4600 ಕೋಟಿಯ ಒಡತಿ ಜೂಹಿ ಚಾವ್ಲಾ..57ರಲ್ಲೂ ಫಿಟ್ ಆಗಿರಲು ಕಾರಣ ಈ ಸೀಕ್ರೆಟ್
ಬಾಲಿವುಡ್ ನ ಶ್ರೀಮಂತ ನಟಿಯಾದ 4600 ಕೋಟಿಯ ಒಡತಿ ಜೂಹಿ ಚಾವ್ಲಾಗೆ 57 ವರ್ಷ. ಈ ವಯಸ್ಸಲ್ಲೂ ನಟಿ ಫಿಟ್ನೆಸ್ ಕಾಯ್ದುಕೊಂಡಿರೋದಕ್ಕೆ ಕಾರಣ, ಅವರ ಡಯಟ್. ಅವರು ಡಯಟ್ ಹೇಗಿರುತ್ತೆ ನೀವೆ ನೋಡಿ.

ಜೂಹಿ ಚಾವ್ಲಾ (Juhi Chawla) 80 ಮತ್ತು 90 ರ ದಶಕದ ಟಾಪ್ ನಟಿ ಮತ್ತು ಮಿಸ್ ಇಂಡಿಯಾ ಆಗಿದ್ದರು. 57 ವರ್ಷದ ಜೂಹಿ ಚಾವ್ಲಾ ಅವರ ಸೌಂದರ್ಯ ಮತ್ತು ಫಿಟ್ನೆಸ್ ಇನ್ನೂ ಹಾಗೆಯೇ ಇದೆ. ಸಾವಿರಾರು ಕೋಟಿಗಳ ಒಡತಿಯಾಗಿದ್ದರೂ, ಅವರ ಆಹಾರ ಪದ್ಧತಿ ತುಂಬಾ ಸರಳವಾಗಿದೆ ಮತ್ತು ಇದು ಅವರ ಫಿಟ್ನೆಸ್ ಮತ್ತು ಸೌಂದರ್ಯದ ದೊಡ್ಡ ರಹಸ್ಯವಾಗಿದೆ. ಈ ವಯಸ್ಸಿನಲ್ಲೂ ಜೂಹಿ ಹೇಗೆ ತನ್ನನ್ನು ತಾನು ಆರೋಗ್ಯವಾಗಿ ಮತ್ತು ಫಿಟ್ ಆಗಿ ಇಟ್ಟುಕೊಳ್ಳುತ್ತಾಳೆಂದು ತಿಳಿಯೋಣ.
ಬೆಳಿಗ್ಗೆ ಆರೋಗ್ಯಕರ ಮತ್ತು ಸಕಾರಾತ್ಮಕ ಆರಂಭ.
ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ತಮ್ಮ ಬೆಳಿಗ್ಗೆ ಹೇಗೆ ಪ್ರಾರಂಭಿಸುತ್ತಾರೆ ಮತ್ತು ಅದು ದಿನವನ್ನು ಹೇಗೆ ಉತ್ತಮಗೊಳಿಸುತ್ತದೆ ಅನ್ನೋದನ್ನು ಹೇಳಿದ್ದಾರೆ. ಬೆಳಿಗ್ಗೆ ಬೇಗನೆ ಏಳುವುದು, ಸೂರ್ಯನನ್ನು ನೋಡುವುದು ಮತ್ತು ತಾಜಾ ಗಾಳಿಯನ್ನು ಉಸಿರಾಡುವುದು (breathing fresh air) ಬಹಳ ಮುಖ್ಯ ಎಂದು ಜೂಹಿ ನಂಬುತ್ತಾರೆ. ಇದು ದಿನವನ್ನು ಸಂತೋಷದಿಂದ ಮತ್ತು ಶಾಂತಿಯುತವಾಗಿ ಪ್ರಾರಂಭಿಸುವಂತೆ ಮಾಡುತ್ತದೆ.
ಜೂಹಿ ಬೆಳಿಗ್ಗೆ ಎದ್ದ ನಂತರ ಮೊದಲು ಏನು ಮಾಡ್ತಾರೆ?
ಜೂಹಿ ಚಾವ್ಲಾ ಬೆಳಿಗ್ಗೆ ಮಾಡುವ ಮೊದಲ ಕೆಲಸವೆಂದರೆ 3-4 ಗ್ಲಾಸ್ ನೀರು ಕುಡಿಯುವುದು. ಜೂಹಿ ಚಾವ್ಲಾ 15 ನೇ ವಯಸ್ಸಿನಿಂದಲೂ ಈ ಅಭ್ಯಾಸವನ್ನು ಅನುಸರಿಸುತ್ತಿದ್ದಾರಂತೆ. ಪ್ರತಿದಿನ ಬೆಳಿಗ್ಗೆ ತುಂಬಾ ನೀರು ಕುಡಿಯುವುದರಿಂದ ನನಗೆ ಮೊಡವೆಗಳು ಬರಲಿಲ್ಲ ಎಂದು ಸ್ವತಃ ಜೂಹಿ ಚಾವ್ಲಾ ಹೇಳಿದ್ದಾರೆ.
