Diwali 2021: ಮಲೈಕಾಗೆ ಸ್ಟ್ರಾಂಗ್ & ಹ್ಯಾಡ್ಸಂ ಬಾಡಿಗಾರ್ಡ್
- Diwali 2021: ಮಲೈಕಾಗೆ ಯಂಗ್ & ಹ್ಯಾಂಡ್ಸಂ ಬಾಡಿಗಾರ್ಡ್(Malaika Arora
- ಮಲೈಕಾ ಅರೋರಾ ಇವರ ಜೊತೆಗಿದ್ರೆ ಸೇಫ್
ಮುಂಬೈನಲ್ಲಿ(Mumbai) ಅನಿಲ್ ಕಪೂರ್(Anil Kapoor) ಅವರ ದೀಪಾವಳಿ ಪಾರ್ಟಿಯಲ್ಲಿ (Diwali Bash)ಬಾಲಿವುಡ್ ನಟ ಅರ್ಜುನ್ ಕಪೂರ್(Arjun Kapoor) ಮತ್ತು ಅವರ ಲೇಡಿ ಲವ್ ಮಲೈಕಾ ಅರೋರಾ(Malaika Arora) ಅವರು ಜೋಡಿಯಾಗಿ ಮಿಂಚಿದ್ದಾರೆ. ಇಬ್ಬರೂ ಪರ್ಫೆಕ್ಟ್ ಆಗಿ ಕಾಣುತ್ತಿದ್ದರು, ಒಬ್ಬರಿಗೊಬ್ಬರು ಕೈ-ಕೈ ಹಿಡಿದುಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಬಾಲಿವುಡ್ ಜೋಡಿ ಭಾರತೀಯ ಉಡುಗೆಯಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು. ದೀಪಾವಳಿಗೆ ಅಪ್ಪಟ ಪಿಂಕ್ ಬಣ್ಣದ ಸೀರೆಯಲ್ಲಿ ಮಿಂಚಿದ ಮಲೈಕಾಗೆ ಸೂಪರ್ & ಹ್ಯಾಂಡ್ಸಂ ಬಾಡಿಗಾರ್ಡ್ ಇದ್ದಾರೆ.
ಪ್ರತಿಬಾರಿ ಮಲೈಕಾ ಜೊತೆ ಹೊರಗೆ ಬಂದಾಗಲೂ ಅರ್ಜುನ್ ಸಿಕ್ಕಾಪಟ್ಟೆ ಪ್ರೊಟೆಕ್ಟಿವ್ ಆಗಿರುತ್ತಾರೆ. ಗೆಳತಿಯ ಕೈಹಿಡಿದುಕೊಂಡೇ ನಡೆಯುತ್ತಾರೆ
ಕ್ಯಾಮೆರಾಗೆ ಪೋಸ್ ಕೊಡುವುದಿರಲಿ, ಕಾರ್ ಹತ್ತುವುದಿರಲಿ, ಪಾಪ್ಪರಾಜಿಗಳ ಮಧ್ಯೆ ನಡೆದು ಬರುವಾಗಲೂ ಗೆಳತಿಯನ್ನ ಬಳಸಿ ಹಿಡಿದು ಕೇರ್ ಮಾಡುತ್ತಾರೆ ಅರ್ಜುನ್
ಇದು ಕಂಡು ಬಂದಿದ್ದು ದೀಪಾವಳಿ ಪಾರ್ಟಿ ಸಮಯದಲ್ಲಿ ಮಾತ್ರವಲ್ಲ. ಸಾಮಾನ್ಯ ದಿನಗಳಲ್ಲಿಯೂ ಅರ್ಜುನ್ ವ್ಯವಹರಿಸುವುದು ಹೀಗೆಯೇ. ಹಾಗಾಗಿಯೇ ಅರ್ಜುನ್ ಮಲೈಕಾಗೆ ಬಾಯ್ಫ್ರೆಂಡ್ ಮಾತ್ರವಲ್ಲ, ಬಾಡಿಗಾರ್ಡ್ ಕೂಡ
ಪಾರ್ಟಿಯಿಂದ ಹೊರಬಂದ ಫೋಟೋಗಳಲ್ಲಿ ದೀಪಾವಳಿ ಆಚರಣೆಗಾಗಿ ಹಳದಿ ಬ್ಲೌಸ್ಗೆ ರಿಚ್ ರೆಡ್ ರೇಷ್ಮೆ ಸೀರೆಯಲ್ಲಿ ಮಲೈಕಾ ಮಿಂಚಿರೋದನ್ನು ಕಾಣಬಹುದು.
ಹೇರ್ ನೀಟಾಗಿ ಬನ್ ಮಾಡಿ ಹೂ ಮುಡಿದಿದ್ದ ನಟಿ ಡೈಮಂಡ್ ಚೋಕರ್ ನೆಕ್ಲೇಸ್ ಅನ್ನು ಸಹ ಧರಿಸಿದ್ದರು. ಸಾಂಪ್ರದಾಯಿಕ ಕಪ್ಪು ಕುರ್ತಾದಲ್ಲಿ ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದಾರೆ.
ಮಲೈಕಾ ತನ್ನ ಕುಟುಂಬದ ಜೊತೆಗಿನ ದೀಪಾವಳಿ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಅರ್ಜುನ್ ತಮ್ಮ ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್ ಮೂಲಕ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಮಲೈಕಾ ಮತ್ತು ಅರ್ಜುನ್ ಅವರು ಒಟ್ಟಿಗೆ ಭಾಗವಹಿಸುವ ಯಾವುದೇ ಕಾರ್ಯಕ್ರಮಗಳು ಅಥವಾ ಪಾರ್ಟಿಗಳ ಸಮಯದಲ್ಲಿ ಎಲ್ಲಾ ಗಮನ ಮತ್ತು ಕ್ಯಾಮರಾ ಯಾವಾಗಲೂ ಅವರ ಮೇಲೆ ಇರುತ್ತದೆ. ದೀಪಾವಳಿ ಪಾರ್ಟಿಯಲ್ಲಿ ಮಲೈಕಾ ಹಾಟ್ ಪಿಂಕ್ ಸ್ಯಾಟಿನ್ ಸೀರೆಗೆ ಹಸಿರು ಪಟ್ಟಿಯ ಬ್ಲೌಸ್ ಧರಿಸಿದ್ದರು.