ಪ್ರೆಗ್ನೆನ್ಸಿ ವಿಚಾರ ರಿವೀಲ್ ಮಾಡಿದ ನಟಿ Shweta Agarwal; ಫೋಟೋ ವೈರಲ್!
ಆದಿತ್ಯ ನಾರಾಯಣ್ ಮತ್ತು ಶ್ವೇತಾ ಅಗರ್ವಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ...
ಗಾಯಕ ಆದಿತ್ಯ ನಾರಾಯಣ್ ಮತ್ತು ನಟಿ ಶ್ವೇತಾ ಅಗರ್ವಾಲ್ ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋ ಹಂಚಿಕೊಳ್ಳುವ ಮೂಲಕ ಮಗುವಿನ ಆಗಮನದ ಬಗ್ಗೆ ರಿವೀಲ್ ಮಾಡಿದ್ದಾರೆ.
'ನಾನು ಮತ್ತು ಶ್ವೇತಾ ಜೀವನದ ಹೊಸ ಫೇಸ್‌ನಲ್ಲಿದ್ದೀವಿ. ನನಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಒಂದಿನ ನನಗೂ ತಂದೆ ಆಗಬೇಕು ಎಂಬ ಆಸೆ ಇತ್ತು,' ಎಂದು ಆದಿತ್ಯ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನಾನು ಯಾವ ಮಗುಗೂ ಕಮ್ಮಿ ಇಲ್ಲ. ಹೀಗಾಗಿ ಶ್ವೇತಾಗೆ ಡಬಲ್ ಕೆಲಸ ಆಗುತ್ತಿದೆ. ಕೆಲವು ದಿನಗಳ ಹಿಂದೆ ನಾನು ತುಂಟ ನಾಯಿ ಮರಿಯನ್ನು ಖರೀದಿಸಿದೆವು. ಕೆಲವು ವರ್ಷ ನಮ್ಮ ಮನೆ ಫುಲ್ ಹೈ ಎನರ್ಜಿಯಲ್ಲಿ ತುಂಬಿರುತ್ತದೆ,'
'ನಾನು ಶ್ವೇತಾ ಎಂಗೇಜ್ ಆಗಿರಲಿಲ್ಲ. ನನ್ನ 30ನೇ ಹುಟ್ಟು ಹಬ್ಬದ ದಿನ ನಾನು ಕನಸು ಕಂಡಿದ್ದೆ. ಅದು ಹೇಳಿದರೆ ನಿಮಗೆ ಜೋಕ್ ಅನಿಸುತ್ತದೆ,' ಎಂದು ತಮ್ಮ ಜೀವನದ ಕೆಲವು ಘಟನೆಗಳನ್ನು ಹೇಳಿ ಕೊಂಡಿದ್ದಾರೆ.
' ಶ್ವೇತಾ ನರ್ಸಿಂಗ್ ಹೋಮ್ ಬಾಗಿನ ಬಳಿ ನಿಂತಿರುತ್ತಾಳೆ. ಅಕೆಯ ಕೈಯಲ್ಲಿ ಮಗು ಇರುತ್ತದೆ. ಈ ಕನಸು ಈಗ ನನಸಾಗುತ್ತಿರುವುದುಕ್ಕೆ ಸಂತೋಷವಿದೆ.'
ಆದಿತ್ಯಾ ಮತ್ತು ಶ್ವೇತಾ ಡಿಸೆಂಬರ್ 1, 2020ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 'ಹಲವು ವರ್ಷಗಳಿಂದ ನಾನು ಕಷ್ಟ ಪಟ್ಟು ದುಡಿದಿರುವೆ. ಕಾರಣ ನನ್ನ ಹೆಂಡತಿಗೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು. ಈಗ ಗ್ರೇಟ್ ಫ್ಯಾಮಿಲಿಗೆ ಸಮಯ ಕೊಡಬೇಕು,' ಎಂದು ಆದಿತ್ಯಾ ಹೇಳಿದ್ದಾರೆ.