ಕಪ್ಪು ಈಜುಡುಗೆಯಲ್ಲಿ Karisma Kapoor; ನಟಿಯ ಪರ್ಫೇಕ್ಟ್ ಬೀಚ್ ಬಾಡಿ ಫೋಟೋ ವೈರಲ್
90 ದಶಕದಲ್ಲಿ ಬಾಲಿವುಡ್‌ವನ್ನು ಆಳಿದ ನಟಿಯರಲ್ಲಿ ಕರಿಷ್ಮಾ ಕಪೂರ್ (Karisma Kapoor) ಪ್ರಮುಖರು. ಇವರು 1991ರಲ್ಲಿ 'ಪ್ರೇಮ್ ಖೈದಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇವರು ಬಾಲಿವುಡ್‌ನಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದರು. 2000 ರ ದಶಕದ ಆರಂಭದಲ್ಲಿ, ಇವರು ಚಲನಚಿತ್ರಗಳಲ್ಲಿ ತುಂಬಾ ಸಕ್ರಿಯರಾಗಿದ್ದರು. ಈಗ ಕರಿಷ್ಮಾ ಕಪೂರ್ ಮತ್ತೊಮ್ಮ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇವರು ಸೋಶಿಯಲ್ ಮಿಡೀಯಾದಲ್ಲಿ ಹೊರಬಿಟ್ಟಿರುವ ಹಾಟ್ ಫೋಟೋಗಳು.
ಇತ್ತೀಚಿಗೆ ಪೋಸ್ಟ್ ಮಾಡಿರುವ ಫೋಟೋಗಳಲ್ಲಿ 47 ವರ್ಷದ ಕರಿಷ್ಮಾ ಕಪೂರ್ ಕಪ್ಪು ಬಿಕಿನಿಯಲ್ಲಿ ತನ್ನ ಬೀಚ್ ಬಾಡಿವನ್ನು ಶೋ ಆಫ್ ಮಾಡಿದ್ದಾರೆ. ಇದು ಇವರ ಥ್ರೋಬ್ಯಾಕ್ ಫೋಟೋವಾಗಿದೆ.
ಕರಿಷ್ಮಾ ಕಪೂರ್ ಅವರ ಬೀಚ್ ಹಾಲಿಡೇಯ ಕಪ್ಪು ಸ್ವೀಮ್‌ಸೂಟ್ ಫೋಟೋಗೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ ಕೂಡ.
90ರ ದಶಕದಲ್ಲಿ ಕರಿಷ್ಮಾ ಕಪೂರ್ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ವಾಸ್ತವವಾಗಿ, ಇಂದಿಗೂ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು, ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ
ಆದರೆ ಕರಿಷ್ಮಾ ಕಪೂರ್ ಶೇರ್ ಮಾಡುವ ಫೋಟೋಗಳು ಸಾಮಾನ್ಯವಾಗಿ ಅವರ ಸಹೋದರಿ ಕರೀನಾ ಕಪೂರ್ ಖಾನ್ ಅವರನ್ನು ಒಳಗೊಂಡಿರುತ್ತವೆ. ಈಗ ಅವರು ಕಪ್ಪು ಬಿಕಿನಿಯಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಕರಿಷ್ಮಾ ಕಪೂರ್ ಅವರು ಹಂಚಿಕೊಂಡ ಈ ಫ್ಲ್ಯಾಷ್‌ಬ್ಯಾಕ್ ಫೋಟೋದಲ್ಲಿ ನಟಿ ಪೂಲ್‌ನಲ್ಲಿ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಕ್ಯಾಮೆರಾಗೆ ಬೆನ್ನು ಹಾಕಿ, ಕಪ್ಪು ಬಿಕಿನಿಯನ್ನು ಧರಿಸಿ ತಮ್ಮ ಪರ್ಫೇಕ್ಟ್ ಬಾಡಿಯನ್ನು ತೋರಿಸಿದ್ದಾರೆ.
ಫೋಟೊವನ್ನು ಹಂಚಿಕೊಂಡ ಕರಿಷ್ಮಾ, 'Daydreaming.. #birthdaymonth #memoriesof2022' ಎಂದು ಕ್ಯಾಪ್ಷನ್ ಬರೆದಿದ್ದಾರೆ. ನಟಿಯ ಇತ್ತೀಚಿನ ನಿರ್ಮಾಣವು ALTBalaji ಅವರ ಆನ್‌ಲೈನ್ ಸರಣಿ 'ಮೆಂಟಲ್‌ಹುಡ್ ಆಗಿದೆ ಮತ್ತು ' ಅಭಿನಯ್ ಡಿಯೋ ನಿರ್ದೇಶನದ ಬ್ರೌನ್ ನಲ್ಲಿ ಕರಿಷ್ಮಾ ಶೀಘ್ರದಲ್ಲೇ ಅವರು ನಟಿಸಲಿದ್ದಾರೆ.
2003 ರಲ್ಲಿ, ಅವರು ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ನಂತರ ವಿರಾಮ ತೆಗೆದುಕೊಂಡರು, ಮತ್ತೆ ಸಿನಿಮಾಕ್ಕೆ ಮರಳಿದರು. ಕರಿಷ್ಮಾ ಕಪೂರ್ ಕೊನೆದಾಗಿ 2012 ರ ಚಲನಚಿತ್ರ ಡೇಂಜರಸ್ ಇಷ್ಕ್ ನಲ್ಲಿ ಕಾಣಿಸಿಕೊಂಡರು. ನಂತರ ಅವರು ಬಾಂಬೆ ಟಾಕೀಸ್ ಮತ್ತು ಝೀರೋದಂತಹ ಚಲನಚಿತ್ರಗಳಲ್ಲಿ ಪೋಷಕ ಭಾಗಗಳಲ್ಲಿ ಕಾಣಿಸಿಕೊಂಡರು.