- Home
- Entertainment
- Cine World
- ನನ್ನನ್ನು ಮುಟ್ಟಬೇಡ; ರೇಪ್ ಸೀನ್ ಮಾಡಲು ಬಂದ ನಟನೆ ಮೇಲೆ ಕಿರುಚಿದ ನಟಿ ಮಾಧುರಿ ದೀಕ್ಷಿತ್
ನನ್ನನ್ನು ಮುಟ್ಟಬೇಡ; ರೇಪ್ ಸೀನ್ ಮಾಡಲು ಬಂದ ನಟನೆ ಮೇಲೆ ಕಿರುಚಿದ ನಟಿ ಮಾಧುರಿ ದೀಕ್ಷಿತ್
ಅಬ್ಬಬ್ಬಾ ಖಳನಾಯಕ ರಂಜೀತ್ ನಟನೆ ನೋಡಿ ಗಾಬರಿಗೊಂಡ ಮಾಧುರಿ ದೀಕ್ಷಿತ್. ಮುಟ್ಟಬೇಡಿ ಎಂದು ಕಿರುಚಿದ್ದು ಯಾಕೆ?

1989ರಲ್ಲಿ ಮಾಧುರಿ ದೀಕ್ಷಿತ್ ನಟನೆಯ ಪ್ರೇಮ್ ಪ್ರತಿಜ್ಞಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಖಳನಾಯಕನಾಗಿ ರಂಜೀತ್ ಮಿಂಚಿದ್ದಲ್ಲದೆ ಸಾಕಷ್ಟು ಜನಪ್ರಿಯತೆ ಪಡೆದರು.
ಈ ಸಿನಿಮಾದಲ್ಲಿ ಹೇಗೆ ಬಲವಂತವಾಗಿ ರೇಪ್ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿತ್ತು ಎಂದು ಮಾಧುರಿ ದೀಕ್ಷಿತ್ ರಿವೀಲ್ ಮಾಡಿದ್ದಾರೆ.
ರೇಪ್ ದೃಶ್ಯವನ್ನು ತಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದು ಚಿತ್ರದ ನಿರ್ದೇಶಕರ ಬಳಿ ಹೇಳಿಕೊಂಡಾಗ ಸಾಧ್ಯವೇ ಇಲ್ಲ ನೀವು ಮಾಡಲೇ ಬೇಕು ಎಂದು ಬಲವಂತ ಮಾಡಿದರಂತೆ.
ಈ ಸೀನ್ ಮಾಡಲು ಇಷ್ಟನೇ ಇರಲಿಲ್ಲ ಮೈಯೆಲ್ಲಾ ನಡುಗುತ್ತಿತ್ತು. ಮೈಯಲ್ಲಾ ಬೆವರುತ್ತಿತ್ತು ಆದರೆ ಮಾಡದೆ ವಿಧಿಯಿರಲಿಲ್ಲ ಏಕೆಂದರೆ ನಿರ್ದೇಶಕರು ಬಲವಂತ ಮಾಡುತ್ತಿದ್ದರು.
ರಂಜೀತ್ ಮಾಧುರಿಯವರನ್ನು ಈ ಸೀನ್ ಮಾಡುವಾಗ ನಡುಗಿಸಿಬಿಟ್ಟಿದ್ದರಂತೆ. ಈ ಸೀನ್ ನಂತರವೂ ನನ್ನನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು ಪಾತ್ರದಿಂದ ಹೊರ ಬಂದಿರಲಿಲ್ಲ ಎಂದಿದ್ದಾರೆ.
ಎಷ್ಟೇ ಹೇಳಿದರೂ ಬಲವಾಗಿ ಹಿಡಿದುಕೊಂಡಿದ್ದರು. ಇದರಿಂದ ನಾನು ಕೋಪಗೊಂಡಿದ್ದೆ. ಎಲ್ಲರ ಮುಂದೆ ಜೋರಾಗಿ ಕೂಗಿದೆ. ನನ್ನನ್ನು ಮುಟ್ಟಬೇಡ ಎಂದು ಕಿರುಚಿದೆ ಎಂದು ಆ ದಿನಗಳ ನೆನಪಿಸಿಕೊಂಡಿದ್ದಾರೆ ಮಾಧುರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.