ತಾಯಿ,ತಂಗಿ ಇಡೀ ಕುಟುಂಬವನ್ನು ತಂದೆ ಗುಂಡಿಕ್ಕಿ ಕೊಂದಾಗ ಬದುಕುಳಿದ ನಟ ಈಗ ಹೇಗಿದ್ದಾರೆ?
ತನ್ನ 21 ನೇ ವಯಸ್ಸಿನಲ್ಲಿ ಕಾಜೋಲ್ ಜೊತೆಗೆ ನಟಿಸುವ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ ಈ ನಟನ ಮೊದಲ ಚಿತ್ರವು ಯಶಸ್ವಿಯಾಯಿತು. ಮತ್ತು ಬಾಲಿವುಡ್‌ನಲ್ಲಿ ವೃತ್ತಿಜೀವನವನ್ನು ಮಾಡಲು ಸಹಾಯ ಮಾಡಿತು. ಅವರ ಚಲನಚಿತ್ರಗಳ ಹಾದಿಯು ತುಂಬಾ ಹೋರಾಟಗಳಿಂದ ತುಂಬಿತ್ತು. ಜೊತೆಗೆ ಅನಿರೀಕ್ಷಿತವಾಗಿತ್ತು. ಅವರ 20 ನೇ ವಯಸ್ಸಿನ ಹುಟ್ಟುಹಬ್ಬದಂದು ಯಾವುದೇ ನಟರು ಕಂಡಿರದ ದುರಂತ ಅವರ ಜೀವನದಲ್ಲಿ ನಡೆದು ಹೋಯ್ತು. ತಮ್ಮ ತಂದೆಯಿಂದಲೇ ಗುಂಡಿನ ದಾಳಿಗೆ ತುತ್ತಾಗಿ ತನ್ನ ತಾಯಿ ಸಹೋದರಿ ಅವರನ್ನು ಕಳೆದುಕೊಂಡರು. ನಟ ಮಾತ್ರ ಬದುಕಿ ಬಂದಿದ್ದರು. ಯಾರು ಆ ನಟ ಇಲ್ಲಿದೆ ಡೀಟೆಲ್ಸ್.
ಕಮಲ್ ಸದನಾ ಅವರು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಬ್ರಿಜ್ ಸದನಾ ಅವರ ಪುತ್ರ. ತಕ್ದೀರ್, ಏಕ್ ಸೆ ಬದ್ಕರ್ ಏಕ್ ಮತ್ತು ಯಾಕೀನ್‌ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಬ್ರಿಜ್ 1960 ಮತ್ತು 70 ರ ದಶಕದಲ್ಲಿ ಯಶಸ್ವಿ ಚಲನಚಿತ್ರ ನಿರ್ಮಾಪಕರಾಗಿದ್ದರು. ಆದರೆ 80 ರ ದಶಕದ ಮಧ್ಯಭಾಗದಲ್ಲಿ ಅವರ ಚಲನಚಿತ್ರಗಳು ವಿಫಲವಾಗಲು ಆರಂಭಿಸಿತ್ತು.
1990 ರಲ್ಲಿ, ಕಮಲ್ ಅವರ 20 ನೇ ಹುಟ್ಟುಹಬ್ಬದಂದು, ಬ್ರಿಜ್ ಸದನಾ ಮತ್ತು ಅವರ ಪತ್ನಿ ಸಯೀದಾ ಖಾನ್ ನಡುವೆ ಬಹುದೊಡ್ಡ ಜಗಳ ಪ್ರಾರಂಭವಾಯಿತು. ಬರ್ತ್ ಡೇ ಪಾರ್ಟಿಗೆ ವ್ಯವಸ್ಥೆ ಮಾಡುತ್ತಿದ್ದ ಕಮಲ್ ಗೆ ಗುಂಡಿನ ಸದ್ದು ಕೇಳಿಸಿತು. ಮನೆಯ ಕೆಳಗಡೆ ಹೋಗಿ ನೋಡಿದರೆ ತಂದೆ - ಕೋಪದ ಭರದಲ್ಲಿ - ತನ್ನ ತಾಯಿ ಮತ್ತು ಸಹೋದರಿ ಇಬ್ಬರನ್ನೂ ಗುಂಡಿಕ್ಕಿ ಕೊಂದಿದ್ದರು.
ಕುಡಿದ ಅಮಲಿನಲ್ಲಿದ್ದ ಬ್ರಿಜ್ ಸದನಾ, ಮಗನ ಮೇಲೂ ಗುಂಡು ಹಾರಿಸಿದರು ಆದರೆ ತಪ್ಪಿಸಿಕೊಂಡು ಪ್ರಜ್ಞಾಹೀನರಾದರು. ತಂದೆ ಬ್ರಿಜ್ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಪಾರ್ಟಿಗೆ ಬಂದಿದ್ದ ಸ್ನೇಹಿತರು ಎಲ್ಲರನ್ನು ಆಸ್ಪತ್ರೆಗೆ ಕರೆದೊಯ್ದರು. 20 ವರ್ಷದ ಯುವಕ ಕಮಲ್ ಮಾತ್ರ ಬದುಕುಳಿದಿದ್ದರು. ಘಟನಾ ಸಮಯದಲ್ಲಿ ಬ್ರಿಜ್ ಕುಡಿದಿದ್ದರು ಎಂದು ಶವಪರೀಕ್ಷೆಯಿಂದ ತಿಳಿದುಬಂದಿದೆ.
