ಮದ್ವೆ ಆದ್ಮೇಲೆ ಸಿನಿ ಇಂಡಸ್ಟ್ರಿ ಸಹವಾಸವೇ ಸಾಕೆಂದು ಓಡ್ಹೋಗ್ಬಿಟ್ರಾ ಈ ನಟಿಯರು?
ನಮ್ಮ ಸಿನಿಮಾ ಇಂಡಷ್ಟ್ರಿಯಲ್ಲಿ ನಟರು ಮದುವೆಯಾದ ಬಳಿಕವೂ ಸಿನಿಮಾಗಳಲ್ಲಿ ನಟಿಸೋದನ್ನು ಮುಂದುವರೆಸ್ತಾರೆ. ಮದುವೆಯಾಯ್ತು ಅನ್ನೋ ಕಾರಣಕ್ಕೆ ಸಿನಿಮಾಕ್ಕೆ ಬೈ ಬೈ ಅಂದೋರೆ ಇಲ್ಲ. ಆದ್ರೆ ನಟಿಯರ ಕಥೆ ಮಾತ್ರ ಬೇರೆ, ಕೆಲವು ಟಾಪ್ ನಟಿಯರೂ ಸಹ ಮದುವೆಯಾದ ಕೂಡ್ಲೇ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ, ಪೂರ್ತಿ ಫ್ಯಾಮಿಲಿ ವಿಮೆನ್ ಆಗಿದ್ದಾರೆ. ಯಾವೆಲ್ಲಾ ನಟಿಯರು ಈ ಲಿಸ್ಟ್ ನಲ್ಲಿದ್ದಾರೆ ನೋಡೋಣ.

ಕರೀಷ್ಮಾ ಕಪೂರ್ (Karishma Kapoor)
ಕರಿಷ್ಮಾ ಕಪೂರ್ ಒಂದು ಕಾಲದಲ್ಲಿ ಬಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರು. ಆದ್ರೆ ಇವರು ಪೀಕ್ ನಲ್ಲಿದ್ದಾಗ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದಾದ ಬಳಿಕ ಸಂಸಾರಕ್ಕೆ ಸಮಯ ನೀಡುವ ಸಲುವಾಗಿ ಸಿನಿಮಾದಿಂದ ದೂರ ಉಳಿದರು.
ಭಾಗ್ಯಶ್ರೀ (Bhagyashree)
ಭಾಗ್ಯಶ್ರೀ ಮೊದಲ ಚಿತ್ರ ಮೈನೇ ಪ್ಯಾರ್ ಕಿಯಾ. ಈ ಸಿನಿಮಾದಲ್ಲಿ ಇವರು ಸಲ್ಮಾನ್ ಖಾನ್ ಗೆ ನಾಯಕಿಯಾಗಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ಆಫರ್ ಗಳ ಸುರಿಮಳೆ ಸುರಿಯುತ್ತಿರುವಾಗಲೇ ಮದುವೆಯಾದ ಭಾಗ್ಯಶ್ರೀ, ಮತ್ತೆ ಸಂಸಾರದಲ್ಲೇ ಬ್ಯುಸಿಯಾದ್ರು.
ಸೋನಮ್ ಕಪೂರ್ (Sonam Kapoor)
ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ಸೋನಲ್ ಕಪೂರ್, ಮದುವೆಯಾದ ಬಳಿಕ ಸಿನಿಮಾ ಇಂಡಷ್ಟ್ರಿಯಿಂದ ಸಂಪೂರ್ಣವಾಗಿ ದೂರ ಉಳಿದರು. ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿರುವ ನಟಿ ಮತ್ತೆ ಯಾವಾಗ ಸಿನಿಮಾಕ್ಕೆ ಬರಲಿದ್ದಾರೆ ಎಂದು ಜನ ಕಾಯುತ್ತಿದ್ದಾರೆ.
ಸ್ವರಾ ಭಾಸ್ಕರ್ (Swara Bhaskar)
ತಮ್ಮ ಕಾಂಟ್ರೋವರ್ಸಿ ಸ್ಟೇಟ್‌ಮೆಂಟ್ಸ್ ಮೂಲಕವೇ ಸುದ್ದಿಯಾಗುತ್ತಿರುವ ನಟಿ ಸ್ವರಾ ಭಾಸ್ಕರ್. ಸಿನಿಮಾರಂಗದ ಭರವಸೆಯ ನಟಿಯಾಗಿ ರೂಪುಗೊಳ್ಳುತ್ತಿದ್ದರು, ಅಷ್ಟರಲ್ಲೇ ಮದುವೆಯಾಗಿ, ಸದ್ಯ ಮಗುವಾಗಿ ಅದರಲ್ಲಿ ಬ್ಯುಸಿಯಾಗಿದ್ದಾರೆ.
ಇಲಿಯಾನ ಡಿಕ್ರೂಸ್ (Ileana d'cruz)
ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಇಲಿಯಾನ ಡಿಕ್ರೂಸ್ ಬಳಿಕ ಸಿನಿಮಾದಿಂದ ಕಾಣೆಯಾದರು. ಬಾಯ್ ಫ್ರೆಂಡ್ ಜೊತೆ ಕ್ವಾಲಿಟಿ ಟೈಮ್ ಕಳೆಯುತ್ತಿದ್ದ ನಟಿ, ಇದೀಗ ಒಂದು ಮಗುವಿನ ತಾಯಿಯಾಗಿ ಸಂತೋಷದಲ್ಲಿದ್ದಾರೆ.
ಬಿಪಾಶಾ ಬಸು (Bipasha Basu)
ಬಿಪಾಶಾ ಬಸು ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ ನಟಿ, ಜೊತೆಗೆ ತಮ್ಮ ಬೋಲ್ಡ್ ಅವತಾರದ ಮೂಲಕವೂ ನಟಿ ಹೆಚ್ಚು ಸುದ್ದಿಯಲ್ಲಿದ್ದರು. ಆದರೆ ಮದುವೆಯಾದ ಬಳಿಕ ನಟಿ ಯಾವುದೇ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಸದ್ಯ ಗಂಡ, ಮಗಳೊಂದಿಗೆ ಸಂಸಾರ ಸುಖವನ್ನು ಎಂಜಾಯ್ ಮಾಡ್ತಿದ್ದಾರೆ.
ಆಸೀನ್ (Asin)
ಮುದ್ದು ಮುದ್ದು ಮುಖ ಮತ್ತು ತನ್ನ ಮುದ್ದಾದ ನಟನೆ ಮೂಲಕ ದಕ್ಷಿಣ ಭಾರತ ಮತ್ತು ಬಾಲಿವುಡ್ ಸಿನಿಮಾ ರಂಗದಲ್ಲಿ ಛಾಪು ಮೂಡಿಸಿದ್ದ ನಟಿ ಆಸೀನ್ ಮದುವೆಯಾದ ಬಳಿಕ ಸಿನಿಮಾ ರಂಗಕ್ಕೆ ಸಂಪೂರ್ಣವಾಗಿ ಗುಡ್ ಬೈ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.