ನೆಪೊಟಿಜಿಂ ಇದ್ದರೂ ಹಿಟ್‌ ಚಿತ್ರ ನೀಡಿರುವ ಬಾಲಿವುಡ್‌ ಸೆಲೆಬ್ರೆಟಿಗಳು

First Published Jun 20, 2020, 4:26 PM IST

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ, ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ (ನೆಪೊಟಿಜಿಂ) ಬಗ್ಗೆ  ಚರ್ಚೆ ಕಾವೇರಿದೆ. ಈವರೆಗೆ ಸೆಲೆಬ್ರೆಟಿಗಳಾದ ರವೀನಾ ಟಂಡನ್, ಶೇಖರ್ ಕಪೂರ್, ಕಂಗನಾ ರಣಾವತ್, ಅಭಿನವ್ ಕಶ್ಯಪ್ ಮತ್ತು ಸಾಹಿಲ್ ಖಾನ್ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಕೆಲವು ಖ್ಯಾತನಾಮರು ನೆಪೊಟಿಜಿಂ ಬಗ್ಗೆ ಸಲ್ಮಾನ್ ಖಾನ್ ಹೆಸರನ್ನು ಬಹಿರಂಗವಾಗಿ ಎಳೆದಿದ್ದಾರೆ. ಬಾಲಿವುಡ್‌ನಲ್ಲಿ ಇರುವ ಕೆಲವು ಕೆಟ್ಟ ಪ್ರವೃತ್ತಿಗಳನ್ನು ಅಲ್ಲಗಳೆಯುವಂತಿಲ್ಲ. ನೆಪೊಟಿಜಿಂ ಹೊರತಾಗಿಯೂ, ಸಿನಿಮಾರಂಗದಲ್ಲಿ ಸ್ಥಾನವನ್ನು ಪಡೆದ ಅನೇಕ ಸೆಲೆಬ್ರೆಟಿಗಳೂ ಇದ್ದಾರೆ. ಎಲ್ಲ ಮುಳ್ಳಿನ ಹಾದಿಯನ್ನೂ ಸವೆಸಿ, ಭಾರತೀಯ ಚಿತ್ರರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿರುವ ಕೆಲವು ಮಹನೀಯರು ಇವರು..