10 ವರ್ಷದ ಮಕ್ಕಳಿಗೆ ಮೊಬೈಲ್ ಕೊಟ್ಟಿ ಅಕ್ಕನ ಮೇಲೆ ಕೋಪ ಮಾಡಿಕೊಂಡ ಅಭಿಷೇಕ್ ಬಚ್ಚನ್!
ಈ ಜನರೇಷನ್ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ಅಭಿಷೇಕ್ ಬಚ್ಚನ್ ಕಿವಿ ಮಾತು ಹೇಳಿದ್ದಾರೆ.
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಟೀನೇಜ್ ಲೈಫ್ ಮತ್ತು ಮಕ್ಕಳನ್ನು ಹೇಗೆ ಸಂಭಾಳಿಸಬೇಕು ಎಂದು ಉತ್ತರಿಸಿದ್ದಾರೆ.
ಮಗಳ ಪಾಲನೆ ವಿಷ್ಯ ಬಂದಾಗ ನಾನು ಹೆಚ್ಚು ಜವಾಬ್ದಾರಿ ಹೊರಲು ಹೋಗೋದಿಲ್ಲ ಎಂದ ಅಭಿಷೇಕ್, ಪತ್ನಿ ಐಶ್ವರ್ಯ ರೈ ಬಚ್ಚನ್ ಈ ಎಲ್ಲ ಕೆಲಸ ಮಾಡ್ತಾರೆ, ಹಾಗಾಗಿ ನನ್ನ ಕೆಲಸ ಮಾಡಲು ನನಗೆ ಅವಕಾಶ ಸಿಗುತ್ತದೆ ಎಂದಿದ್ದಾರೆ.
ಪಾಲಕರಿಗೆ ಯಾವುದಾದ್ರೂ ಟಿಪ್ಸ್ ನೀಡ್ತೀರಾ ಎಂದು ಸಂದರ್ಶನಕಾರರು ಕೇಳಿದಾಗ ಅದಕ್ಕೆ ಉತ್ತರ ನೀಡಿದ ಅಭಿಷೇಕ್ ಬಚ್ಚನ್, ಪ್ರತಿ Generation ವೇಗವಾಗಿ ಪಕ್ವವಾಗುತ್ತದೆ.
ಪ್ರಾಯಶಃ, ನಾವು ಮಕ್ಕಳಾಗಿದ್ದಾಗ, ನಮ್ಮ ಪೋಷಕರು ನಾವು ತುಂಬಾ ವೇಗವಾಗಿ ಬೆಳೆಯುತ್ತಿದ್ದೇವೆ ಎಂದು ಭಾವಿಸಿದ್ದರು. ಈ ಪೀಳಿಗೆಯ ಜನರು ನಮಗಿಂತ ಬಹಳಷ್ಟು ಮುಂದಿದ್ದಾರೆ.
ನಾವು ಈ ಮಟ್ಟಕ್ಕೆ ತಲುಪಲು ತೆಗೆದುಕೊಂಡ ಪ್ರಕ್ರಿಯೆಯನ್ನು ಅವರು ನೋಡಲೇ ಇಲ್ಲ. ಅದಕ್ಕೊಂದು ಉದಾಹರಣೆ ನೀಡ್ತೇನೆ ಎನ್ನುವ ಅಭಿಷೇಕ್, ನನಗೆ ಒಬ್ಬ ಸೋದರಳಿಯ ಮತ್ತು ಸೊಸೆ ಇದ್ದಾರೆ. ಅವರಿಗೆ 10 ವರ್ಷವಾದಾಗ ಮೊಬೈಲ್ ಫೋನ್ ನೀಡಲಾಗಿತ್ತು ಎಂದಿದ್ದಾರೆ.
10ನೇ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ನೀಡಿದ ವೇಳೆ ಅಭಿಷೇಕ್ ಬಚ್ಚನ್ ತಮ್ಮ ಸಹೋದರಿ ಶ್ವೇತಾ ಬಚ್ಚನ್ ಗೆ ಪ್ರಶ್ನೆ ಮಾಡಿದ್ದರಂತೆ. ಆಗ ಶ್ವೇತಾ, ನೀನು ಎಷ್ಟನೇ ವಯಸ್ಸಿನಲ್ಲಿ ಮೊಬೈಲ್ ಪಡೆದೆ, ನಿಮ್ಮ ತಂದೆ ಅಮಿತಾಬ್ ಬಚ್ಚನ್ ಎಷ್ಟನೇ ವಯಸ್ಸಿನಲ್ಲಿ ಮೊಬೈಲ್ ಪಡೆದ್ರು ಎಂಬುದು ಗೊತ್ತಾ ಎಂದು ಕೇಳಿದ್ದಲ್ಲದೆ,
ನೀನು 22ನೇ ವಯಸ್ಸಿನಲ್ಲಿ ಮೊಬೈಲ್ ಫೋನ್ ಪಡೆದಿದ್ದಕ್ಕೆ ಅವರು ಕೋಪಗೊಂಡಿದ್ದರು ಎಂದೂ ಹೇಳಿದ್ದರಂತೆ. ಅಭಿಷೇಕ್ ಬಚ್ಚನ್ ಪ್ರಕಾರ, ಈ ಹೊಸ ಪೀಳಿಗೆಗೆ ಉತ್ತಮ ತಿಳುವಳಿಕೆ ಇದೆ. ಎಲ್ಲಾ ಮಾಹಿತಿ ಬೆರಳ ತುದಿಯಲ್ಲಿರುವ ಜಗತ್ತಿನಲ್ಲಿ ಅವರು ಜನಿಸಿದ್ದಾರೆ.
ನಾನು ಮೊದಲ ಬಾರಿಗೆ ತಾಜ್ ಮಹಲ್ ನೋಡಿದ್ದು ನನಗೆ ಇನ್ನೂ ನೆನಪಿದೆ. ಆದರೆ ಈಗಿನ ಪೀಳಿಗೆಗೆ ಅದು ವಿಶೇಷವಲ್ಲ. ಅವರು ಇಂಟರ್ನೆಟ್ ನಲ್ಲಿಯೇ ತಾಜ್ ಮಹಲ್ ನೋಡ್ತಾರೆ. ಹಾಗಂತ ಅವರು ಅಸಂಬದ್ಧರಲ್ಲ.
ಅವರು ಹೆಚ್ಚು ಉತ್ತಮವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಆದ್ದರಿಂದ ಅವರ ಆಶ್ಚರ್ಯವು ನಮ್ಮ ಮಟ್ಟಕ್ಕಿಂತ ಹೆಚ್ಚಿದೆ ಎನ್ನುತ್ತಾರೆ ಅಭಿಷೇಕ್.