ಕಣ್ಣಿಗೆ ಕುಕ್ಕುವಂತೆ ಕೆಂಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡ Deepika Padukone ಟ್ರೋಲ್
ದೀಪಿಕಾ ಪಡುಕೋಣೆ ಏರ್ಪೋರ್ಟ್ ಲುಕ್ ಪದೇ ಪದೇ ವೈರಲ್ ಆಗುವುದಕ್ಕೆ ಕಾರಣವೇನು? ಇಲ್ನೋಡಿ ಕೆಂಪು ಡ್ರೆಸ್ ಹೇಗಿದೆ?
'ಪಠಾಣ್' ಸಿನಿಮಾ ಚಿತ್ರೀಕರಣಕ್ಕೆಂದು ಡಿಂಪಲ್ ಹುಡುಗಿ ದೀಪಿಕಾ ಪಡುಕೋಣೆ ಮುಂಬೈ ವಿಮಾನ ನಿಲ್ದಾಣದಿಂದ ಸ್ಪೇನ್‌ಗೆ ಹಾರಿದ್ದಾರೆ.
ಕಪ್ಪು ಬಣ್ಣದ ಐಷಾರಾಮಿ ಕಾರಿನಲ್ಲಿ ಆಗಮಿಸಿದ ದೀಪಿಕಾ ರೆಡ್ ಲುಕ್ ನೋಡಿ ನೆಟ್ಟಿಗರು ಮತ್ತು ಸ್ಥಳೀಯರು ಶಾಕ್ ಆಗಿದ್ದಾರೆ. ಇದು ಸಾಮಾನ್ಯ ರೆಡ್ ಅಲ್ಲ ಇದು Neon ರೆಡ್ ಬಣ್ಣ ಎನ್ನಬಹುದು.
ಲೆದರ್ ಬಣ್ಣದ ಕೆಂಪು ಪ್ಯಾಂಟ್‌ಗೆ ಕೆಂಪು ಸ್ವೆಟರ್ ಮತ್ತು ಕೆಂಪು ಹ್ಯಾಟ್ ಧರಿಸಿದ್ದಾರೆ. ಇದಕ್ಕೆ ಪಿಂಕ್ ನಿಯಾನ್ ಹೀಲ್ಸ್ ಶೋ ಧರಿಸಿದ್ದಾರೆ.
ಪ್ರತಿಯೊಂದು ಬಟ್ಟೆಗೂ ಮ್ಯಾಚ್ ಆಗುವಂತೆ ದೀಪಿಕಾ ಬ್ಯಾಗ್ ಹಿಡಿದುಕೊಂಡಿರುತ್ತಾರೆ. ಈ ಬಟ್ಟೆಗೂ ಸಹ ಕ್ರೀಮ್ ಮತ್ತು ರೆಡ್ ಕಾಂಬಿನೇಷನ್ ಬ್ಯಾಗ್ ಹಿಡಿದುಕೊಂಡಿದ್ದಾರೆ.
ದೀಪಿಕಾಗೂ ಮುನ್ನ ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಕೂಡ ವಿಮಾನದಲ್ಲಿ ಸ್ಪೇನ್‌ಗೆ ಹೊರಟರು. ಆದರೆ ಪ್ಯಾಪರಾಜಿಗಳು ಕಣ್ಣು ದೀಪಿಕಾ ಮೇಲೆ ಇತ್ತು.
ಸಿನಿಮಾಗಳಲ್ಲಿ ದೀಪಿಕಾ ಏನು ಧರಿಸುತ್ತಾರೆ ಅನ್ನೋದು ನೆಟ್ಟಿಗರಿಗೆ ಕುತೂಹಲವಿಲ್ಲ ಆದರೆ ಪ್ರತಿ ಸಲ ಏರ್ಪೋರ್ಟ್‌ಗೆ ಧರಿಸುವ ಔಟ್‌ಫಿಟ್‌ಗಳ ಮೇಲೆ ಕಣ್ಣಿದೆ. ಒಂದು ಸಲ ಧರಿಸುವ ಬಟ್ಟೆಯನ್ನು ಮತ್ತೆ ಧರಿಸುವುದಿಲ್ಲ, ಅವರ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಿ, ಅದರಿಂದ ಬರುವ ಹಣವನ್ನು ತಮ್ಮ ಚ್ಯಾರಿಟಿಗೆ ಬಳಸುತ್ತಾರಂತೆ.