- Home
- Entertainment
- Cine World
- ಬ್ಲ್ಯಾಕ್ ಸ್ಟ್ರಾಪ್‌ಲೆಸ್ ಟಾಪ್‌ನಲ್ಲಿ Janhvi: ಪೋಸ್ ಕೊಡೋದ್ರಲ್ಲಿ Sunny Leoneರನ್ನೇ ಮೀರಿಸ್ತೀರಾ ಅನ್ನೋದಾ!
ಬ್ಲ್ಯಾಕ್ ಸ್ಟ್ರಾಪ್‌ಲೆಸ್ ಟಾಪ್‌ನಲ್ಲಿ Janhvi: ಪೋಸ್ ಕೊಡೋದ್ರಲ್ಲಿ Sunny Leoneರನ್ನೇ ಮೀರಿಸ್ತೀರಾ ಅನ್ನೋದಾ!
ಬಾಲಿವುಡ್ ನಟಿ ಜಾನ್ವಿ ಕಪೂರ್ ಸಾಲು ಸಾಲು ಫೋಟೋ ಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಟಾಪ್ ಸುದ್ದಿಯಲ್ಲಿದ್ದಾರೆ ಸದ್ಯ ಬ್ಲ್ಯಾಕ್ ಸ್ಟ್ರಾಪ್‌ಲೆಸ್ ಟಾಪ್ ಧರಿಸಿ ಕ್ಯಾಮರಾಗೆ ಫೋಸ್ ನೀಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಪ್ರತಿಷ್ಠಿತ ಎಲ್ಲೆ ಬ್ಯೂಟಿ ಅವಾರ್ಡ್ಸ್ 2023ರಲ್ಲಿ ಜಾನ್ವಿ ಕಪೂರ್ ಧರಿಸಿದ್ದ ಡ್ರೆಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿತ್ತು. ತೊಡೆ ಕಾಣಿಸೋ ಸೀಳು ಬಟ್ಟೆ ಧರಿಸಿಕೊಂಡು, ಕೈಯಿಂದ ತೊಡೆ ಯಾಕೆ ಮುಚ್ಕೊಂಡ್ರಿ ಎಂದು ನೆಟ್ಟಿಗರು ಕಾಲೆಳೆದಿದ್ದರು.
ಇದೀಗ ನಟಿ ಜಾನ್ವಿ ಕಪೂರ್ ಅವರು ಸೀರೆಯಂತಹಾ ಕಟೌಟ್ ಬ್ಲ್ಯಾಕ್ ಸ್ಟ್ರಾಪ್‌ಲೆಸ್ ಟಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ಗೆ ನೆರಿಗೆ ಇದೆ, ಆದರೆ ಸೆರಗೇ ಇಲ್ಲ. ಫೋಟೋಗಳು ಇದೀಗ ವೈರಲ್ ಆಗಿವೆ.
ಜಾನ್ವಿ ಕಪೂರ್ ಬ್ಲ್ಯಾಕ್ ಸ್ಟ್ರಾಪ್‌ಲೆಸ್ ಟಾಪ್ ಧರಿಸಿರುವ ಫೋಟೋಗಳನ್ನು ನೋಡಿದ ನೆಟ್ಟಿಗರು ಇದು ಡ್ರೆಸ್ ಅಥವಾ ಸೀರೆಯಾ ಎಂದು ಗೊಂದಲಕ್ಕೀಡಾಗಿದ್ದಾರೆ.
ಜಾನ್ವಿ ಕಪೂರ್ ಅವರು ಆಕರ್ಷಕವಾದ ಬ್ಲ್ಯಾಕ್ ಕಟೌಟ್ ಡ್ರೆಸ್ ಧರಿಸಿದ್ದು ಅವರ ಲುಕ್ ಆಕರ್ಷಕವಾಗಿದೆ. ಸ್ಮೋಕಿಯಾಗಿ ಕಂಡುಬಂದ ಜಾನ್ವಿ ಅಂದವನ್ನು ಫ್ಯಾನ್ಸ್ ಬಾಯ್ತುಂಬ ಹೊಗಳಿದ್ದು, ಪೋಸ್ ಕೊಡೋದ್ರಲ್ಲಿ ಸನ್ನಿ ಲಿಯೋನ್ ಅವರನ್ನೇ ಮೀರಿಸ್ತೀರಾ ಎಂದಿದ್ದಾರೆ.
ಅಮಿತ್ ಅಗರ್‌ವಾಲ್ ವಿನ್ಯಾಸಗೊಳಿಸಿದ ಕಟೌಟ್ ಬ್ಲ್ಯಾಕ್ ಸ್ಟ್ರಾಪ್‌ಲೆಸ್ ಟಾಪ್‌ನಲ್ಲಿ ಜಾನ್ವಿ ಕಪೂರ್ ಎಲ್ಲರ ಗಮನ ಸೆಳೆದಿದ್ದು, ಲ್ಯಾಕ್ಮೆ ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಕಂಗೊಳಿಸಿದ್ದಾರೆ.
ಜಾನ್ವಿ ಕಪೂರ್ ಅವರು ಇನ್ನು ದೇವರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೂನಿಯರ್ ಎನ್ಟಿಆರ್ ಅವರ ಬಹುನಿರೀಕ್ಷಿತ ಚಿತ್ರದ ಮೂಲಕ ಜಾನ್ವಿ ಸೌತ್ಗೆ ಎಂಟ್ರಿ ಕೊಡುತ್ತಿದ್ದಾರೆ.
ಜಾನ್ವಿ ಅವರು ತಮ್ಮಿಷ್ಟದ ಬಟ್ಟೆ ಧರಿಸುತ್ತಾರೆ. ಅವರು ಬೇರೆಯವರ ಅಭಿಪ್ರಾಯಗಳಿಗೆ ಎಂದಿಗೂ ಗಮನ ಕೊಟ್ಟಿಲ್ಲ. ಸದ್ಯ ಶಿಖರ್ ಪಹಾರಿಯಾ ಜೊತೆ ಜಾನ್ವಿ ಕಪೂರ್ ಸಾಕಷ್ಟು ಬಾರಿ ಸುತ್ತಾಡಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗುತ್ತಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.