ಬಾಲಿವುಡ್ ತಾರೆಯರ ಮದುವೆ ಭಾರೀ ಲೆಹೆಂಗಾದ ಬೆಲೆ ಕೇಳಿದರೆ ತೆಲೆ ತಿರುಗುತ್ತೆ!
ಬಾಲಿವುಡ್ ನಟಿಯರು ತಮ್ಮ ಪರ್ಫೇಕ್ಟ್ ಮದುವೆಯ ಬಟ್ಟೆಗಳಿಗೆ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲು ಇಷ್ಟಪಡುತ್ತಾರೆ. ಬಾಲಿವುಡ್‌ನ ಪ್ರಮುಖ ನಟಿಯರು ತಮ್ಮ ವಿಶೇಷ ದಿನಕ್ಕಾಗಿ ಭಾರೀ ಉಡುಪನ್ನು ಆಯ್ದ ಕೊಂಡಿದ್ದಾರೆ. ಇವರ ಮದುವೆಯ ಲೆಹೆಂಗಾಗಳ ಬೆಲೆ ಗೊತ್ತಾದ್ರೆ ಶಾಕ್ ಆಗುವುದು ಗ್ಯಾರಂಟಿ.

ದೀಪಿಕಾ ಪಡುಕೋಣೆ:
ದೀಪಿಕಾ ಪಡುಕೋಣೆ ಇಟಲಿಯಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಟ ರಣವೀರ್ ಸಿಂಗ್ ಅವರೊಂದಿಗೆ ವಿವಾಹವಾದರು. ನಟಿ ಕಡುಗೆಂಪು ಬಣ್ಣದ ಸಬ್ಯಸಾಚಿ ಲೆಹೆಂಗಾವನ್ನು ಧರಿಸಿದ್ದರು ಮತ್ತು ಸೌಭಾಗ್ಯವತಿ ಭಾವ ಎಂದು ಕೆತ್ತಿದ ಮುಸುಕನ್ನು ಧರಿಸಿದ್ದರು. ಪಾಪ್ಕ್ಸೋ ಪ್ರಕಾರ, ದೀಪಿಕಾ ಅವರ ಉಡುಪಿನ ಬೆಲೆ ರೂ. 12 ಲಕ್ಷ.
ಅನುಷ್ಕಾ ಶರ್ಮಾ:
ಅನುಷ್ಕಾ ಶರ್ಮಾ ಅವರ ಮದುವೆಯ ಭಾರೀ ಲೆಹೆಂಗಾವನ್ನು ಪೂರ್ಣಗೊಳಿಸಲು 67 ಜನ ಕೆಲಸಗಾರರು 32 ದಿನಗಳನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ. ನಟಿ ಅನುಷ್ಕಾ ಶರ್ಮಾ ಅವರು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಇಟಲಿಯ ಟಸ್ಕನಿಯಲ್ಲಿ ವಿವಾಹವಾದರು. ಅವರ ಸಬ್ಯಸಾಚಿ ಲೆಹೆಂಗಾ ಬೆಲೆ ರೂ. 32 ಲಕ್ಷ ಎಂದು ವರದಿಯಾಗಿದೆ.
ಬಿಪಾಶಾ ಬಸು ಗ್ರೋವರ್:
ನಟಿ ಬಿಪಾಶಾ ಬಸು ಗ್ರೋವರ್ ಕರಣ್ ಸಿಂಗ್ ಗ್ರೋವರ್ ಅವರನ್ನು ವಿವಾಹವಾದರು ಮತ್ತು ಕೆಂಪು ಮತ್ತು ಗೋಲ್ಡನ್ ಬಣ್ಣದ ಸಬ್ಯಸಾಚಿ ಸೀರೆಯನ್ನು ಧರಿಸಿ ಎಲ್ಲರ ತನ್ನ ಬಾಂಗ್ ಲುಕ್‌ನಿಂದ ಹೃದಯ ಗೆದ್ದರು. ಬಾಲಿವುಡ್ ಶಾದಿ ಪ್ರಕಾರ, ಆಕೆಯ ಮದುವೆಯ ಉಡುಪಿನ ಬೆಲೆ ರೂ. 4 ಲಕ್ಷ.
ಪರಿಣಿತಿ ಚೋಪ್ರಾ:
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ರಾಜಸ್ಥಾನದಲ್ಲಿ ಎಎಪಿ ಸದಸ್ಯ ರಾಘವ್ ಚಡ್ಡಾ ಅವರನ್ನು ವಿವಾಹವಾದರು. ನಟಿ ಮನೀಷ್ ಮಲ್ಹೋತ್ರಾ ಅವರ ವಿನ್ಯಾಸದ ಲೆಹೆಂಗಾವನ್ನು ತಮ್ಮ ವಿಶೇಷ ದಿನದಂದು ನಟಿ ಧರಿಸಿದ್ದರು, ಇದು ಪೂರ್ಣಗೊಳಿಸಲು 2500 ಗಂಟೆಗಳನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಅವರು ದೇವನಾಗರಿ ಲಿಪಿಯಲ್ಲಿ ರಾಘವ್ ಹೆಸರನ್ನು ಬರೆದ ಮುಸುಕನ್ನು ಧರಿಸಿದ್ದರು.