ಪಪ್ಪಾಯಿ ನೆಚ್ಚಿನ ಹಣ್ಣು
ಇದಾದ ನಂತರ ಜೂಹಿ ಕೆಲವು ಹಣ್ಣುಗಳನ್ನು ತಿನ್ನುತ್ತಾಳೆ, ವಿಶೇಷವಾಗಿ ಪಪ್ಪಾಯಿ (papaya). ನಂತರ ಜೂಹಿ ಸೂರ್ಯನಿಗೆ ಎದುರಾಗಿ ಕುಳಿತು ಸ್ಟ್ರೆಚಿಂಗ್, ಯೋಗ ಮತ್ತು ಉಸಿರಾಟದ ವ್ಯಾಯಾಮಗಳನ್ನು ಮಾಡುತ್ತಾರೆ.
ಸರಳ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ
ಜೂಹಿಗೆ ಮಸಾಲೆಯುಕ್ತ ಆಹಾರ ಇಷ್ಟವಿಲ್ಲ, ಹಾಗಾಗಿ ಅವರು ಸಾಮಾನ್ಯವಾಗಿ ಬೇಯಿಸಿದ ತರಕಾರಿಗಳನ್ನು (boiled vegetables) ತಿನ್ನಲು ಇಷ್ಟಪಡುತ್ತಾರೆ. ಬಿಳಿ ಅನ್ನವನ್ನು ತಪ್ಪಿಸುತ್ತಾರೆ. ಅಲ್ಲದೇ ಅವರ ಆಹಾರದಲ್ಲಿ ಮೊಸರು ಇದ್ದೆ ಇರುತ್ತಂತೆ.
ಯೋಗ ಮತ್ತು ವ್ಯಾಯಾಮ
ಜೂಹಿ ಚಾವ್ಲಾ ಪ್ರತಿ ದಿನವೂ ಪೈಲೇಟ್ಸ್ ಮಾಡುತ್ತಾರೆ. ಇದಲ್ಲದೆ, ಸಮಯ ಸಿಕ್ಕಾಗಲೆಲ್ಲಾ ಅವರು ಯೋಗ ಮಾಡುತ್ತಾರೆ. ಮನೆಯಲ್ಲಿ ಪೂರ್ವಕ್ಕೆ ಎದುರಾಗಿರುವ ಕಿಟಕಿ ಅಥವಾ ಬಾಲ್ಕನಿ ಇದ್ದರೆ, ಬೆಳಿಗ್ಗೆ ಬೇಗನೆ ಎದ್ದೇಳಿ ಎಂದು ಜೂಹಿ ಹೇಳುತ್ತಾರೆ. ಸೂರ್ಯ ಉದಯಿಸುವುದನ್ನು ನೋಡಿ, ಆಕಾಶದ ಬಣ್ಣ ಬದಲಾಗುವುದನ್ನು ನೋಡಿ, ತಂಪಾದ ಗಾಳಿಯನ್ನು ಅನುಭವಿಸಿ ಎಂದು ಸಲಹೆ ಕೊಡ್ತಾರೆ ಜೂಹಿ.
ಮನಸ್ಸನ್ನು ಶಾಂತವಾಗಿಡುವುದು ಹೇಗೆ?
ಜೂಹಿ ತನ್ನ ಬೆಳಗಿನ ವ್ಯಾಯಾಮ ಮುಗಿಯುವವರೆಗೂ ಬೇರೆ ಯಾವುದಕ್ಕೂ ಗಮನ ಕೊಡದಿರಲು ಪ್ರಯತ್ನಿಸುತ್ತಾರೆ. ಬೆಳಗಿನ ಸಮಯ ಶಾಂತಿ ಮತ್ತು ಸಕಾರಾತ್ಮಕ ಚಿಂತನೆಗಾಗಿ (positive thinking) ಎಂದು ಹೇಳುವ ಜೂಗಿ ಮನಸ್ಸು ಶಾಂತವಾಗಿದ್ದಾಗ, ಗಮನ ಮತ್ತು ಶಕ್ತಿಯು ದಿನವಿಡೀ ಉಳಿಯುತ್ತದೆ.
ಜೂಹಿ ಚಾವ್ಲಾ ಅವರಿಂದ ನೀವು ಏನು ಕಲಿಯಬಹುದು?
ಜೂಹಿ ಚಾವ್ಲಾ ಅವರ ದಿನಚರಿಯಿಂದ ನೀವು ಬಹಳಷ್ಟು ವಿಷಯ ಕಲಿಯಬಹುದು, ಬೆಳಿಗ್ಗೆ ಬೇಗನೆ ಏಳುವುದು, ಸೂರ್ಯೋದಯವನ್ನು ನೋಡುವುದು, ಸಾಕಷ್ಟು ನೀರು ಕುಡಿಯುವುದು, ಹಣ್ಣುಗಳನ್ನು ತಿನ್ನುವುದು, ಯೋಗ ಮತ್ತು ಧ್ಯಾನ ಮಾಡುವುದು ಮತ್ತು ದಿನವನ್ನು ಶಾಂತಿಯುತವಾಗಿ ಪ್ರಾರಂಭಿಸುವುದು. ಹೀಗೆ ಮಾಡೋದ್ರಿಂದ ನೀವು ಆರೋಗ್ಯವಂತರು, ಸದೃಢರು, ಶಕ್ತಿಯುತರು ಮತ್ತು ಸಂತೋಷದಿಂದ ಇರಬಹುದು.