ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಬಾತ್‌ರೂಮ್‌ನಲ್ಲಿ ಅಳೋದ್ಯಾಕೆ?
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ತಮ್ಮ ಚಿತ್ರಗಳ ಫ್ಲಾಪ್ ಸಮಯ ಹಾಗೂ ಬ್ಲಾಕ್‌ಬಸ್ಟರ್ ವಾಪಸಾತಿ ಬಗ್ಗೆ ಮಾತನಾಡಿದ್ದಾರೆ. ಹೌದು, ಶಾರುಖ್ ಖಾನ್ ನೆನೆಸಿಕೊಂಡಿದ್ದಾರೆ. ಜಗತ್ತು ನಮ್ಮ ವಿರುದ್ಧ ಅಲ್ಲ, ನಮ್ಮ ತಪ್ಪುಗಳಿಂದ ಪಾಠ ಕಲಿಯಬೇಕು ಅಂತ ಕಿಂಗ್ ಖಾನ್ ಹೇಳಿದ್ದಾರೆ.

ಬಾಲಿವುಡ್‌ನ ಕಿಂಗ್ ಖಾನ್ ಅಂತ ಫೇಮಸ್ ಆಗಿರೋ ಶಾರುಖ್ ಖಾನ್ 2023 ರಲ್ಲಿ ಮೂರು ಬ್ಲಾಕ್‌ಬಸ್ಟರ್ ಮತ್ತು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಆದ್ರೆ ಇದಕ್ಕೂ ಮೊದಲು 5 ವರ್ಷ ಸಿನಿಮಾದಿಂದ ದೂರ ಉಳಿದಿದ್ದರು. ಮತ್ತು ಅದಕ್ಕೂ ಮೊದಲು ನಾಲ್ಕು ವರ್ಷಗಳ ಕಾಲ ಶಾರುಕ್ ಖಾನ್ ಅವರ ಯಾವ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚಿನ ಕಮಾಲ್ ಮಾಡಿರಲಿಲ್ಲ. ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ತಮ್ಮ ಫ್ಲಾಪ್ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ಯಾವುದೇ ವಿಷಯ ಸರಿಯಾಗಿ ಆಗದಿದ್ದಾಗ ಜಗತ್ತು ನಮ್ಮ ವಿರುದ್ಧ ಸಂಚು ಮಾಡ್ತಿದೆ ಅಂತ ಯಾರೂ ಅಂದುಕೊಳ್ಳಬಾರದು ಅಂತ ಹೇಳಿದ್ದಾರೆ. ಇದಕ್ಕೆ ಇನ್ನೂ ಹಲವು ಕಾರಣಗಳಿರಬಹುದು ಅಂತ ಅಭಿಪ್ರಾಯಪಟ್ಟಿದ್ದಾರೆ.
ದುಬೈನಲ್ಲಿ ನಡೆದ ಗ್ಲೋಬಲ್ ಫ್ರೇಟ್ ಸಮಿಟ್‌ನಲ್ಲಿ ಭಾಗವಹಿಸಿ ಮಾತನಾಡಿದ್ದ ಶಾರುಖ್ ಖಾನ್ , ತಮ್ಮ ಸಿನಿ ಜರ್ನಿ ಬಗ್ಗೆ ಮಾತಾಡಿದ್ದರು. ಈ ಸಂದರ್ಭದಲ್ಲಿ ಶಾರುಖ್ ಅವರನ್ನ ಅವರ ಕೆರಿಯರ್ ಬಗ್ಗೆ ಟೀಕೆ ಮಾಡಿದ್ದೀರಾ ಅಂತ ಕೇಳಿದಾಗ ಅವರು ಹೌದು ಅಂತ ಉತ್ತರಿಸಿದ್ದಾರೆ.
ಹೌದು, ನಾನು ನನ್ನ ಕೆರಿಯರ್ ಬಗ್ಗೆ ಟೀಕೆ ಮಾಡಿದ್ದೀನಿ. ಮತ್ತು ಯಾವಾಗ ನನಗೆ ಬೇಸರ ಆಗುತ್ತೋ ಆಗ ನಾನು ಬಾತ್ರೂಮ್‌ನಲ್ಲಿ ಅಳ್ತೀನಿ. ಇದನ್ನ ನಾನು ಯಾರಿಗೂ ತೋರಿಸಲ್ಲ. ಏಕೆಂದರೆ ನಾವು ಒಂದು ಮಿತಿಯವರೆಗೆ ಮಾತ್ರ ನಮ್ಮ ಬಗ್ಗೆ ಅನುಕಂಪ ತೋರಿಸಿಕೊಳ್ಳಬಹುದು. ಜಗತ್ತು ನಮ್ಮ ವಿರುದ್ಧ ಇದೆ ಅಥವಾ ನಮ್ಮಿಂದ ಏನೋ ತಪ್ಪಾಗಿದೆ ಅಥವಾ ಜಗತ್ತು ನಮ್ಮ ಕೆಲಸವನ್ನ ಹಾಳು ಮಾಡಲು ಸಂಚು ಮಾಡ್ತಿದೆ ಅಂತ ಅಂದುಕೊಳ್ಳಬಾರದು. ನಾವು ಏನೋ ತಪ್ಪು ಮಾಡಿದ್ದೀವಿ ಅಂತ ಒಪ್ಪಿಕೊಳ್ಳಬೇಕು. ಮತ್ತು ಮುಂದೆ ಸಾಗಬೇಕು. ಜೀವನದಲ್ಲಿ ನಿರಾಶೆ ಬರುತ್ತೆ, ಆದ್ರೆ ಒಂದು ಸಮಯ ಬರುತ್ತೆ ಅಲ್ಲಿವರೆಗೆ ನಾವು 'ಸುಮ್ಮನಿರಬೇಕು. ಈಗ ಎದ್ದು ನಿಂತು ಮುಂದೆ ಸಾಗು' ಅಂತ ಹೇಳ್ಕೋಬೇಕು ಎಂದು ಹೇಳಿದ್ದರು.