ಸೋನಂ ಕಪೂರ್ ಅಹುಜಾ:
ಸೋನಂ ಕಪೂರ್ ಅವರು ತಮ್ಮ ಬಹುಕಾಲದ ಗೆಳೆಯ ಆನಂದ್ ಅಹುಜಾ ಅವರನ್ನು ವಿವಾಹವಾದರು ಮತ್ತು ಸೋನಂ ತಮ್ಮ ಮದುವೆಗೆ ನಿಜವಾದ ಚಿನ್ನ-ಬೆಳ್ಳಿ ದಾರದ ಲೆಹೆಂಗಾವನ್ನು ಧರಿಸಿದ್ದರು. ಅವರ ಈ ಲೆಹೆಂಗಾವನ್ನು ಪೂರ್ಣಗೊಳಿಸಲು ಸುಮಾರು 6 ತಿಂಗಳು ತೆಗೆದುಕೊಂಡಿತು ಮತ್ತು ವರದಿಯ ಪ್ರಕಾರ ಅದರ ಸುಮಾರು ರೂ. 70-90 ಲಕ್ಷ.
Vicky Kaushal
ಕತ್ರಿನಾ ಕೈಫ್:
ಕತ್ರಿನಾ ಕೈಫ್ ಕೈಯಿಂದ ನೇಯ್ದ ರೇಷ್ಮೆ ಲೆಹೆಂಗಾವನ್ನು ಧರಿಸಿದ್ದರು. ಕತ್ರಿನಾ ಕೈಫ್ ಅವರು ನಟ ವಿಕ್ಕಿ ಕೌಶಲ್ ಅವರೊಂದಿಗೆ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾ, ರಣಥಂಬೋರ್‌ನಲ್ಲಿ ಸಪ್ತಪದಿ ತುಳಿಯುವ ಸಮಯದಲ್ಲಿ ಧರಿಸಿದ್ದ ಕೈಯಿಂದ ನೇಯ್ದ ಮಟ್ಕಾ ಸಿಲ್ಕ್ ಸಬ್ಯಸಾಚಿ ಲೆಹೆಂಗಾದ ಬೆಲೆ ರೂ. 17 ಲಕ್ಷ.
ಪ್ರಿಯಾಂಕಾ ಚೋಪ್ರಾ:
ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ನಿಕ್ ಜೋನಾಸ್ ಅವರನ್ನು ಜೋಧ್‌ಪುರದ ಭವ್ಯವಾದ ಉಮೈದ್ ಭವನ ಅರಮನೆಯಲ್ಲಿ ವಿವಾಹವಾದರು. ಅವರು ತನ್ನ ಹಿಂದೂ ವಿವಾಹಕ್ಕಾಗಿ ಕೆಂಪು ಸಬ್ಯಾ ಲೆಹೆಂಗಾವನ್ನು ಧರಿಸಿದ್ದರು. ವರದಿಯ ಪ್ರಕಾರ, ಆಕೆಯ ಮದುವೆಯ ಉಡುಪನ್ನು ಪೂರ್ಣಗೊಳಿಸಲು 3720 ಗಂಟೆಗಳನ್ನು ತೆಗೆದುಕೊಂಡಿತು ಮತ್ತು ಅದರ ಬೆಲೆ ರೂ. 18 ಲಕ್ಷ.
ಐಶ್ವರ್ಯಾ ರೈ:
ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಅಭಿಷೇಕ್ ಬಚ್ಚನ್ ಅವರೊಂದಿಗಿನ ವಿವಾಹಕ್ಕಾಗಿ ಸಾಂಪ್ರದಾಯಿಕ ಹಳದಿ ಮತ್ತು ಚಿನ್ನದ ಕಂಜೀವರಂ ಸೀರೆಯನ್ನು ಧರಿಸಿದ್ದರು. ಆಕೆಯ ಸೀರೆಯು ಸ್ವರೋವ್ಸ್ಕಿ ಹರಳುಗಳು ಮತ್ತು ಚಿನ್ನದ ಎಳೆಗಳಿಂದ ಕೂಡಿತ್ತು. ಬಾಲಿವುಡ್‌ಶಾದಿಗಳ ಪ್ರಕಾರ, ಆಕೆಯ ಸೀರೆಯ ಬೆಲೆ ರೂ. 75 ಲಕ್ಷ.
ಜೆನಿಲಿಯಾ ಡಿ’ಸೋಜಾ:
ನಟಿ ಜೆನಿಲಿಯಾ ಡಿಸೋಜಾ ಅವರು ರಿತೇಶ್ ದೇಶಮುಖ್ ಅವರನ್ನು ವಿವಾಹವಾದರು ಮತ್ತು ಚಿನ್ನದ ಕುಂದನ್ ಕೆಲಸದ ಸಾಂಪ್ರದಾಯಿಕ ಮಹಾರಾಷ್ಟ್ರ ಶೈಲಿಯ ಸೀರೆಯನ್ನು ಧರಿಸಿದ್ದರು, ಇದರ ಬೆಲೆ ಸುಮಾರು ರೂ. 17 ಲಕ್ಷ ಎಂದು ಹೇಳಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.