ಪುತ್ರನ ಹುಟ್ಟುಹಬ್ಬಕ್ಕೆ 100ಕ್ಕೂ ಹೆಚ್ಚು ಫೋಟೋ ಶೇರ್ ಮಾಡಿದ ನಟ; ಅರಿಕ್ ಅರ್ಜುನ್ ರಾಮ್‌ಪಾಲ್!
ನಟ, ನಿರ್ಮಾಪಕ, ಮಾಡಲ್ ಕಮ್ ಉದ್ಯಮಿ ಅರ್ಜುನ್ ರಾಮ್‌ಪಾಲ್ ಪುತ್ರ ಅರಿಕ್ ಇಂದು 1 ವರ್ಷಕ್ಕೆ ಕಾಲಿಟ್ಟ ಪ್ರಯುಕ್ತ ಇನ್‌ಸ್ಟಾಗ್ರಾಂನಲ್ಲಿ 100 ಹೆಚ್ಚು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಪುತ್ರನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ನಟ ಅರ್ಜುನ್ ರಾಮ್‌ಪಾಲ್‌ಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ.
ಪುತ್ರ 1 ವರ್ಷಕ್ಕೆ ಕಾಲಿಟ್ಟ ಪ್ರಯುಕ್ತ ಪೋಟೋ ರಿವೀಲ್ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಪುತ್ರನ ಹೆಸರು ಅರಿಕ್ ಅರ್ಜುನ್ ರಾಮ್‌ಪಾಲ್.
ಇದುವರೆಗೂ ಪುತ್ರನ ಮುಖವನ್ನು ಯಾರಿಗೂ ತೋರಿಸದೆ ಸಸ್ಪೆನ್ಸ್ ಆಗಿಟ್ಟಿದ್ದ ರಾಮ್‌ಪಾಲ್ 100ಕ್ಕೂ ಹೆಚ್ಚು ಫೋಟೋ ಶೇರ್ ಮಾಡಿದ್ದಾರೆ.
'ಎಲ್ಲರೂ ಲಿಟಲ್ ರಾಮ್‌ಪಾಲ್‌ನನ್ನು ಪರಿಚಯಿಸುತ್ತಿರುವೆ. ಹ್ಯಾಪಿ ಬರ್ತಡೇ ಬಾಯ್' ಎಂದು ಬರೆದುಕೊಂಡಿದ್ದಾರೆ.
ಪುತ್ರಿ ಮೈರಾ ಮತ್ತು ಮಹಿಕಾ ತಮ್ಮನಿಗೆ ವಿಶೇಷ ವಿಡಿಯೋವನ್ನು ಮಾಡಿದ್ದಾರೆ.
ಮೈರಾ ಮತ್ತು ಮಹಿಕಾ ಅರ್ಜುನ್ ಮಾಜಿ ಪತ್ನಿ ಜೆಸಿಯಾ ಮಕ್ಕಳು
ಗರ್ಲ್‌ಫ್ರೆಂಡ್ ಗೇಬ್ರಿಯೆಲಾ ಡಿಮೆಟ್ರಿಯೇಡ್ಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ರಾಮ್‌ಪಾಲ್ ಪುತ್ರಿಯರನ್ನು ನೋಡಿಕೊಳ್ಳುತ್ತಿದ್ದಾರೆ.
ಅರ್ಜುನ್ ಮತ್ತು ಗೇಬ್ರಿಯೆಲಾಗೆ ಜನಿಸಿದ ಪುತ್ರ ಅರಿಕ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚಿತ್ರರಂಗದ ಗಣ್ಯರು ಮತ್ತು ಅಪ್ತರು ಪುಟ್ಟ ಕಂದಮ್ಮನಿಗೆ ಶುಭಾಶಯಗಳು ತಿಳಿಸುತ್ತಿದ್ದಾರೆ.