ಎರಡು ವರ್ಷಗಳ ನಂತರ, ಕಮಲ್ ತನ್ನ ಚಲನಚಿತ್ರ ವೃತ್ತಿಜೀವನವನ್ನು 16 ವರ್ಷದ ಕಾಜೋಲ್ ಅವರ ಜೊತೆಗೆ ಬೇಕುಡಿ ಎಂಬ ಚಿತ್ರದಲ್ಲಿ ನಡಿಸುವ ಮೂಲಕ ಆರಂಭಿಸಿದರು. ಚಿತ್ರವು ಯಶಸ್ವಿಯಾಯಿತು ಮತ್ತು ಯುವ ನಟನಿಗೆ ಅನೇಕ ಹೆಸರು ತಂದು ಕೊಟ್ಟಿತು.
ಆದರೆ ಕಮಲ್ ಅವರ ನಂತರದ ಚಿತ್ರಗಳು ಉತ್ತಮ ಪ್ರದರ್ಶನ ನೀಡಲಿಲ್ಲ. 90 ರ ದಶಕದ ಉತ್ತರಾರ್ಧದಲ್ಲಿ ಸತತವಾಗಿ ವಿಫಲವಾದ ನಂತರ, ನಟ 2000 ರಲ್ಲಿ ಬಿಡುಗಡೆಯಾದ ಕಾಲಿ ಟೋಪಿ ಲಾಲ್ ರುಮಾಲ್ ನಂತರ ಚಲನಚಿತ್ರ ಬದುಕಿನಿಂದ ವಿರಾಮ ತೆಗೆದುಕೊಂಡರು. ಅವರು 2005 ರಲ್ಲಿ ತಮ್ಮ ನಿರ್ದೇಶನದ ಕರ್ಕಾಶ್‌ನೊಂದಿಗೆ ಬಾಲಿವುಡ್‌ಗೆ ಮರಳಿದರು ಮತ್ತು 2006 ರಲ್ಲಿ ಟಿವಿ ಶೋ ಕಸಾಮ್ ಸೇ ನಲ್ಲಿ ಪೋಷಕ ಪಾತ್ರವನ್ನು ಸಹ ನಿರ್ವಹಿಸಿದರು.
2007 ರಲ್ಲಿ, ಅವರು ವಿಕ್ಟೋರಿಯಾ ನಂ 203 ಅನ್ನು ನಿರ್ಮಿಸಿದರು, ಇದು ಅವರ ತಂದೆಯ ಅದೇ ಹೆಸರಿನ ಚಲನಚಿತ್ರದ ರಿಮೇಕ್ ಆದರೆ ಅದು ಉತ್ತಮವಾಗಿ ಪ್ರದರ್ಶನ ಕಾಣಲಿಲ್ಲ. ಕಮಲ್ 2014 ರ ರೋರ್ ಚಲನಚಿತ್ರವನ್ನು ನಿರ್ದೇಶಿಸಿದರು, ಇದು ನೋರಾ ಫತೇಹಿ ಅವರ ಬಾಲಿವುಡ್ ಚೊಚ್ಚಲತೆಯನ್ನು ಗುರುತಿಸಿತು. ನಟನಾಗಿ, ಅವರು 15 ವರ್ಷಗಳ ನಂತರ 2022 ರ ಬಿಡುಗಡೆಯಾದ ಸಲಾಂ ವೆಂಕಿ ಮೂಲಕ ಪುನರಾಗಮನ ಮಾಡಿದರು.
ಸಲಾಂ ವೆಂಕಿ ಚಿತ್ರದಲ್ಲಿ, ಅವರು 30 ವರ್ಷಗಳ ನಂತರ ತೆರೆಮೇಲೆ ಕಾಜೋಲ್ ಜೊತೆ ಮತ್ತೆ ಒಂದಾದರು. ಚಿತ್ರದಲ್ಲಿ ಅಮೀರ್ ಖಾನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರದ ಬದುಕಿನಿಂದ ವಿರಾಮ ಪಡೆದುಕೊಂಡ ಸಮಯದಲ್ಲಿ ಕಮಲ್ ಮೇಕಪ್ ಕಲಾವಿದೆ ಲಿಸಾ ಜಾನ್ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬ ಮಗ ಅಂಗತ್ ಮತ್ತು ಮಗಳು ನಮ್ರತಾ, ಕಮಲ್ ಅವರ ದಿವಂಗತ ಸಹೋದರಿಯ ಹೆಸರನ್ನು ಇಡಲಾಗಿದೆ. ಕಮಲ್ ಅವರ ನಿರ್ಮಾಣ ಸಂಸ್ಥೆ 'ಅಂಗತ್ ಆರ್ಟ್ಸ್ ಪ್ರೈವೇಟ್ ಲಿಮಿಟೆಡ್' ಅವರ ಮಗನ ಹೆಸರನ್ನು ಇಡಲಾಗಿದೆ.