ ಹಾಡಿನ ಮೂಲಕ ಭಾರಿ ಸುನಾಮಿ ಎಬ್ಬಿಸಿದ ಶೆಫಾಲಿ ಜರಿವಾಲ್ ಒಂದಷ್ಟು ಅವಕಾಶಗಳ ಬಳಿಕ ಟಿವಿ ಸ್ಕ್ರೀನ್‌ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಬೋಲ್ಡ್ ಫೋಟೋ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಶೆಫಾಲಿ ಜರಿವಾಲ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ನೀಲಿ ಹಾಗೂ ಗೋಲ್ಡನ್ ಬಣ್ಣದ ಬಿಕಿನಿಯಲ್ಲಿ ಹಲವರ ನಿದ್ದೆಗೆಡಿಸಿದ್ದಾರೆ.
ಶೆಫಾಲಿ ಬಿಕಿನಿ ಪೋಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ ಬಿಕಿನಿ ತೊಟ್ಟು ಸುಂದರವಾಗಿದ್ದರೂ, ಫೋಸ್ ನೀಡಲು ಬರುತ್ತಿಲ್ಲ ಎಂದು ಕಲೆಳೆದಿದ್ದಾರೆ.
ಶೆಫಾಲಿ ಬಿಕಿನಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಹಲವು ಬಾರಿ ಶೆಫಾಲಿ ಜರಿವಾಲ್ ಬಿಕಿನಿಯಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಬಿಗ್‌ಬಾಸ್ 13ರಲ್ಲಿ ಕಾಣಿಸಿಕೊಂಡು ಮನೆಮಾತಾಗಿರುವ ಶೆಫಾಲಿ ಜರಿವಾಲ್, ಬಳಿಕ ಟಿವಿ ಸೀರಿಯಲ್ , ರಿಯಾಲಿಟಿ ಶೋ ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಅಭಿನಯದ ಮುಜೆ ಶಾದಿ ಕರೋಗಿ ಚಿತ್ರದ ಕಾಂತಾ ಲಗಾ ಹಾಡಿನ ಮೂಲಕ ಶೆಫಾಲಿ ಭಾರಿ ಮೋಡಿದ್ದರು.
ಬೇಬಿ ಕಮ್ ನಾ ವೆಬ್ ಸೀರಿಸ್‌ನಲ್ಲಿ ನಾಯಕಿಯಾಗಿಯೂ ಅಭಿನಯಿಸಿದ್ದಾರೆ. ಶ್ರೇಯಸ್ ತಲಪಾಡೆ ಜೊತೆ ಅಮೋಘ ಅಭಿನಯದ ಭಾರಿ ಮೆಚ್ಚುಗೆ ಗಳಿಸಿದ್ದಾರೆ.
ನಾಚ್ ಬಲಿಯೇ ರಿಯಾಲಿಟಿ ಶೋ, ಹಲವು ಮ್ಯೂಸಿಕ್ ವಿಡಿಯೋಗಳಲ್ಲೂ ಶೆಫಾಲಿ ಸೊಂಟ ಬಳುಕಿಸಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮ ಮೂಲಕ ಟೆಂಪರೇಚರ್ ಹಚ್ಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.