ಸೆಕ್ಸ್ ರಾಕೆಟ್‌ನಲ್ಲಿ ಸಿಕ್ಹಾಕಿಕೊಂಡು ಈ ನಟಿ ಜೈಲು ಸೇರಿದ್ಲು!
ಸಿನಿಮಾರಂಗದಲ್ಲಿ ನಟಿಯರು ಬೇರೆ ಬೇರೆ ಕಾರಣಗಳಿಂದಾಗಿ ಜನಪ್ರಿಯತೆ ಪಡೆಯುತ್ತಾರೆ. ಕೆಲವು ನಟಿಯರು ತಮ್ಮ ನಟನೆಯಿಂದ ಫೇಮಸ್ ಆದ್ರೆ, ಮತ್ತೆ ಕೆಲವರು ಸ್ಟೈಲ್, ಗ್ಲಾಮರ್, ಬೋಲ್ಡ್ ನೆಸ್ ನಿಂದ ಖ್ಯಾತಿ ಪಡೆದಿದ್ದಾರೆ. ಇನ್ನೂ ಕೆಲವು ನಟಿಮಣಿಯರು ಏನೇನೋ ಕೆಲ್ಸ ಮಾಡಿ ಜೈಲು ಸೇರಿ ಸುದ್ದಿಯಾಗಿದ್ದರು. ಅಂತಹ ನಟಿಯರು ಯಾರ್ಯಾರು ನೊಡೋಣ.
ಮಧುಬಾಲ (Madhubala)
70 -80ರದಶಕದ ಜನಪ್ರಿಯ ನಟಿ, ರೆಟ್ರೋ ಸುಂದರಿ ಮಧುಬಾಲ ಸಹ ಜೈಲು ಸೇರಿದ್ದರು. ಇವರು ಕಮಿಟ್‌ಮೆಂಟ್ ಪೂರ್ಣಗೊಳಿಸದ ಕಾರಣಕ್ಕಾಗಿ ಜೈಲು ಸೇರಿದ್ದರು. ಅಂದ್ರೆ ನಿರ್ಮಾಪಕರಿಂದ ನಟಿಸುವುದಾಗಿ ಹಣ ಪಡೆದುಕೊಂಡು, ನಂತ್ರ ಚಿತ್ರ ಮಾಡದ ಕಾರಣ ಪೋಲೀಸ್ ಕಸ್ಟಡಿಗೆ ಹೋಗಬೇಕಾಗಿತ್ತು.
ಶ್ವೇತಾ ಬಸು ಪ್ರಸಾದ್ (Shweta Basu Prasad)
ಮಕ್ಡಿ ಚಿತ್ರದಲ್ಲಿನ ಬಾಲ ಪ್ರತಿಭೆಯಾಗಿ ಜನಪ್ರಿಯತೆ ಪಡೆದಿದ್ದ ನಟಿ ಶ್ವೇತಾ ಬಸು ಪ್ರಸಾದ್, ಬಳಿಕ ಜನಪ್ರಿಯತೆ ಪಡೆದದ್ದೇ ಬೇರೆ ವಿಷಯಕ್ಕಾಗಿ. ಸೆಕ್ಸ್ ರಾಕೆಟ್ ನಲ್ಲಿ ಇವರ ಹೆಸರು ಕೇಳಿ ಬಂದು ಜೈಲು ಪಾಲಾಗಿದ್ದರು ನಟಿ. ರಿಲೀಸ್ ಆಗಿ ಬಂದ ಬಳಿಕ, ಮತ್ತೆ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿದ್ದರು.
ಮಮತಾ ಕುಲಕರ್ಣಿ (Mamata Kulkarni)
ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಮೆರೆದ ಸುಂದರಿ ನಟಿ ಮತ್ತು ಮಾಡೆಲ್ ಆಗಿರುವ ಮಮತಾ ಕುಲಕರ್ಣಿ ಡ್ರಗ್ ರಾಕೆಟ್ ನಲ್ಲಿ ಸಿಕ್ಕಿ ಬಿದ್ದು ಜೈಲು ಸೇರಿದ್ದರು. ಇವರು ಮದುವೆಯಾಗಿದ್ದು ಡ್ರಗ್ ಕಿಂಗ್ ಆಗಿದ್ದ ವಿಕ್ಕಿ ಗೋಸ್ವಾಮಿಯವರನ್ನು, ಬಳಿಕ 2000 ಕೋಟಿ ಡ್ರಗ್ ಹಗರಣದಲ್ಲಿ ಇವರು ಜೈಲು ಸೇರಿದ್ದರು.
ರಿಯಾ ಚಕ್ರವರ್ತಿ (Rhea Chakraborty)
ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು ರಿಯಾ ಚಕ್ರವರ್ತಿ. ಸುಶಾಂತ್ ಸಿಂಗ್ ರಾಜ್ ಪೂತ್ ಗರ್ಲ್ ಫ್ರೆಂಡ್ ಆಗಿ ಜನಪ್ರಿಯತೆ ಪಡೆದ ಈ ನಟಿ ನಂತರ ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ವಾಸ ಅನುಭವಿಸಿದ್ದರು.
ಸನಾ ಖಾನ್ (Sana Khan)
ಸದ್ಯ ನಟನೆಯಿಂದ ದೂರ ಉಳಿದಿರುವ ಸನಾ ಖಾನ್ ಹಿಂದೊಮ್ಮೆ ತಮ್ಮ ಬಾಯ್ ಫ್ರೆಂಡ್ ಜೊತೆ ಜೈಲು ಸೇರಿದ್ದರು. ಸನಾ ಖಾನ್ ಮತ್ತು ಆಕೆಯ ಗೆಳೆಯ ಮಹಿಳೆಯೊಬ್ಬರಿಗೆ ಹೆದರಿಸಿ, ಆಕೆಯ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಜೈಲು ಸೇರಿದ್ದರು.
ಸೋನಾಲಿ ಬೇಂದ್ರೆ (Sonali Bendre)
ಶೋ ಟೈಮ್ ಎನ್ನುವ ಮ್ಯಾಗಝಿನ್ ಕವರ್ ಪೇಜ್ ಗಾಗಿ ನಟಿ ಸೋನಾಲಿ ಬೇಂದ್ರೆ ಧರಿಸಿದ ಶಾರ್ಟ್ ಡ್ರೆಸ್ ನಲ್ಲಿ ಓಂ ಮತ್ತು ಓಂ ನಮಃ ಶಿವಾಯ ಎಂದು ಪ್ರಿಂಟ್ ಆಗಿತ್ತು.. ಜನರ ಧಾರ್ಮಿಕ ಭಾವನೆಗೆ ಧಕ್ಕೆ ನೀಡಿದ ಹಿನ್ನೆಲೆಯಲ್ಲಿ ನಟಿಯ ವಿರುದ್ಧ ಕೇಸ್ ದಾಖಲಾಗಿ, ಜೈಲು ಸೇರಿದ್ದರು.