ಜಗತ್ತು ನಿಮ್ಮ ವಿರುದ್ಧ ಅಲ್ಲ. ಜೀವನ ಸಾಗ್ತಾನೇ ಇರುತ್ತೆ. ನಾವು ನಮ್ಮನ್ನ ಚಿಟ್ಟೆ ಅಂತ ಅಂದುಕೊಳ್ಳಬಹುದು. ನಾನು ಒಳ್ಳೆ ಕಾಣುವ ಚಿಟ್ಟೆ. ಆದ್ರೆ ನಾನು ಚಿಟ್ಟೆನೇ. ಕೆಲವೊಮ್ಮೆ ಗಾಳಿ ನಮ್ಮನ್ನ ದೂರ ಕೊಂಡೊಯ್ಯುತ್ತೆ. ಜೀವನ ನಾವು ಮಾಡೋದನ್ನೇ ಮಾಡುತ್ತೆ. ನಮ್ಮ ವೈಫಲ್ಯಕ್ಕೆ ಜೀವನವನ್ನ ದೂಷಿಸಬಾರದು. ನಾವು ಏನೋ ತಪ್ಪು ಮಾಡಿದ್ದೀವಿ ಅಥವಾ ಬಿಸಿನೆಸ್‌ನಲ್ಲಿ ಏನೋ ತಪ್ಪಾಗಿದೆ ಅಥವಾ ಸ್ಟ್ರಾಟಜಿ ಮತ್ತು ಮಾರ್ಕೆಟಿಂಗ್‌ನಲ್ಲಿ ಏನೋ ತಪ್ಪಾಗಿದೆ ಅಂತ ನೆನಪಿಟ್ಟುಕೊಳ್ಳಬೇಕು. ಮತ್ತು ಅದನ್ನ ಸರಿ ಮಾಡಿಕೊಳ್ಳಬೇಕು. ಮತ್ತೆ ಪ್ರಯತ್ನ ಮಾಡಿ ವಾಪಸ್ ಬರಬೇಕು ಎಂದು ಶಾರುಕ್ ಖಾನ್ ಹೇಳಿದ್ದರು.
2014 ರಲ್ಲಿ ಬಂದ 'ಹ್ಯಾಪಿ ನ್ಯೂ ಇಯರ್' ವರೆಗೂ ಶಾರುಖ್ ಖಾನ್ ಕೆರಿಯರ್ ಚೆನ್ನಾಗಿಯೇ ಇತ್ತು. ಆದ್ರೆ 2015ರಲ್ಲಿ ಸೆಮಿ ಹಿಟ್ 'ದಿಲ್ವಾಲೆ' ಸಿನಿಮಾದಿಂದ ಅವರ ಕೆರಿಯರ್ ಡಲ್ ಆಗೋಕೆ ಶುರುವಾಯ್ತು. ಮತ್ತು 'ಫ್ಯಾನ್', 'ಜೀರೋ' ಸಿನಿಮಾಗಳು ಫ್ಲಾಪ್ ಆದವು. ಶಾರುಖ್ ಖಾನ್ 5 ವರ್ಷ ಬ್ರೇಕ್ ತಗೊಂಡು 2013 ರಲ್ಲಿ 'ಪಠಾಣ್' ಸಿನಿಮಾದ ಮೂಲಕ ಭರ್ಜರಿ ವಾಪಸಾತಿ ಮಾಡಿದ್ರು. ನಂತರ 'ಜವಾನ್' ಮತ್ತು 'ಡಂಕಿ' ಸಿನಿಮಾಗಳು ಹಿಟ್ ಆದವು. ಶಾರುಖ್ ಮುಂದಿನ ಸಿನಿಮಾ 'ಕಿಂಗ್', ಈಗ ಶೂಟಿಂಗ್ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.